ಮೊಹರಂ ಆಚರಣೆಗೆ ಸಿದ್ಧತೆ: ಜುಲೈ 7 ರಂದು ಸಾರ್ವಜನಿಕ ರಜೆ ಸಾಧ್ಯತೆ, ಚಂದ್ರನ ದರ್ಶನದ ಮೇಲೆ ಅಂತಿಮ ನಿರ್ಧಾರ!

ದೇಶದಲ್ಲಿ ಜನರು ಮೊಹರಂ ಅನ್ನು ಅತ್ಯಂತ ವೈಭವದಿಂದ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಜುಲೈ 7 ರಂದು ಮೊಹರಂ ಆಚರಿಸಲಾಗುವುದು. ಹಾಗಾಗಿ ಜುಲೈ 7 ರಂದು ಸಾರ್ವಜನಿಕ ರಜೆ ಘೋಷಿಸುವ ಸಾಧ್ಯತೆ ಇದೆ. ಆದರೆ ಚಂದ್ರನ ದರ್ಶನಕ್ಕೆ ಅನುಗುಣವಾಗಿ ದಿನಾಂಕ ಬದಲಾಗಲೂ ಬಹುದು.

ಮೊಹರಂ ಇಸ್ಲಾಮಿಕ್ ಹೊಸ ವರ್ಷದ ಆರಂಭವಾಗಿದೆ. ಹಾಗಾಗಿ ಈ ಹಬ್ಬಕ್ಕೆ ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಿಗೆ ರಜೆ ಇರುವುದು.
ಮಾಹಿತಿಯ ಪ್ರಕಾರ, ಈ ತಿಂಗಳು ಮುಸ್ಲಿಮರಿಗೆ ಬಹಳ ವಿಶೇಷವಾಗಿದೆ. ಅಂದಹಾಗೆ, ಈ ಹಬ್ಬವನ್ನು ಜುಲೈ 7 ರಂದು ಆಚರಿಸಲಾಗುತ್ತದೆ. ಒಂದು ವೇಳೆ ಜುಲೈ 5 ರಂದು ಚಂದ್ರ ಕಾಣಿಸಿಕೊಂಡರೆ, ಈ ಹಬ್ಬವನ್ನು ಜುಲೈ 6 ರಂದು ಆಚರಿಸುವ ಸಾಧ್ಯತೆಯೂ ಇದೆ. ಅಂದಹಾಗೆ, ಹೆಚ್ಚಿನ ಸ್ಥಳಗಳಲ್ಲಿ ಸೋಮವಾರ ರಜೆ ಇರುತ್ತದೆ. ಒಂದು ವೇಳೆ ಈ ಹಬ್ಬವನ್ನು ಸೋಮವಾರ ಆಚರಿಸಿದರೆ ಸೋಮವಾರ ಅಂದರೆ ಜುಲೈ 7 ಕ್ಕೆ ಶಾಲೆ, ಸರ್ಕಾರಿ ಕಚೇರಿಗಳಿಗೆ ರಜೆ ಇರುವುದು. ಒಂದು ವೇಳೆ ಕೊನೆ ಘಳಿಗೆಯಲ್ಲಿ ಆರ್ ಬಿಐ ಘೋಷಿಸಿದರೆ ಬ್ಯಾಂಕ್ ಗಳಿಗೂ ರಜೆ ಇರುವುದು. ಇನ್ನು ಶಾಲೆಗೆ ಮೊಹರಂ ರಜೆ ಯಾವಾಗ ಎಂದು ಕೇಳಿದರೆ ಪ್ರಸ್ತುತ ಈ ಬಗ್ಗೆ ಯಾವುದೇ ಘೋಷಣೆ ಮಾಡಲಾಗಿಲ್ಲ.

ಮೊಹರಂ ಬಗ್ಗೆಯಾವುದೇ ರಾಜ್ಯ ಸರ್ಕಾರ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ವಿವಿಧ ನಗರಗಳಲ್ಲಿನ ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಶಾಲೆಯನ್ನು ತೆರೆಯಬಹುದು ಅಥವಾ ಮುಚ್ಚಬಹುದು. ಶಾಲೆಗಳು ತಮ್ಮ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ರಜೆ ಘೋಷಿಸಬಹುದು. ಹೀಗಾಗಿ ಪೋಷಕರು ರಜೆಗಾಗಿ ನೇರವಾಗಿ ಶಾಲೆಗೆ ಹೋಗುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಒಂದು ವೇಳೆ ಹಬ್ಬವನ್ನು ಜುಲೈ 6 ರಂದು ಆಚರಿಸಿದರೆ, ಭಾನುವಾರದ ಕಾರಣ, ಶಾಲೆಗಳಿಗೆ ರಜೆಯೇ ಇರುವುದು.
ಮೊಹರಂ ಎಂದರೇನು? :
ಮೊಹರಂ ಹಬ್ಬವನ್ನು ಶಿಯಾ ಮುಸ್ಲಿಂ ಸಮುದಾಯವು ಶೋಕ ಮತ್ತು ತ್ಯಾಗದ ನೆನಪಿಗಾಗಿ ಆಚರಿಸುತ್ತದೆ. ಮೊಹರಂನ ಪ್ರಮುಖ ಕಾರ್ಯಕ್ರಮವೆಂದರೆ ತಾಜಿಯಾ ಮೆರವಣಿಗೆ, ಇದರಲ್ಲಿ ಜನರು ಬೀದಿಗಿಳಿದು ಇಮಾಮ್ ಹುಸೇನ್ ಅವರ ಸ್ಮರಣಾರ್ಥ ಶೋಕ ವ್ಯಕ್ತಪಡಿಸುತ್ತಾರೆ. ಅವರ ತ್ಯಾಗಕ್ಕೂ ಅವರು ಗೌರವ ಸಲ್ಲಿಸುತ್ತಾರೆ.
