ರೀಲ್ಸ್ ಕ್ರೇಜ್ಗೆ ದಂಗಾದ ಪೊಲೀಸರು: ‘ವೀಡಿಯೋ ಡಿಲೀಟ್ ಮಾಡಲ್ಲ ಬೇಕಾದ್ರೆ ಸಾಯ್ತೀನಿ’ ಎಂದು ಪೊಲೀಸರಿಗೆಯೇ ಬೆದರಿಕೆ ಹಾಕಿದ ಯುವತಿ

ಇದು ಸಾಮಾಜಿಕ ಜಾಲತಾಣದ ಯುಗ. ಸೋಶಿಯಲ್ ಮೀಡಿಯಾದಲ್ಲಿ ಒಂದು ರೀಲ್ಸ್ ವೈರಲ್ ಆಗುವುದಕ್ಕಾಗಿ ಜನ ಏನೇನೋ ಸಾಹಸ ಮಾಡುತ್ತಾರೆ. ಜೀವಕ್ಕೆ ಅಪಾಯವುಂಟು ಮಾಡುವ ರಿಸ್ಕ್ ತೆಗೆದುಕೊಳ್ಳುತ್ತಾರೆ. ಹೀಗೆ ರೀಲ್ಸ್ ವೈರಲ್ ಆಗುವುದಕ್ಕೋಸ್ಕರ ಪ್ರಾಣ ಬಿಟ್ಟವರು ಇದ್ದಾರೆ. ಅದರಲ್ಲೂ ಚೆನ್ನಾಗಿ ಓಡಿ ವೈರಲ್ ಆದ ರೀಲ್ಸ್ ಅನಿವಾರ್ಯ ಕಾರಣಕ್ಕೆ ಡಿಲೀಟ್ ಮಾಡುವಂತಹ ಸ್ಥಿತಿ ಬಂದರೆ, ಅಥವಾ ಅದಾಗಿಯೇ ಅದು ಡಿಲೀಟ್ ಆದರೆ ಅನೇಕ ಇನ್ಫ್ಲುಯೆನ್ಸರ್ಗಳು ಪ್ರಾಣವೇ ಹೋದಂತೆ ಬೇಸರಿಸುವುದುಂಟು, ಆ ರೀಲ್ಸ್ಗಾಗಿ ಎಷ್ಟೊಂದು ಕಷ್ಟಪಟ್ಟೆವು ಅದೇ ರೀಲ್ಸ್ ಡಿಲೀಟ್ ಆಗೋಯ್ತು, ಎಷ್ಟೊಂದು ಚೆನ್ನಾಗಿ ಓಡಿತ್ತು. ಆ ರೀಲ್ಸ್ನ್ನೇ ಡಿಲೀಟ್ ಮಾಡಿದ್ರು ಎಂದು ಕೆಲವರು ದುಃಖ ತೋಡಿಕೊಳ್ಳುವುದನ್ನು ಕೇಳಬಹುದು. ಅದೇ ರೀತಿ ಇಲ್ಲೊಂದು ಕಡೆ ಯುವತಿಯೊಬ್ಬಳ ರೀಲ್ಸ್ ಚೆನ್ನಾಗಿ ವೀವ್ಸ್ ಪಡೆದು ವೈರಲ್ ಆಗಿದೆ. ಆದರೆ ಅದನ್ನು ಪೊಲೀಸರು ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಇದರಿಂದ ಬೇಜಾರಾದ ಆಕೆ, ಪ್ರಾಣ ಬೇಕಾದ್ರೆ ಬಿಡ್ತೀನಿ. ಆದ್ರೆ ರೀಲ್ಸ್ ಮಾತ್ರ ಡಿಲೀಟ್ ಮಾಡಲ್ಲ ಎಂದು ಪೊಲೀಸರಿಗೆಯೇ ಧಮ್ಕಿ ಹಾಕಿದ್ದಾಳೆ.

ಇನ್ಫ್ಲುಯೆನ್ಸರ್ ಅರಸಿ ಮನೆಗೆ ಬಂದ ಪೊಲೀಸರು: ವೀಡಿಯೋ ಡಿಲೀಟ್ ಮಾಡುವಂತೆ ಆಗ್ರಹ
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಮಹಿಳೆಯ ಈ ರೀಲ್ಸ್ ಕ್ರೇಜ್ಗೆ ಪೊಲೀಸರೇ ದಂಗಾಗಿದ್ದಾರೆ. ಅಂದಹಾಗೆ ಈ ಮಹಿಳೆ ಪೊಲೀಸ್ ಠಾಣೆಯ ಮುಂದೆಯೇ ರೀಲ್ಸ್ ಮಾಡಿದ್ದಾಳೆ. ಇದು ಸ್ವಲ್ಪ ಸಮಯದಲ್ಲೇ ಚೆನ್ನಾಗಿ ಓಡಿ ವೈರಲ್ ಆಗಿತ್ತು. ಆದರೆ ಆಕೆಯ ರೀಲ್ಸ್ನಲ್ಲಿ ಪೊಲೀಸ್ ಸ್ಟೇಷನ್ ಇದ್ದ ಕಾರಣಕ್ಕೆ ಪೊಲೀಸರು ರೀಲ್ಸ್ ಡಿಲೀಟ್ ಮಾಡುವಂತೆ ಆಕೆಗೆ ವಾರ್ನ್ ಮಾಡಿದ್ದಾರೆ. ಆದರೆ ಆಕೆ ಮತ್ತೊಂದು ವೀಡಿಯೋ ಮಾಡಿದ್ದು, ಬೇಕಾದರೆ ಸಾಯ್ತಿನಿ ಆದರೆ ರೀಲ್ಸ್ ಮಾತ್ರ ಡಿಲೀಟ್ ಮಾಡಲ್ಲ ಎಂದು ಪೊಲೀಸರಿಗೆ ವೀಡಿಯೋ ಮೂಲಕವೇ ವಾರ್ನ್ ಮಾಡಿದ್ದಾಳೆ. ಪೊಲೀಸರು ಡಿಲೀಟ್ ಮಾಡಲು ಹೇಳಿದ ವೀಡಿಯೋದಲ್ಲಿ ಆಕೆ ಪೊಲೀಸ್ ಠಾಣೆಯಿಂದ ಹೊರಗೆ ಬರುತ್ತಿರುವ ದೃಶ್ಯವಿದೆ. ಇದನ್ನು ಗಮನಿಸಿದ ನಂತರ ಪೊಲೀಸರು ಆಕೆಯನ್ನು ಗುರುತಿಸಿ ವಿಡಿಯೋ ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಆಕೆ ಹೇಳುವ ಪ್ರಕಾರ ಆ ವೀಡಿಯೋವನ್ನು ಮಿಲಿಯನ್ ಜನರು ವೀಕ್ಷಿಸಿದ್ದಾರಂತೆ. ಹೀಗಾಗಿ ಆಕೆಗೆ ಆ ವೀಡಿಯೋ ಡಿಲೀಟ್ ಮಾಡುವ ಮನಸ್ಸಿಲ್ಲ…
ಬೇಕಾದ್ರೆ ಸಾಯ್ತಿನಿ ವೀಡಿಯೋ ಮಾತ್ರ ಡಿಲೀಟ್ ಮಾಡಲ್ಲ ಎಂದ ಯುವತಿ…
zoyakhan.9513 ಎಂಬ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವ ರೂಹಿ ಎಂಬ ಮಹಿಳೆಯೇ ಹೀಗೆ ವೀಡಿಯೋ ಡಿಲೀಟ್ ಮಾಡಲು ಹಿಂದೇಟು ಹಾಕುತ್ತಿರುವ ಮಹಿಳೆ, ಈಕೆ ಈ ಇನ್ಸ್ಟಾಗ್ರಾಮ್ ಖಾತೆಯಿಂದಲೇ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಭೋಜ್ಪುರಿ ಹಾಡೊಂದು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ರೀಲ್ಸ್ನಂತೆಯೇ ಇತ್ತು. ಆದರೆ ಕೆಲ ಸಮಯದಲ್ಲೇ ಈ ರೀಲ್ಸ್ ಪೊಲೀಸರ ಗಮನವನ್ನು ಸೆಳೆದಿದೆ. ಹೀಗಾಗಿ ಪೊಲೀಸರು ರೂಹಿಯ ನಿವಾಸವನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾರೆ. ವೀಡಿಯೋವನ್ನು ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಆದರೆ ಈ ವೀಡಿಯೋ ತುಂಬಾ ಫೇಮಸ್ ಆಗಿದ್ದು, ಅದನ್ನು ನಾನು ಡಿಲೀಟ್ ಮಾಡಲ್ಲ ಎಂದು ಆಕೆ ಪೊಲೀಸರಿಗೆ ಹೇಳಿದ್ದಾಳೆ. ಆದರೆ ಪೊಲೀಸರು ಆಕೆಯ ಮಾತು ಕೇಳಲು ಸಿದ್ಧರಿಲ್ಲದೇ ಹೋದಾಗ ಆಕೆ ಅವರಿಗೆ ಚಾಕು ತೋರಿಸಿ ತಾನು ಸಾಯುವುದಾಗಿ ಹೇಳಿದ್ದಾಳೆ. ಅಲ್ಲದೇ ಅದೇ ರೀತಿ ಮಾಡುವುದಕ್ಕೂ ಮುಂದಾಗಿದ್ದಾಳೆ.
ಇಷ್ಟಕ್ಕೆ ಸಮಸ್ಯೆ ಅಂತ್ಯಗೊಂಡಿಲ್ಲ, ಮತ್ತೊಂದು ವೀಡಿಯೋ ಮಾಡಿದ ರೂಹಿ ಪೊಲೀಸ್ ಠಾಣೆಯ ಹೊರಗೆ ವೀಡಿಯೋ ಮಾಡಲಾಗಿದೆ. ಆಗಷ್ಟೇ ರಿಲೀಸ್ ಆಗಿದ್ದ ಹಾಡನನು ಬಳಸಿ ರೀಲ್ಸ್ ಮಾಡಲಾಗಿತ್ತು. ಪೊಲೀಸರು ಈ ವೀಡಿಯೋ ಡಿಲೀಟ್ ಮಾಡುವಂತೆ ನಮಗೆ ಕಿರುಕುಳ ನೀಡುತ್ತಿದ್ದಾರೆ. ನಾವು ಯಾಕೆ ವೀಡಿಯೋ ಡಿಲೀಟ್ ಮಾಡಬೇಕು ಎಂದು ಹೇಳಿದ ಆಕೆ ಈ ರೀಲನ್ನು ಕೂಡ ವೈರಲ್ ಮಾಡುವಂತೆ ಮನವಿ ಮಾಡಿದ್ದಾರೆ.
