ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿಗಳನ್ನು ಕೊಲ್ಲಲು ವಿಷಮಾಂಸ ಹುನ್ನಾರ – ಪೊಲೀಸ್ ತನಿಖೆ ಆರಂಭ

ಮಂಗಳೂರು : ಮಾಂಸ ಪೂರೈಕೆಯ ಟೆಂಡರ್ ಸಿಗದ ಕಾರಣಕ್ಕೆ ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿಗಳನ್ನು ಕೊಲ್ಲಲು ವಿಷಪೂರಿತ ಮಾಂಸವನ್ನು ಬೆರೆಸುವ ಕೆಲಸ ಮಾಡಲಾಗುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಡಾ| ಪ್ರಶಾಂತ್ ಪೈ ಅವರು ಕಾವೂರು ಠಾಣೆಗೆ ದೂರು ನೀಡಿದ್ದಾರೆ.

ಪ್ರಸ್ತುತ ಹೊಸ ಗುತ್ತಿಗೆದಾರರೊಬ್ಬರು ಮಾಂಸ ಪೂರೈಕೆಯಗುತ್ತಿಗೆ ಪಡೆದಿದ್ದಾರೆ. ಅವರು ಪೂರೈಸುತ್ತಿರುವ ಟೆಂಡರುದಾರರ ಮಾಂಸವನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಹಿಂದಿನ ಟೆಂಡರುದಾರ ನೌಕರನೊಬ್ಬ ಆಗಸ್ಟ್ 7ರಂದು ಉದ್ಯಾನವನದ ಸಿಬಂದಿಗೆ ಕರೆ ಮಾಡಿ ತಿಳಿಸಿದ್ದಾನೆ. ಆ ಮೂಲಕ ಪ್ರಾಣಿಗಳನ್ನು ಕೊಲ್ಲಲು ಹುನ್ನಾರ ನಡೆಸಿರುವುದು ಗೊತ್ತಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿದ್ದಾರೆ.
ದೂರಿನ ಪ್ರಕಾರ
ದಿನಾಂಕ 08-08-2025 ರಂದು ಪಿಲಿಕುಳ ಜೈವಿಕ ಉದ್ಯಾನವನದ ವೈಧ್ಯಾಧಿಕಾರಿಯಾದ ಡಾ|| ದಿವ್ಯಾಗಣೇಶ್‌ರವರು ಕೊಟ್ಟ ದೂರಿನ ಮೇರೆಗೆ ಪಿಲಿಕುಳ ಜೈವಿಕ ಉದ್ಯಾನವನದ ನೌಕರರಾದ ಹರೀಶ್ ರವರನ್ನು ವಿಚಾರಣೆ ನಡೆಸಿದಾಗ ತಿಳಿದು ಬಂದು ವಿಷಯದಂತೆ, ಈ ಹಿಂದೆ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ವನ್ಯಮೃಗಗಳಿಗೆ ಮಾಂಸವನ್ನು ವಿತರಿಸುತ್ತಿರುವ ಖಾದರ್‌ರವರ (ಅವರು ಟೆಂಡರುದಾರರೂ ಸಹ ಆಗಿರುತ್ತಾರೆ) ನಿರ್ದೇಶನದ ಮೇರೆಗೆ ಅಭ್ಯಾಸ್ ಹಾಗೂ ಹನೀಷ್ಮರವರು ಪಿಲಿಕುಳ ಜೈವಿಕ ಉದ್ಯಾನವನದ ವನ್ಯಮೃಗಗಳಿಗೆ ಮಾಂಸವನ್ನು ವಿತರಿಸುತ್ತಿದ್ದರು.
ಆದರೆ ದಿನಾಂಕ 07-08-2025 ರಂದು ಅಬ್ಯಾಸ್‌ರವರ ನೌಕರರಾದ ಹನೀಪ್‌ರವರು ಪಿಲಿಕುಳ ಜೈವಿಕ ಉದ್ಯಾನವನದ ನೌಕರರಾದ ಹರೀಶ್ ಎಂಬುವವರಿಗೆ ದೂರವಾಣಿ ಕರೆ ಮಾಡಿ, ಈಗಿನ ಟೆಂಡರುದಾರರು ಮಾಂಸವನ್ನು ವನ್ಯಮೃಗಗಳಿಗೆ ವಿತರಿಸುವ ಟೆಂಡರು ಈ ತಿಂಗಳಿನಿಂದ ಪಡೆದುಕೊಂಡಿದ್ದು, ಅಂದರೆ ಆಗಸ್ಟ್ 2025 ರಿಂದ ಇವರು ಸರಬರಾಜು ಮಾಡಿರುವ ಮಾಂಸಕ್ಕೆ ಕೊಳೆತ ಮಾಂಸ ಅಥವಾ ವಿಷ ಮಾಂಸವನ್ನು ಬೆರೆಸಿ, ಈಗಿನ ಟೆಂಡರುದಾರರ ಮಾಂಸವನ್ನು ತಿರಸ್ಕರಿಸುವಂತೆ ಮಾಡಲು ಹುನ್ನಾರ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈಗಿರುವ ಟೆಂಡರುದಾರರನ್ನು ತಿರಸ್ಕೃತಗೊಳಿಸುವ ಸಲುವಾಗಿ ಹನೀಫ್ ತಂದಿರುವ ಮಾಂಸವನ್ನು ಹಾಕಿ ಪಿಲಿಕುಳ ಜೈವಿಕ ಉದ್ಯಾನವನದ ವನ್ಯಮೃಗೆಗಳನ್ನು ಕೊಲ್ಲುವರೇ ಹುನ್ನಾರ ಮಾಡಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ವೈಧ್ಯಾಧಿಕಾರಿಯಾದ ಡಾ|| ದಿವ್ಯಾಗಣೇಶ್‌ರವರು ದೂರನ್ನು ನೀಡಿರುತ್ತಾರೆ.
ಈ ವಿಚಾರವನ್ನು ಕೂಡಲೇ ಪೊಲೀಸ್ ಗಮನಕ್ಕೆ ತರಲು ತಿಳಿಸಿರುತ್ತಾರೆ. ಅದಲ್ಲದೆ ಈ ವಿಷಯದ ಬಗ್ಗೆ, ಹರೀಶ್ ಮತ್ತು ಹನೀಫ್ ರವರು ಮಾತಾಡಿರುವ ಆಡಿಯೋ ರೆಕಾರ್ಡ್ ತುಣುಕನ್ನು ಪೊಲೀಸರಿಗೆ ನೀಡಿದ್ದಾರೆ. ಆದ್ದರಿಂದ ಈ ವಿಷಯದ ಬಗೆ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇನೆ ಹಾಗೂ ಅಬ್ಬಾಸ್ ಹಾಗೂ ಹನೀಫ್ ರವರ ಮೊಬೈಲ್ ಪೋನ್‌ಗಳನ್ನು ಪರೀಲಿಸಿದರೆ, ಇದರ ಹಿಂದೆ ಯಾರ ಯಾರ ಇದ್ದಾರೆ? ಯಾರ ಯಾರ ಕೈವಾಡ ಇರುಬಹುದು? ಎಂಬ ಬಗ್ಗೆ, ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ದೂರು ಸಲ್ಲಿಸಿದ್ದಾರೆ.
