Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ಮಾಲಿನ್ಯದ ಅಪಾಯ

Spread the love

ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ವಾಯು ಗುಣಮಟ್ಟ ಕುಸಿಯುತ್ತಲೇ ಇದ್ದು, ವಾಯುಮಾಲಿನ್ಯ ಹೆಚ್ಚುತ್ತಿದೆ. ನಗರದಲ್ಲಿ ಇದೇ ವಾತಾವರಣ ಮುಂದುವರೆದರೆ ಮುಂದೊಂದು ದಿನ ದೆಹಲಿಯಂತೆ ಇಲ್ಲಿಯೂ ಉಸಿರಾಡುವುದೂ ಕಷ್ಟವೆಂಬಂತಾಗುತ್ತೆ ಎಂಧು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ನಿನ್ನೆ (ಡಿ.12) ಗಾಳಿಯ ಗುಣಮಟ್ಟ ಸೂಚ್ಯಂಕ (AQI) 175ಕ್ಕೆ ತಲುಪಿತ್ತು. ಇಂದು ಗಾಳಿಯ ಗುಣಮಟ್ಟ ಸುಮಾರು 186 ರಿಂದ 206ರ ವರೆಗೂ ಏರಿಕೆ ಕಂಡಿದ್ದು, ಉಸಿರಾಟಕ್ಕೆ ತೀವ್ರ ಬಿಕ್ಕಟ್ಟು ಎದುರಾಗಲಿದೆ.

200ರ ಗಡಿದಾಟಿದ ಗಾಳಿಯ ಕ್ವಾಲಿಟಿ

ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, 5ಕ್ಕಿಂತ ಹೆಚ್ಚಿನ PM2.5(Particulate Matter) ಜನರಲ್ಲಿ ಉಸಿರಾಟದ ಸಮಸ್ಯೆ ತಂದೊಡ್ಡಬಹುದು. ಆದರೆ ಭಾರತೀಯ ಸುರಕ್ಷಾ ಮಿತಿಗಳ ಪ್ರಕಾರ 40ಕ್ಕಿಂತ ಕಡಿಮೆ PM2.5 ಇದ್ದರೂ ಸ್ವೀಕಾರಾರ್ಹವಾಗಿದೆ. PM10 ಪ್ರಮಾಣವೂ 50 ಮೈಕ್ರೋಗ್ರಾಮ್​ವರೆಗೂ ಇರಬಹುದು.ಈಗಾಗಲೇ ಇಂದು ಬೆಂಗಳೂರಿನ ಗಾಳಿಯ ಗುಣಮಟ್ಟ 200 ದಾಟಿರುವುದರಿಂದ ಉಸಿರಾಟದ ತೊಂದರೆಯಿರುವವರು ಜಾಗರೂಕರಾಗಿರಬೇಕಿದೆ. ಇಂದು ನಗರದಲ್ಲಿ PM2.5 95 ಮೈಕ್ರೋಗ್ರಾಮ್ ಇದ್ದು, PM10 ಪ್ರಮಾಣ 96 ಇದೆ.

PM ಎಂದರೆ ಗಾಳಿಯಲ್ಲಿರುವ ಕಣಗಳು. PM2.5ನ ಕಣಗಳು ವಾಹನ ಹೊಗೆ, ಕೈಗಾರಿಕಾ ಹೊಗೆ, ಹಾಗೂ ಇಂಧನಗಳ ಹೊಗೆಯಿಂದ ಉತ್ಪತ್ತಿಯಾಗುತ್ತವೆ ಹಾಗೂ PM10 ನ ಕಣಗಳು ಕನ್ಸ್ಟ್ರಕ್ಷನ್​ನ ಧೂಳು, ಪರಾಗದಿಂದೆಲ್ಲಾ ಉತ್ಪತ್ತಿಯಾಗುತ್ತವೆ. ಎರಡರ ಪ್ರಮಾಣವೂ ಮಿತಿ ಮೀರಿದಾಗ ಸಾರ್ವಜನಿಕಲ್ಲಿ ಆಸ್ತಮಾದಂತಹ ಉಸಿರಾಟದ ತೊಂದರೆಗಳು ಎದುರಾಗುತ್ತವೆ. ಕೇವಲ PM ಮಾತ್ರವಲ್ಲೆ ಖಾರ್ಬನ್ ಮೊನಾಕ್ಸೈಡ್, ಓಜೋನ್, ನೈಟ್ರೋಜನ್ ಡೈ ಆಕ್ಸೈಡ್​ಗಳ ಹೆಚ್ಚಳವೂ ಗಾಳಿಯನ್ನು ಉಸಿರಾಡಲು ಅನರ್ಹವನ್ನಾಗಿಸುತ್ತವೆ. ಸಧ್ಯ ಬೆಂಗಳೂರು ಮಾತ್ರವಲ್ಲದೇ ಅರೆಕೆರೆ, ಬೆಳ್ಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಪ್ರಮುಖ ನಗರಗಳಲ್ಲಿ ಗಾಳಿ ಗುಣಮಟ್ಟ

  • ಬೆಂಗಳೂರು – 180
  • ಮಂಗಳೂರು -146
  • ಮೈಸೂರು – 118
  • ಬೆಳಗಾವಿ- 143
  • ಕಲಬುರಗಿ – 77
  • ಶಿವಮೊಗ್ಗ- 77
  • ಬಳ್ಳಾರಿ- 167
  • ಹುಬ್ಬಳ್ಳಿ – 90
  • ಉಡುಪಿ – 85
  • ವಿಜಯಪುರ – 79

Spread the love
Share:

administrator

Leave a Reply

Your email address will not be published. Required fields are marked *