ನೇಪಾಳದಲ್ಲಿ ಪ್ರಬಲ ಭೂಕಂಪ: ಬಿಹಾರ, ಉತ್ತರ ಭಾರತದಲ್ಲಿ ನಡುಗಿದ ಭೂಮಿ

ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿದ್ದು, ಬೆಳಗಿನ ಜಾವ 2.30ರ ಸುಮಾರಿಗೆ ಸಂಭವಿಸಿದೆ. ಭೂಕಂಪದಿಂದಾಗಿ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಸಿಲಿಗುರಿಯ ನೆಲವೂ ನಡುಗಿತು. ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ, ಪಾಟ್ನಾ ಮತ್ತು ಮುಜಫರ್ಪುರ ಸೇರಿದಂತೆ ಬಿಹಾರದ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ.

ಕಠ್ಮಂಡು: ಕಳೆದ ಕೆಲ ದಿನಗಳಿಂದ ಸಂಭವಿಸುತ್ತಿರುವ ಭೂಕಂಪ ಇಂದು ಕೂಡ ಮುಂದುವರೆದಿದ್ದಿ, ನೇಪಾಳದಿಂದ ಭಾರತದವರೆಗೆ ಭೂಮಿಯು ನಡುಗಿದೆ. ನೇಪಾಳದಲ್ಲಿ ಶುಕ್ರವಾರ ಬೆಳಗಿನ ಜಾವ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಒಂದು ಬಿಹಾರ ಗಡಿಯ ಬಳಿ ಸಂಭವಿಸಿದರೆ, ಮತ್ತೊಂದು ಕಠ್ಮಂಡು ಬಳಿ ಸಂಭವಿಸಿದೆ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ಕ್ರಮವಾಗಿ 5.5 ಮತ್ತು 6.1 ರಷ್ಟು ದಾಖಲಾಗಿದೆ.