Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಸ್ಕಾಂ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 30ರವರೆಗೆ ವಿದ್ಯುತ್ ವ್ಯತ್ಯಯ

Spread the love

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ 15 ದಿನಗಳ ಕಾಲ ವಿದ್ಯುತ್ ವ್ಯತ್ಯಯ  ಉಂಟಾಗಲಿದೆ ಎಂದು ಬೆಸ್ಕಾಂ ಘೋಷಿಸಿದೆ. ಆ ಮೂಲಕ ಇಂದಿನಿಂದ ಸೆಪ್ಟೆಂಬರ್ 30 ರವರೆಗೆ ಬೆಂಗಳೂರು ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ 6 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತುರ್ತು ನಿರ್ವಹಣೆ ಸಂಬಂಧ ವಿದ್ಯುತ್​​ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ತಿಳಿಸಲಾಗಿದೆ.

ವಿದ್ಯುತ್ ವ್ಯತ್ಯಯ ಬಗ್ಗೆ ಬೆಸ್ಕಾಂ ಟ್ವೀಟ್​ ಮಾಡಿದೆ. ಸರ್ಜಾಪುರ-ಅತ್ತಿಬೆಲೆ 66 ಕೆವಿ ಲೈನ್​​ನ ಸಿಂಗಲ್-ಸರ್ಕ್ಯೂಟ್​​ ಹೆಚ್​​​ಟಿಎಲ್​​ಎಸ್​ ಕಂಡಕ್-ಟರ್‌ನ ತಂತಿಯನ್ನು ಸುಗಮಗೊಳಿಸಲು ಸೆಪ್ಟೆಂಬರ್ 19, 20 ಮತ್ತು 21 ರಂದು ವಿದ್ಯುತ್​ ಕಡಿತಗೊಳಿಸಲಾಗುತ್ತಿದೆ.

ಎಲ್ಲೆಲ್ಲಿ ವಿದ್ಯತ್​ ಕಡಿತ

66/11 ಕೆವಿ ಅತ್ತಿಬೆಲೆ ವ್ಯಾಪ್ತಿ: ಯಡವನ-ಹಳ್ಳಿ, ಇಚ್ಚಂಗೂರು, ವಡ್ಡರ-ಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಪಟ್ಟಣ, ಮಾಯಸಂದ್ರ,ದಾಸನಪುರ, ಬಲ್ಲೂರು, ಕಂಬಳಿಪುರ, ಚಿಕ್ಕನಹಳ್ಳಿ, ಇಂಡ್ಲಬೆಲೆ, ಹಾರೋಹಳ್ಳಿ.

66/11 ಕೆವಿ ಆನೇಕಲ್ ವ್ಯಾಪ್ತಿ: ಆನೇಕಲ್ ಟೌನ್, ಕಾವಲುಹೊಸಹಳ್ಳಿ, ಗೌರೇನಹಳ್ಳಿ, ಹಲ್ದೇನಹಳ್ಳಿ, ಹೊಂಪಲಗಟ್ಟಾ, ಚೌಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾಡ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ.

66/11 ಕೆವಿ ಸಮಂದೂರು ವ್ಯಾಪ್ತಿ: ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗರಹಳ್ಳಿ, ವನಕನಹಳ್ಳಿ.

ಇನ್ನು ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಅಟಲ್‌ಭೂಜಲ್ ಯೋಜನೆಯಡಿ ಪ್ರತ್ಯೇಕ ಕೃಷಿ ಫೀಡರ್ ನಿರ್ಮಾಣ ಕಾಮಗಾರಿ ಕೈಗೊಂಡ ಹಿನ್ನಲೆ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲೂ ವಿದ್ಯುತ್​ ಕಡಿತ

ಇನ್ನು ತುಮಕೂರು ಬೆಸ್ಕಾಂ ವ್ಯಾಪ್ತಿಯಲ್ಲಿ ಅಟಲ್​ ಭೂಜಲ್​​ ಯೋಜನೆಯಡಿ ಪ್ರತ್ಯೇಕ ಕೃಷಿ ಫೀಡರ್​​​ ನಿರ್ಮಾಣ ಕಾಮಗಾರಿ ಹಿನ್ನಲೆ ಸೆ. 20, 22, 24, 26, 28 ಮತ್ತು 30 ರಂದು ಹನುಮಂತಪುರ, ಜಗನ್ನಾಥಪುರ, ಅಣ್ಣೆತೋಟ, ಅಗ್ನಿಬನಿರಾಯ ನಗರ, ನಿರ್ವಾಣಿ ಲೇಔಟ್, ಅಂಬೇಡ್ಕರ್‌ ನಗರ. ಬಿ.ಎ. ಗುಡಿಪಾಳ್ಯ.


Spread the love
Share:

administrator

Leave a Reply

Your email address will not be published. Required fields are marked *