ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ: ಉದ್ಯೋಗದ ನೆಪದಲ್ಲಿ ಯುವತಿಯರನ್ನು ಬಲೆಗೆ ಕೆಡವುತ್ತಿದ್ದ ಮಹಿಳೆ ಬಂಧನ!

ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಬಡ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಸರಸ್ವತಿ ಆಲಿಯಾಸ್ ಜ್ಯೋತಿ ಅಲಿಯಾಸ್ ಸ್ವಾತಿ ಬಂಧಿತ ಆರೋಪಿಯಾಗಿದ್ದು, ಹೊರರಾಜ್ಯಗಳಿಂದ ಬಡ ಹಿನ್ನೆಲೆಯ ಯುವತಿಯರನ್ನು “ಉದ್ಯೋಗವಿದೆ” ಎಂಬ ನಂಬಿಕೆಯೊಂದಿಗೆ ಬೆಂಗಳೂರಿಗೆ ಕರೆತರುವುದಾಗಿತ್ತು.

ಆದರೆ ಬೆಂಗಳೂರಿಗೆ ಬಂದ ಬಳಿಕ ಯುವತಿಯರಿಗೆ ಯಾವುದೇ ಕೆಲಸ ನೀಡದೇ, ಹಣದ ಆಮಿಷ ತೋರಿಸಿ, ಅವರನ್ನು ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಳು. ‘ಬಾಡಿ ಸ್ಕ್ವೇರ್ ಸ್ಪಾ’ ಎಂಬ ಹೆಸರಿನಲ್ಲಿ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರವಾಗಿ ಅಡ್ಡೆ ಹಾಕಿ ದಂಧೆ ನಡೆಸಲಾಗುತ್ತಿತ್ತು.
ಅದಲ್ಲದೆ ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಂಸ ದಂಧೆ ನಡೆಸ್ತಿದ್ದ ಸರಸ್ವತಿ. ಬಾಡಿ ಸ್ಕ್ವೇರ್ ಸ್ಪಾ ಹೆಸರಲ್ಲಿ ಸ್ಪಾ ತೆರದು ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ಲು. ಸದ್ಯ ಸಿಸಿಬಿ ಮಹಿಳಾ ಸಂರಕ್ಷಣಾ ಘಟಕ ದಿಂದ ಸರಸ್ವತಿಯನ್ನು ಬಂಧಿಸಲಾಗಿದ್ದು, ವೇಶ್ಯಾವಾಟಿಕೆ ಅಡ್ಡೆಯಲ್ಲಿ ಇದ್ದ ಯುವತಿಯರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
