ಮಹಿಳಾ ವಿಶ್ವಕಪ್ ಚಾಂಪಿಯನ್ಸ್ ತಂಡದಿಂದ ರಾಷ್ಟ್ರಪತಿ ಭೇಟಿ: ದ್ರೌಪದಿ ಮುರ್ಮು ಅವರಿಂದ ಆಟಗಾರ್ತಿಯರಿಗೆ ಅಭಿನಂದನೆ

ನವದೆಹಲಿ: 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತ ಟೀಂ ಇಂಡಿಯಾ ಆಟಗಾರ್ತಿಯರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾದರು.

ಗುರುವಾರ (ನ.6) ಟೀಂ ಇಂಡಿಯಾ ಆಟಗಾರ್ತಿಯರು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ವೇಳೆ ಮುರ್ಮು ತಂಡವನ್ನು ಅಭಿನಂದಿಸಿ, ಇತಿಹಾಸ ಸೃಷ್ಟಿಸುವ ಮೂಲಕ ಮುಂದಿನ ಯುವಪೀಳಿಗೆಗೆ ಮಾದರಿಯಾಗಿದ್ದೀರಿ. ನೀವೆಲ್ಲ ಬೇರೆ-ಬೇರೆ ಪ್ರದೇಶ, ವಿಭಿನ್ನ ಹಿನ್ನೆಲೆಗಳಿಂದ ಬಂದು ಇಂದು ಭಾರತದ ಪರವಾಗಿ ಆಡಿದ್ದೀರಿ. ನಿಮ್ಮನ್ನು ನೋಡಿದರೆ ಭಾರತದ ಪ್ರತಿಬಿಂಬ ಎನ್ನುವಂತೆ ಕಾಣುತ್ತದೆ ಎಂದು ತಿಳಿಸಿದರು
ಈ ವೇಳೆ ರಾಷ್ಟ್ರಪತಿಯೊಂದಿಗೆ ಟೀಂ ಇಂಡಿಯಾದ ಆಟಗಾರ್ತಿಯರೆಲ್ಲರೂ ಗ್ರೂಪ್ ಫೋಟೋ ತೆಗೆಸಿಕೊಂಡರು. ಬಳಿಕ ಮುರ್ಮು ಅವರಿಗೂ ಕೂಡ ಆಟಗಾರ್ತಿಯರೆಲ್ಲರೂ ಸಹಿಹಾಕಿದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.
ಬುಧವಾರ (ನ.5) ಟೀಂ ಇಂಡಿಯಾ ಪ್ರಧಾನಿ ನಿವಾಸದಲ್ಲಿ ಮೋದಿಯವರನ್ನು ಭೇಟಿಯಾಗಿ, ಅವರೊಂದಿಗೆ ಮಾತುಕತೆ ನಡೆಸಿದ್ದರು