Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಹಾಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಚಿಕ್ಕಮಗಳೂರಿನ ಅರ್ಚಕ ಮನೆಗೆ ವಾಪಸ್

Spread the love

ಚಿಕ್ಕಮಗಳೂರು: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 2025ರಂದು ನಡೆದ ಮಹಾಕುಂಭಮೇಳದಲ್ಲಿ ನಾಪಾತ್ತೆಯಾಗಿದ್ದ ಚಿಕ್ಕಮಗಳೂರಿನ ಅರ್ಚಕ ಆರು ತಿಂಗಳ ಬಳಿಕ ಪತ್ತೆಯಾಗಿದ್ದಾರೆ.

ಕಡೂರು ತಾಲ್ಲೂಕಿನ ತಂಗಲಿ ಗ್ರಾಮದ ಚನ್ನಕೇಶವ ಸ್ವಾಮಿ ದೇವಾಲಯದ ಅರ್ಚಕ ನರಸಿಂಹಮೂರ್ತಿ ಅವರು ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಕುಟುಂಬದ ಕಣ್ಣುತಪ್ಪಿ ನಾಪತ್ತೆಯಾಗಿದ್ದರು. ಇದೀಗ ಆರು ತಿಂಗಳ ಬಳಿಕ ಮತ್ತೇ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ. ಮುಂಬೈನ ಶಾರದಾ ರಿಹ್ಯಾಬಿಲಿಟೇಷನ್ ಸಂಸ್ಥೆಯ ಮೂಲಕ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.

ನರಸಿಂಹಮೂರ್ತಿಯವರ ಪುತ್ರ ಬದರೀನಾಥ್ ಅವರು ತಮ್ಮ ತಂದೆಯ ಪತ್ತೆಗಾಗಿ ಪ್ರಯಾಗ್‌ರಾಜ್‌ನಲ್ಲಿ ನಾಲ್ಕು ದಿನ ಹುಡುಕಾಡಿದ್ದಾರೆ. ಆದರೆ ಯಾವುದೇ ಸುಳಿವು ಸಿಗದಿದ್ದಾಗ ಕುಟುಂಬದೊಂದಿಗೆ ಊರಿಗೆ ವಾಪಾಸ್ಸಾಗಿದ್ದಾರೆ.

ಇನ್ನೂ ಕೆಲ ದಿನಗಳ ಬಳಿಕ ಒಂಟಿಯಾಗಿ ಮತ್ತೇ ಪ್ರಯಾಗ್‌ರಾಜ್‌ಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಆದರೆ ಯಶಸ್ಸು ದೊರೆಯಲಿಲ್ಲ. ನಾಪತ್ತೆಯಾಗಿದ್ದ ನರಸಿಂಹಮೂರ್ತಿ ಅವರು ಮುಂಬೈನ ಶಾರದಾ ರಿಹ್ಯಾಬಿಲಿಟೇಷನ್‌ ಸಂಸ್ಥೆಯ ಆಶ್ರಯದಲ್ಲಿ ಆರೋಗ್ಯವಾಗಿದ್ದರು. ಇದೀಗ ಈ ಸಂಸ್ಥೆ ಮೂಲಕ ಮತ್ತೇ ನರಸೊಂಹಮುರ್ತಿ ಅವರು ಕುಟುಂಬವನ್ನು ಸೇರಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *