Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

CBI ಅಧಿಕಾರಿಗಳಂತೆ ನಟಿಸಿ ಹಣ ಸುಲಿಗೆ: ಪಾಟ್ನಾದಲ್ಲಿ ಆರೋಪಿಗಳ ಬಂಧನ

Spread the love

ಬಿಹಾರ : ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ನಕಲಿ ಪೊಲೀಸ್ ಅಧಿಕಾರಿಯೊಬ್ಬರ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಪಾಟ್ನಾದಲ್ಲಿಯೂ ನಕಲಿ ಸಿಬಿಐ ಅಧಿಕಾರಿಗಳಿಗೆ ಸಂಬಂಧಿಸಿದ ಪ್ರಕರಣವೂಂದು ಬೆಳಕಿಗೆ ಬಂದಿದೆ. ನಕಲಿ ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಆರೋಪಿಗಳು ಸಂಘಟಿತ ಗ್ಯಾಂಗ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರೆಲ್ಲರನ್ನೂ ಪೊಲೀಸರು ವಿವಿಧ ಸ್ಥಳಗಳಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಎಲ್ಲಾ ಆರೋಪಿಗಳು ತಮ್ಮನ್ನು ಕೇಂದ್ರ ತನಿಖಾ ದಳದ (CBI) ಅಧಿಕಾರಿಗಳು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದರು. ಆರೋಪಿಗಳು ಸಾಮಾನ್ಯ ಜನರನ್ನು ಬೆದರಿಸುವ ಮೂಲಕ ಹಣ ಸುಲಿಗೆ ಮಾಡುತ್ತಿದ್ದರು. ಬಂಧಿತ ಆರೋಪಿಗಳು ದರೋಡೆ ಮತ್ತು ಡಕಾಯಿತಿಯಂತಹ ಘಟನೆಗಳಲ್ಲಿಯೂ ಭಾಗಿಯಾಗಿರುವುದು ಖಾಕಿ ವಿಚಾರಣೆ ವೇಳೆ ತಿಳಿದುಬಂದಿದೆ.

ಶಸ್ತ್ರಾಸ್ತ್ರಗಳು ವಶಕ್ಕೆ

ನಕಲಿ ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಪಾಟ್ನಾ ಪೊಲೀಸರು ಭೇದಿಸಿದ್ದಾರೆ. ಈ ಗ್ಯಾಂಗ್‌ನ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಈ ಮೂವರು ಆರೋಪಿಗಳು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಳ್ಳುತ್ತಿದ್ದರು. ತಾವು ಸಿಬಿಐ ಅಧಿಕಾರಿಗಳೆಂದು ಸಾಮಾನ್ಯ ಜನರಿಂದ ಹಣ ಸುಲಿಗೆ ಮಾಡುತ್ತಿದ್ದರು. ಈ ಮೂವರು ಆರೋಪಿಗಳಿಂದ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಅವರ ಬಳಿ ಎರಡು ಪಿಸ್ತೂಲ್‌ಗಳು, ಮೂರು ಕಾರ್ಟ್ರಿಡ್ಜ್‌ಗಳು, ಆರು ಮೊಬೈಲ್ ಫೋನ್‌ಗಳು, ಸೇನಾ ಸಮವಸ್ತ್ರ ಮತ್ತು ನಕಲಿ ಸಿಬಿಐ ಗುರುತಿನ ಚೀಟಿಗಳನ್ನ ವಶಪಡಿಸಿಕೊಳ್ಳಲಾಗಿದೆ.

ಬಲವಂತದಿಂದ ಹಣ ವಸೂಲಿ

ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡ ಈ ಆರೋಪಿಗಳ ವಿರುದ್ಧ ಈಗಾಗಲೇ ದರೋಡೆ ಮತ್ತು ಡಕಾಯಿತಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಮೂವರು ಆರೋಪಿಗಳನ್ನು ಸಹ ಗುರುತಿಸಲಾಗಿದೆ. ಮೂವರು ಆರೋಪಿಗಳಾದ ರಿತನ್ ಕುಮಾರ್ ಸಿಂಗ್, ಅರವಿಂದ್ ಕುಮಾರ್ ಮತ್ತು ನಿತೀಶ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಪಾಟ್ನಾ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, “ಶನಿವಾರ ಪಾಟ್ನಾದ ವಿವಿಧ ಸ್ಥಳಗಳಿಂದ ಮೂವರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಅವರು ಜನರಿಂದ ಹಣ ಸುಲಿಗೆ ಮಾಡಲು ಸಿಬಿಐ ಅಧಿಕಾರಿಗಳಂತೆ ನಟಿಸುತ್ತಿದ್ದರು ಎಂದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *