ನೀಲಿ ಚಿತ್ರ ಚಿತ್ರೀಕರಣ ವೇಳೆ ಬಾಲ್ಕನಿಯಿಂದ ಬಿದ್ದು ನಟಿ ಸಾವು

ನೀಲಿ ಚಿತ್ರವೊಂದರ ಚಿತ್ರೀಕರಣದ ವೇಳೆ ಹೊಟೇಲ್ನ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ನೀಲಿ ಚಿತ್ರ ತಾರೆಯೊಬ್ಬರು ಮೃತಪಟ್ಟಿರುವ ಘಟನೆ ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ನಡೆದಿದೆ.
ನಟಿಯನ್ನು ಆ್ಯನಾ ಬಿಯಾಟ್ರಿಜ್ ಪೆರೇರಾ ಅಲ್ವೇಸ್ ಎಂದು ಗುರುತಿಸಲಾಗಿದೆ.
ಜ.23ರಂದು ಈ ಘಟನೆ ನಡೆದಿದ್ದು, ಚಿತ್ರೀಕರಣದ ವೇಳೆ ಆಕೆಯೊಂದಿಗೆ ನಟಿಸುತ್ತಿದ್ದ ಇನ್ನಿಬ್ಬರು ಪುರುಷ ನಟರ ಹೇಳಿಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.