ಪಶ್ಚಿಮ ಬಂಗಾಳದ ರಾಜಕೀಯ ತಾಪ: ಸುವೇಂದು ಬೆಂಗಾವಲು ವಾಹನದ ಮೇಲೆ ದಾಳಿ

ಕೂಚ್ಬೆಹಾರ್: ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಜೆಪಿಯು ಟಿಎಂಸಿ ಕಾರ್ಯಕರ್ತರ ಮೇಲೆ ಆರೋಪ ಹೊರಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಆರೋಪಗಳನ್ನು ನಿರಾಕರಿಸಿತು ಮತ್ತು ಇದನ್ನು ಕೇಸರಿ ಪಕ್ಷ ರಚಿಸಿರುವ ನಾಟವಿದು ಎಂದು ಹೇಳಿದೆ.

ಕೂಚ್ಬೆಹಾರ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳುತ್ತಿದ್ದಾಗ ಈ ಘರ್ಷಣೆ ಸಂಭವಿಸಿದೆ. ಮಧ್ಯಾಹ್ನ 12.35 ರ ಸುಮಾರಿಗೆ ಅಧಿಕಾರಿಯ ಬೆಂಗಾವಲು ಪಡೆ ಆ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ, ತೃಣಮೂಲ ಪಕ್ಷದ ಬಾವುಟಗಳು ಮತ್ತು ಕಪ್ಪು ಬಾವುಟಗಳನ್ನು ಹಿಡಿದ ಗುಂಪೊಂದು ಖಗ್ರಾಬರಿ ಕ್ರಾಸಿಂಗ್ನಲ್ಲಿ ಹಲ್ಲೆ ನಡೆಸಿದೆ.