Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಡ್ಯದಲ್ಲಿ ಕಳಪೆ ರಸ್ತೆ ಕಾಮಗಾರಿ: ಒಂದೇ ದಿನಕ್ಕೆ ಕಿತ್ತುಬಂದ ಡಾಂಬರು

Spread the love

ಮಂಡ್ಯ : ರಾಜ್ಯದಲ್ಲಿ (Karnataka ) ರಸ್ತೆಗಳು ಹಳ್ಳಕೊಳ್ಳಗಳಿಂದ(pathholes ) ತುಂಬಿ ಅಪಾಯಕ್ಕೆ (danger) ಆಹ್ವಾನ ತಂದೊಡ್ಡಿದೆ. ಈ ನಡುವೆ ರಸ್ತೆ ನಿರ್ವಹಣೆಯಲ್ಲಿ ಅಧಿಕಾರಿಗಳು
ನುಂಗಣ್ಣಗಳಾಗುತ್ತಿದ್ದಾರೆ.

ಮಂಡ್ಯದ KR ಪೇಟೆಯ ಆಸ್ಪತ್ರೆಯ ಆವರಣದ ರಸ್ತೆಗೆ ಹಾಕಿದ ಡಾಂಬರ್‌ ಒಂದೇ ದಿನಕ್ಕೆ ಕಿತ್ತು ಹೋಗಿರೋ ಆರೋಪ ಜೋರಾಗಿ ಸದ್ದು ಮಾಡ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

27 ಕೋಟಿ ರೂ. ವೆಚ್ಚದಲ್ಲಿ ಈ ಡಾಂಬರೀಕರಣ ಕಾರ್ಯ ನಡೆದಿದೆ. ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬರಿಗೈನಲ್ಲಿ ಡಾಂಬರ್‌ ಕಿತ್ತು ಹಾಕಿ ಕಳಪೆ ಕಾಮಗಾರಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರಿಗಳು ದುಡ್ಡು ಮಾಡಲೆಂದು ಕಾಮಗಾರಿ ಬಗ್ಗೆ ಹೆಚ್ಚು ನಿಗಾ ವಹಿಸಿಲ್ಲ. ಅತ್ಯಂತ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ಮಾಡಲಾಗಿದ್ದು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ದುಡ್ಡನ್ನು ನುಂಗಿ ನೀರು ಕುಡಿದಿದ್ದಾರೆ. ಕೂಡಲೇ ಸೂಕ್ತ ತನಿಖೆಯಾಗಿ ಇಬ್ಬರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *