ಮುಜರಾಯಿ ದೇವಸ್ಥಾನಗಳಲ್ಲಿ ಸೇವೆಗಳ ಬೆಲೆ ಹೆಚ್ಚಳ: ಭಕ್ತರಿಗೆ ದೇವರ ಸೇವೆ ಇನ್ನಷ್ಟು ದುಬಾರಿ

ಬೆಂಗಳೂರು: ರಾಜ್ಯ ಸರ್ಕಾರದ (State Government) ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ (Temples) ಇನ್ಮುಂದೆ ಪ್ರಮುಖ ಸೇವೆಗಳಿಗೂ (Services) ದುಬಾರಿ ದರ ಹೇರಲು ಸರ್ಕಾರ (Government) ಮುಂದಾಗಿದ್ದು, ಈ ನಡೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಎ’ ಗ್ರೇಡ್ ದೇವಸ್ಥಾನಗಳಲ್ಲಿ ದರ ಹೆಚ್ಚಳ ಮಾಡಲಾಗುತ್ತಿದ್ದು, ದೇವರಿಗೆ ಸಲ್ಲಿಸುವಂತಹ ಸೇವೆಗಳ ದರದಲ್ಲೂ ದುಬಾರಿ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ನಾಗಪ್ರತಿಷ್ಠೆಗೆ 400 ರೂಪಾಯಿಂದ 500ರವರೆಗೂ ಸೇವೆಗಳ ದರವನ್ನು ಮುಜರಾಯಿ ಇಲಾಖೆಯಿಂದ ಹೆಚ್ಚಿ ಸಲಾಗಿದೆ. ಈ ಮೂಲಕ ಭಕ್ತರಿಗೆ ದೇವರ ಸೇವೆ ಇನ್ಮುಂದೆ ದುಬಾರಿಯಾಗಲಿದೆ. ಕಟೀಲು ದುರ್ಗಾಪರಮೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ .. ಮಲೆ ಮಹದೇಶ್ವರ ಸೇರಿದಂತೆ ಪ್ರಸಿದ್ಧ ದೇವಾಲಯಗಳಲ್ಲಿ ವಿವಿಧ ಪೂಜೆಗಳ ದರ ಹೆಚ್ಚಿಸಲಾಗಿದೆ.
ಅಶ್ಲೇಷ ಪೂಜೆಯ ಸೇವೆಗಳನ್ನು ಹೆಚ್ಚಿಸಲಾಗಿದೆ. ಪುಷ್ಪಾರ್ಚನೆ ಸೇವೆಗೆ ರೂ.120ರಿಂದ ರೂ.200ಕ್ಕೆ ಹೆಚ್ಚಳವಾಗಿದ್ದು, ಮುಜರಾಯಿ ದೇಗುಲಗಳ ಸೇವಾ ದರ ಡಬಲ್ ಆಗಿದ್ದರಿಂದ ಭಕ್ತರಿಗೆ ಆಘಾತವಾಗಿದೆ. ಮುಂದಿನ ತಿಂಗಳ ಅಂದರೆ ಅ.1ರಿಂದಲೇ ಈ ಪರಿಷ್ಕೃತ ಪೂಜಾ ದರ ಅನ್ವಯಿಸಲಿದೆ ಎಂದು ವರದಿಯಾಗಿದೆ.
ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ..
ಪರಿಷ್ಕೃತ ದರ ನೋಡುವುದಾದರೆ ಮಹಾರಥೋತ್ಸವ ಸೇವೆಗೆ ರೂ.25,000, ಚಿಕ್ಕರಥೋತ್ಸವಕ್ಕೆ 12 ಸಾವಿರ, ಚಂದ್ರಮಂಡಲ ಉತ್ಸವಕ್ಕೆ 9,500ರೂ., ಹೂವಿನ ತೇರಿನ ಉತ್ಸವಕ್ಕೆ 8,700, ಶೇಷ ವಾಹನಯುಕ್ತ ಭಂಡಿ ಉತ್ಸವ- 4,500, ಪಂಚಾಮೃತ ಮಹಾಭಿಷೇಕ ರೂ.6000, ದೀಪಾರಾಧನೆಯುಕ್ತ ಪಾಲಕಿ (ಪಲ್ಲಕ್ಕಿ) ಉತ್ಸವ 5,000, ಪಲ್ಲಕ್ಕಿ ಉತ್ಸವಯುಕ್ತ ಮಹಾಪೂಜೆ 4,000, ಇಡೀ ದಿನ ಸಪರಿವಾರ ಸೇವೆಗೆ 4050, ಮಹಾಪೂಜೆ ( ಇಡೀ ದಿನದ ವಿನಿಯೋಗ) -400, ಮಹಾಪೂಜೆ (ಮಧ್ಯಾಹ್ನದ ವಿನಿಯೋಗ) 250 ರೂಪಾಯಿವರೆಗೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ:
ಪಂಚಕಜ್ಜಾಯ ರೂ.40, ಲಡ್ಡು ಪ್ರಸಾದ-60, ಸೆಟ್ ಪ್ರಸಾದ (ಸಮೂಹಪ್ರಸಾದ) 150 ರೂ., ತೀರ್ಥಬಾಟ್ಲಿ-15ರೂ., ತ್ರಿಮಧುರ ನೈವೇದ್ಯ 90ರೂ, ಕಾರ್ತಿಪೂಜೆ 25 ರೂ, ಹೂವಿನ ಪೂಜೆಗೆ 220 ರೂಪಾಯಿ, ಕುಂಕುಮಾರ್ಚನೆಗೆ 50ರೂ, ದುರ್ಗಾನಮಸ್ಕಾರ ಸೇವೆಗೆ 140 ರೂಪಾಯಿ, ರಂಗಪೂಜೆ 6000, ಸರ್ವಸೇವೆ-2000, ಮಹಾಪೂಜೆ-450ರೂ., ಸೀರೆ ಅಲಂಕಾರ (ಸೀರೆ ಪ್ರತ್ಯೇಕ)-70, ಅಲಂಕಾರ ಪೂಜೆ-230, ಸಹಸ್ರನಾಮಾರ್ಚನೆ-110 ರೂ., ಪಂಚಾಮೃತಾಭಿಷೇಕ-140 ರೂ, ಶ್ರೀಸೂಕ್ತಾಭಿಷೇಕ-70ರೂ., ನಂದಾದೀಪ-200, ಕ್ಷೀರಪಾಯಸ-170, ತೀರ್ಥ ಸ್ನಾನ-200 ರೂ, ನಾಮಕರಣ-200 ರೂ, ಅನ್ನಪ್ರಾಶನ-60, ತುಲಾಭಾರ ಕಾಣಿಕೆ-450, ಅಕ್ಷರಾಭ್ಯಾಸ-90, ರಥಹೂವಿನ ಪೂಜೆ-180, ಮೃಷ್ಟಾನ್ನ-750 ರೂ., ಅನ್ನದಾನ ಸೇವೆ-2500 ರೂ, ಮಹಾ ಅನ್ನದಾನ ಸೇವೆಗೆ 20,000 ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ವರದಿಯಾಗಿದೆ.