ಗರ್ಭಿಣಿಯ ಅನುಮಾನಾಸ್ಪದ ಸಾವು-2 ದಿನ ಶವದ ಪಕ್ಕದಲ್ಲೇ ಮದ್ಯಪಾನ ಮಾಡಿದ ಪತಿ

ಬೆಂಗಳೂರು: ನಗರದಲ್ಲಿ ಗರ್ಭಿಣಿ ಮಹಿಳೆಯೊಬ್ಬರು (Pregnant Women) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ (Hennur Police Station) ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಸುಮನಾ (22) ಸಾವನ್ನಪ್ಪಿದ ಮಹಿಳೆ. ಪತಿ ಶಿವಂ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಸುಮನಾ ಮೂರು ದಿನಗಳ ಹಿಂದಷ್ಟೇ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತದೇಹ ದುರ್ವಾಸನೆ ಬಂದು ಸ್ಥಳೀಯರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುಮನಾ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಮೂಗಿನಲ್ಲಿ ರಕ್ತ ಸ್ರಾವವಾಗಿ ಸಾವನ್ನಪ್ಪಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಪತ್ನಿಯ ಮೃತದೇಹದ ಜೊತೆಯೇ ಪತಿ ಶಿವಂ ಎರಡು ದಿನ ಕಳೆದಿದ್ದ. ಪತ್ನಿ ಸತ್ತ ಮೊದಲ ದಿನ ಕೆಲಸಕ್ಕೆ ಹೋಗಿಬಂದಿದ್ದ, 2ನೇ ದಿನ ರಾತ್ರಿ ಮೃತದೇಹದ ಮುಂದೆ ಮದ್ಯಪಾನ, ಊಟ ಮಾಡಿದ್ದ, ಎಗ್‌ಬುರ್ಜಿ ಮಾಡ್ಕೊಂಡು ಶವದ ಮುಂದೆ ಊಟ ಮಾಡಿದ್ದ. ಬುಧವಾರ (ಜು.23) ಮಧ್ಯಾಹ್ನದ ವೇಳೆಗೆ ಮೃಹದೇಹ ಕೊಳೆತು ದುರ್ವಾಸನೆ ಬರಲಾರಂಭಿಸಿದೆ. ಸ್ಥಳೀಯರು ಇದನ್ನು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಕಪಕ್ಕದ ಮನೆಯವರು ಬಂದು ನೋಡುವ ಹೊತ್ತಿಗೆ ಪತಿ ಶಿವಂ ಎಸ್ಕೇಪ್ ಆಗಿದ್ದಾನೆ.
ಸದ್ಯ ಮಹಿಳೆ ಸುಮನಾ ಅನುಮಾನಾಸ್ಪದ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ನಾಪತ್ತೆಯಾಗಿರೋ ಪತಿ ಶಿವಂ ಗಾಗಿ ಹೆಣ್ಣೂರು ಪೊಲೀಸರಿಂದ ಹುಡುಕಾಟ ನಡೆದಿದೆ.
