Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಾತ್ರೆ ಸ್ವರೂಪದ ಚಾಕಲೇಟ್ ಮಾರಾಟ –ಶಾಲಾ ಮಕ್ಕಳೇ ಟಾರ್ಗೆಟ್!

Spread the love

ಬೆಂಗಳೂರು: ಬೆಂಗಳೂರಿನಲ್ಲಿ ಮಕ್ಕಳು ಪಾಪ ತಿಂಡಿ, ಚಾಕಲೇಟ್ (chocolate) ಖರೀದಿ ಮಾಡಲಿ ಎಂದು ದುಡ್ಡು ಕೊಟ್ಟು ಕಳಿಸುವ ಪೋಷಕರು ಹುಷಾರಾಗಿ ಇರುವುದು ಒಳಿತು. ಏಕೆಂದರೆ ತಿಂಡಿ ತಿನಿಸುಗಳ ಮಾರಾಟ ಭರದಲ್ಲಿ ಆಹಾರ ತಯಾರಕರು ಇಳಿದಿರುವ ಕೀಳು ಮಟ್ಟ ನಿಜಕ್ಕೂ ಅಸಹ್ಯ ಹುಟ್ಟಿಸುವಂತಿದೆ. ಥೇಟ್ ಮಾತ್ರೆಗಳ (Tablets) ರೂಪದಲ್ಲಿ ರಾಜಾರೋಷವಾಗಿ ಚಾಕಲೇಟ್ ಗಳ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ವಿದ್ಯಾರಣ್ಯಪುರ ಬಳಿಯ ಬಾಲಾಜಿ ಲೇಔಟ್, ರಾಘವೇಂದ್ರ ಕಾಲೋನಿ, ಚಿಕ್ಕ ಬೆಟ್ಟಹಳ್ಳಿ, ದೊಡ್ಡ ಬೆಟ್ಟಹಳ್ಳಿ ಸುತ್ತಮುತ್ತ ಅದರಲ್ಲೂ ಶಾಲೆಗಳ ಸುತ್ತಮುತ್ತ ಮಕ್ಕಳನ್ನ ಟಾರ್ಗೆಟ್ ಮಾಡಿ ಮಾತ್ರೆ ಸ್ವರೂಪದ ಚಾಕಲೇಟ್ ಗಳನ್ನು ಸೇಲ್ ಮಾಡುತ್ತಿರುವುದು ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ.

ಅಂಗಡಿ ವ್ಯಾಪಾರಿಗಳು ಕೂಡ ಮಕ್ಕಳು ತಗೆದುಕೊಳ್ಳುತ್ತಾರೆ ಎಂದು ಮಕ್ಕಳ ಹಿತಾಸಕ್ತಿ ಮರೆತು ಮಾರಾಟ ಮಾಡುತ್ತಿದ್ದಾರೆ. ಮಾತ್ರೆ ಸ್ವರೂಪದ ಚಾಕಲೇಟ್ ಪ್ಯಾಕೇಜಿಂಗ್ ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ FSSAI ಅನುಮತಿಯೂ ಇಲ್ಲ. ಆಹಾರ ತಯಾರಕರ ವಿಳಾಸವು ಇಲ್ಲದೆ ಸೇಲ್ ಮಾಡಲಾಗುತ್ತಿದೆ. ಇನ್ನು ಈ ಬಗ್ಗೆ ಆತಂಕ ವ್ಯಕ್ತಪಡಿಸುವ ಆಹಾರ ತಜ್ಞರು ಹಾಗೂ ವೈದ್ಯರು ತೀವ್ರ ಆತಂಕ ಹೊರಹಾಕಿದ್ದಾರೆ.
ಆಹಾರ ಇಲಾಖೆ, ಕಾನೂನು ಯಾವುದರ ಭಯವೂ ಇಲ್ಲದೆ ಇಷ್ಟು ರಾಜಾರೋಷವಾಗಿ ಈ ರೀತಿಯ ಉತ್ಪನ್ನಗಳನ್ನು ಸೇಲ್ ಮಾಡುತ್ತ ಅಮಾಯಕ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಲು ನಿಂತಿದ್ದಾರೆ. ಇವುಗಳನ್ನು ತಿನ್ನುತ್ತಾ, ನಿಜವಾದ ಮಾತ್ರೆಗಳನ್ನು ತಿಂದು ಏನಾದರೂ ಅನಾಹುತವಾದರೆ ಯಾರು ಹೊಣೆ? ಮತ್ತೊಂದೆಡೆ ಇದರ ಹಿಂದೆ ಬೇರೇನಾದರೂ ಉದ್ದೇಶ ಇರಬಹುದಾ ಎಂಬುವುದನ್ನ ಇನ್ನಾದರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *