Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಹಮದಾಬಾದ್‌ನಲ್ಲಿ ವಿಮಾನ ದುರಂತ:ಟೇಕ್‌ಆಫ್ ಆದ ತಕ್ಷಣವೇ ವಿಮಾನ ಪತನ

Spread the love

ಗುಜರಾತ್: ಅಹಮ್ಮದಾಬಾದ್‌ ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ.ಮೇಘನಿ ನಗರ ಪ್ರದೇಶದಲ್ಲಿ ಸುಮಾರು 242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದೆ. ಸ್ಥಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಅಹಮ್ಮದಾಬಾದ್‌ ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ.ಮೇಘನಿ ನಗರ ಪ್ರದೇಶದಲ್ಲಿ ಪ್ರಯಾಣಿಕರು, ಸಿಬ್ಬಂದಿಗಳು ಸೇರಿ ಸುಮಾರು 242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದೆ. ಸುಮಾರು 130 ಮಂದಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ತಾಂತ್ರಿಕ ದೋಷದ ಕಾರಣಕ್ಕೆ 2 ಕಿ ಮೀಟರ್‌ ದೂರದಲ್ಲಿ ವಿಮಾನ ಪತನವಾಗಿದೆ. ಜನ ವಸತಿ ಕಟ್ಟಡ ಮೇಲೆ ವಿಮಾನ ಬಿದ್ದಿದೆ ಎಂದು ವರದಿ ತಿಳಿಸಿದೆ. ವಿಮಾನವು ಅಹಮ್ಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ ಗೆ ತೆರಳುತ್ತಿತ್ತು ಎನ್ನಲಾಗಿದೆ. ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಪತನಗೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ತುರ್ತು ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಲಾಗಿದೆ. ಅಪಘಾತದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.


Spread the love
Share:

administrator

Leave a Reply

Your email address will not be published. Required fields are marked *