ಗರ್ಭಿಣಿ ಬೆಕ್ಕು ಅಪಹರಣ; ಅಪಾರ್ಟ್‌ಮೆಂಟ್ ಅಧ್ಯಕ್ಷ ಸೇರಿ 9 ಜನರ ಮೇಲೆ FIR!

ಯಾವ ವಿಷಯಕ್ಕೆ ಎಫ್‌ಐಆರ್ ದಾಖಲಾಗುತ್ತದೆ ಎಂಬುದನ್ನು ಹೇಳೋಕೆ ಆಗೋದಿಲ್ಲ. ಈಗ ಗರ್ಭಿಣಿ ಬೆಕ್ಕಿನ ಅಪಹರಣಕ್ಕೆ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಕಾರಣ ಏನು?

ಪ್ರಾಣಿಪ್ರಿಯರಿಂದ ದೂರು
ಬೆಕ್ಕಿನ ಹಕ್ಕಿಗಾಗಿ 9 ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಬೆಕ್ಕನ್ನು ಸ್ಥಳಾಂತರ ಮಾಡಿದಕ್ಕೆ ಪ್ರಾಣಿಪ್ರಿಯ ದೂರು ದಾಖಲಿಸಿದ್ದಾರೆ.
ಜನರ ಮೇಲೆ ಎಫ್ ಐ ಆರ್
ಗರ್ಭಿಣಿ ಬೆಕ್ಕನ್ನು ಅಕ್ರಮವಾಗಿ ಕಿಡ್ನ್ಯಾಪ್ ಮಾಡಿ ಸ್ಥಳಾಂತರ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ನ ಅಧ್ಯಕ್ಷ ಶ್ರೀರಾಂ, ಸೆಕ್ಯುರಿಟಿ ಮ್ಯಾನೇಜರ್ ಸೇರಿ 9 ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಸಿಬ್ಬಂದಿ ಮೇಲೆ ದೂರು
ವನಶ್ರೀ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಮೇಲೆ ದೂರು ನೀಡಲಾಗಿದೆ. ಪ್ರಿವೆನ್ಷನ್ ಆಫ್ ಅನಿಮಲ್ ಕ್ರೂಯಾಲಿಟಿ ಆಕ್ಟ್ ನಡಿ ಎಫ್ ಐ ಆರ್ ದಾಖಲು ಮಾಡಲಾಗಿದೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಹರೀಶ್ ಎಂಬುವವರಿಂದ ಎಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ಎಚ್ ಎ ಎಲ್ ಪೊಲೀಸರಿಂದ ತನಿಖೆ ಮುಂದುವರಿದಿದೆ.