ಬ್ಯಾಂಕ್, ಹಣಕಾಸು ಸಂಸ್ಥೆ, ಆಭರಣ ಸಂಸ್ಥೆಗಳಿಗೆ ಸುರಕ್ಷತಾ ಕ್ರಮದ ಬಗ್ಗೆ ಮಂಗಳೂರು ಕಮೀಷನರ್ ಅನುಪಮ್ ಅಗರ್ವಾಲ್ ಸಲಹೆ.

ಮಂಗಳೂರು: ಜನವರಿ 17ರಂದು ಮಂಗಳೂರಿನ ಕೆ.ಸಿ.ರೋಡ್ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ನಡೆದ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸುರಕ್ಷತಾ ಕ್ರಮದ ಬಗ್ಗೆ ಸಲಹೆ ನೀಡಿದರು.

ಫೆ.3, 4, 5ರಂದು ಈ ಸಭೆ ನಡೆದಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು, ಖಾಸಗಿ ಬ್ಯಾಂಕ್, ಕೋ-ಆಪರೇಟಿವ್ ಸೊಸೈಟಿ, ಇತರ ಬ್ಯಾಂಕ್ಗಳು, ಎಟಿಎಂಗಳು, ಸಹಕಾರಿ ಸಂಘಗಳು, ಕೋ-ಆಪರೇಟಿವ್ ಸೊಸೈಟಿಗಳು, ಫೈನಾನ್ಸ್ ಕಂಪೆನಿಗಳು, ಮೈಕ್ರೋ ಫೈನಾನ್ಸ್ ಕಂಪೆನಿಗಳು, ಜುವೆಲ್ಲರಿ ಅಂಗಡಿಗಳು ಚಿನ್ನದ ಗಿರವಿ ಅಂಗಡಿಗಳ 723 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸಂಸ್ಥೆಗಳು ಹೈರೆಸೊಲ್ಯೂಷನ್ ಕೆಮರಾ, ಗ್ರಿಲ್ಸ್ ಕೊಲ್ಲಾಪ್ಸಿಬಲ್ಗೇಟ್, ಬರ್ಗಲರಿ ಅಲಾರ್ಮ್ ಪ್ಯಾನಿಕ್ ಸ್ವಿಚ್, ಸೆನ್ಸರ್ಯುಕ್ತ ಬಾಗಿಲುಗಳು, ಸೆನ್ಸಾರ್ ಲಾಕರ್ಗಳು ಆಯುಧ ಸಹಿತ ಸೆಕ್ಯುರಿಟಿ ಗಾರ್ಡ್ ಅಳವಡಿಸುವ ಬಗ್ಗೆ ಆಯುಕ್ತ ಅನುಪಮ್ ಅಗರ್ವಾಲ್ ಸೂಚಿಸಿದ್ದಾರೆ. ಅಲ್ಲದೆ ಸಿಬಂದಿಗೆ ಬ್ಯಾಂಕ್ ಸುರಕ್ಷೆ ಬಗ್ಗೆ ತರಬೇತಿ, ಇತರ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.

ದರೋಡೆ, ಕಳ್ಳತನ ಅಪರಾಧವನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮತ್ತು ಸೂಕ್ತ ಸೂಚನೆ, ಆರ್ಬಿಐ ಮಾರ್ಗಸೂಚಿಯಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಲಹೆ ಮತ್ತು ಸೂಚನೆ ನೀಡಿದರು. ಅಪಾಯ ಮತ್ತು ತುರ್ತು ಸಂದರ್ಭದಲ್ಲ್ಲಿ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ, ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಯ್ಸಳ ಪೊಲೀಸರು ಕೃತ್ಯ ನಡೆದ ಸ್ಥಳಗಳಿಗೆ ತಲುಪಿ ತುರ್ತು ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ಮನವರಿಕೆ ಮಾಡಿಕೊಲಾಯಿತು
