ಪ್ರಿ-ವೆಡ್ಡಿಂಗ್ ಫೋಟೋಶೂಟ್ WWE ಆಗಿ ಟರ್ನ್ ಆಯ್ತು; ನಗೆಪಾಟಲಿಗೀಡಾದ ಜೋಡಿ, ವಿಡಿಯೋ ವೈರಲ್

ಇತ್ತೀಚಿನ ವರ್ಷಗಳಲ್ಲಿ ಮದುವೆಗೆ ಮುನ್ನ ಪ್ರಿ-ವೆಡ್ಡಿಂಗ್ ಫೋಟೋಶೂಟ್ (Pre-wedding shoots)ಗಳ ಟ್ರೆಂಡ್ ಹೆಚ್ಚಾಗಿದೆ. ಆಗಾಗ್ಗೆ ಜೋಡಿಗಳು ತಮ್ಮ ಪ್ರಿ ವೆಡ್ಡಿಂಗ್ ಫೋಟೋಶೂಟ್‌ಗಾಗಿ, ಸ್ಥಳದಿಂದ ಹಿಡಿದು ಡ್ರೆಸ್ ಮತ್ತು ಪೋಸ್‌ಗಾಗಿ ತಿಂಗಳುಗಟ್ಟಲೆ ತಯಾರಿ ನಡೆಸುತ್ತಾರೆ. ಇಷ್ಟೆಲ್ಲಾ ಮಾಡಿದ ಮೇಲೆ ಒಂದು ಸಣ್ಣ ತಪ್ಪಿನಿಂದಾಗಿ ಇಡೀ ಪ್ಲಾನೇ ಹಾಳಾಗ್ಬೋದು. ಸದ್ಯ ಈ ವಿಚಾರ ಈಗ್ಯಾಕೆ ಅಂತೀರಾ?. ಜೋಡಿಯೊಂದು

ಬೀಚ್‌ನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದೆ. ಫೋಟೋಶೂಟ್ ಮಾಡುವಾಗ ಏನಾಯ್ತು ಅಂದ್ರೆ ಹುಡುಗ ಹುಡುಗಿಯನ್ನು ಎತ್ತಿಕೊಂಡು ಇನ್ನೇನು ನಡೆಯಬೇಕು ಅನ್ನೋವಷ್ಟರಲ್ಲಿ ಅಯ್ಯಯ್ಯೋ…ಎನ್ನುವಂತಹ ಘಟನೆಯೊಂದು ನಡೆದಿದೆ. ಸದ್ಯ ಇದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಹಾಗಾದ್ರೆ ವಿಡಿಯೋದಲ್ಲೇನಿದೆ ಅಂತೀರಾ?, ಮುಂದೆ ಓದಿ…
ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಜೋಡಿಯೊಂದು ಬೀಚ್‌ನಲ್ಲಿ ಪ್ರಿ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿರುವುದು ಕಂಡುಬರುತ್ತದೆ. ಇಬ್ಬರೂ ಈ ಕ್ಷಣ ಸದಾ ನೆನಪಿನಲ್ಲಿರುವಂತೆ ಫುಲ್ ಜೂಮ್‌ನಲ್ಲಿ ಈ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಆ ಹುಡುಗ ತಾನು ಮದುವೆಯಾಗಬೇಕೆಂದುಕೊಂಡಿರುವ ಹುಡುಗಿಯ ಹಿಂದೆ ಬೀಚ್‌ನಲ್ಲಿ ಓಡುತ್ತಿರುವುದು ಕಂಡುಬರುತ್ತದೆ. ನಂತರ ಅವನು ಅವಳನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಾನೆ, ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಅವನ ಕಾಲು ಕಡಲತೀರದ ಒದ್ದೆಯಾದ ಮಣ್ಣಿನ ಮೇಲೆ ಜಾರುತ್ತದೆ. ಇಬ್ಬರೂ ಕೆಳಗೆ ಬೀಳುತ್ತಾರೆ.
ಈ ವೈರಲ್ ವಿಡಿಯೋವನ್ನು @JeetN25 ಖಾತೆಯಿಂದ X ನಲ್ಲಿ ಶೇರ್ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. “ಪ್ರಿ-ವೆಡ್ಡಿಂಗ್ ಫೋಟೋಶೂಟ್ WWE ಆಗಿ ಟರ್ನ್ ಆಯ್ತು” ಎಂದು ಶೀರ್ಷಿಕೆ ಸಹ ಕೊಡಲಾಗಿದೆ. ಸದ್ಯ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನೂ ಪಡೆದುಕೊಂಡಿದ್ದು, ಹಲವಾರು ಇಂಟರ್ನೆಟ್ ಬಳಕೆದಾರರು ಕಾಮೆಂಟ್ ಮಾಡುತ್ತಾ ಆನಂದಿಸುತ್ತಿರುವುದು ಕಂಡುಬಂದಿದೆ.