Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನದಂಗಡಿಯಿಂದ 1 ಲಕ್ಷದ ಸರ ಹೊತ್ತೊಯ್ದ ಪಾರಿವಾಳ

Spread the love

ಜೈಪುರ: ಚಿನ್ನದ ಬೆಲೆ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. ಪ್ರತಿ ದಿನ ಬಂಗಾರ ಬೆಲೆ ದುಬಾರಿಯಾಗುತ್ತಲೇ ಹೋಗಿ ಕೈಗೆಟುಕದ ವಸ್ತುವಾಗಿದೆ. ಚಿನ್ನದ ಬೆಲೆ ದುಬಾರಿಯಾಗುತ್ತಿದ್ದಂತೆ ಸರಗಳ್ಳತನ, ಮನೆ ದೋಚಿ ಚಿನ್ನಾಭರಣ ಕಳವು, ಜ್ಯೂವೆಲ್ಲರಿ ಶಾಪ್ ದರೋಡೆ ಸೇರಿದಂತೆ ಹಲವು ಪ್ರಕರಣಗಳು ಹೆಚ್ಚಾಗುತ್ತಿದೆ. ಅಚ್ಚರಿ ಅಂದರೆ ಚಿನ್ನದ ಬೆಲೆ ದುಬಾರಿ ಎಂದು ಪ್ರಾಣಿ ಪಕ್ಷಿಗಳಿಗೂ ಗೊತ್ತಾಗಿದೆ. ಜ್ಯೂವೆಲ್ಲರಿ ಶಾಪ್‌ಗೆ ಒಳಗೆ ಹಾರಿಬಂದ ಪಾರಿವಾಳ ಚಿನ್ನದ ಸರ ಎಗರಿಸಿ ಹಾರಿ ಹೋದ ಅಚ್ಚರಿಯ ಘಟನೆ ರಾಜಸ್ಥಾನದ ದೇಗಾನ ಸಿಟಿಯಲ್ಲಿ ನಡೆದಿದೆ.

ಇದು ಅಚ್ಚರಿಯಾದರೂ ಸತ್ಯ

ಹೌದು, ಈ ಘಟನೆ ಹಲವರಿಗೆ ನಂಬಲು ಸಾಧ್ಯವಾಗಿಲ್ಲ. ಆದರೆ ದೆಗಾನ ಸಿಟಿ ಮಾರುಕಟ್ಟೆ ಜನ ಇದಕ್ಕೆ ಸಾಕ್ಷಿಯಾಗಿದ್ದಾರೆ. ಇಷ್ಟೇ ಅಲ್ಲ ಪಾರಿವಾಳ ಚಿನ್ನದ ಸರದ ಜೊತೆ ಕೆಲ ಹೊತ್ತು ಕಟ್ಟದ ಮೇಲೆ ಕುಳಿತಿರುವ ದೃಶ್ಯಗಳು ಸೆರೆಯಾಗಿದೆ. ದೆಗಾನಿ ಸಿಟಿಯಲ್ಲಿನ ಸಣ್ಣ ಜ್ಯೂವೆಲ್ಲರಿ ಶಾಪ್‌ನ ಮೇಲಿನ ಮಹಡಿಯಲ್ಲಿ ಸರಗಳನ್ನು ಮೇಕಿಂಗ್ ಮಾಡಲಾಗುತ್ತಿತ್ತು. ನುರಿತ ಕೆಲಸಗಾರರು ಚಿನ್ನದ ಸರದ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಪಾರಿವಾಳವೊಂದು ಹಾರಿ ಬಂದಿದೆ.

ಜ್ಯೂವೆಲ್ಲರಿ ಶಾಪ್‌ಗೆ ನುಗ್ಗಿದ ಪಾರಿವಾಳ

ಎರಡು ಮಹಡಿಯಲ್ಲಿ ಜ್ಯೂವೆಲ್ಲಿ ಶಾಪ್ ಇದೆ. ಒಂದು ಮಹಡಿಯಲ್ಲಿ ಜ್ಯೂವೆಲ್ಲಿ ಶಾಪ್ ಇದ್ದರೆ, ಮೇಲಿನ ಮಹಡಿಯಲ್ಲಿ ಸರ ಸೇರಿದಂತೆ ಚಿನ್ನ ಉತ್ಪನ್ನ ತಯಾರಿಸುವ ಘಟಕವಿದೆ. ಇಲ್ಲಿ ಕೆಲಸಗಾರರು ಒಂದೆರೆಡು ಚೈನ್, ಬ್ರಾಸ್‌ಲೇಟ್ ಸೇರಿದಂತೆ ಕೆಲ ಚಿನ್ನದ ಉತ್ಪನ್ನ ಮಾಡಿ ಇಟ್ಟಿದ್ದರು. ಮೇಲಿನ ಮಹಡಿಗೆ ಹಾರಿ ಬಂದ ಪಾರಿವಾಳ ಹೊರಗೆ ಹೋಗಲು ಚಡಪಡಿಸಿಲ್ಲ. ನೇರವಾಗಿ ಚಿನ್ನಗಳ ಸರಗಳು ಇಟ್ಟಿದ್ದ ಪಕ್ಕದಲ್ಲಿ ಕುಳಿತುಕೊಂಡಿದೆ. ಪಾರಿವಾಳವನ್ನು ಓಡಿಸಲು ಕೆಲಸಗಾರರು ಮಂದಾಗಿದ್ದಾರೆ. ಹೀಗಾಗಿ ತಾವು ಕುಳಿತ ಜಾಗದಿಂದ ಎದ್ದಿದ್ದಾರೆ. ಆದರೆ ಅಷ್ಟರಲ್ಲಿ ಪಾರಿವಾಳ ತನ್ನ ಕೊಕ್ಕಿನಲ್ಲಿ ಪಕ್ಕದಲ್ಲೇ ಇದ್ದ ಚಿನ್ನದ ಸರ ಕುಕ್ಕಿ ಎತ್ತಿಕೊಂಡು ಹಾರಿದೆ.

ನೋಡ ನೋಡುತ್ತಿದ್ದಂತೆ ಜ್ಯೂವೆಲ್ಲಿ ಶಾಪ್ ಮಾಲೀಕನ ಅರ್ಧ ಜೀವ ಹೋದ ರೀತಿ ಆಗಿದೆ. ಕಾರಣ ಬರೋಬ್ಬರಿ 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಪಾರಿವಾಳ ಒಂದು ಎತ್ತಿಕೊಂಡು ಹಾರಿ ಹೋಗಿತ್ತು. ಜ್ಯೂವೆಲ್ಲಿ ಶಾಪ್‌ನಿಂದ ಚಿನ್ನದ ಸರ ಹಿಡಿದು ಹಾರಿದ ಪಾರಿವಾಳ ಪಕ್ಕದ ಕಟ್ಟದಲ್ಲಿ ಹೋಗಿ ಕುಳಿತಿದೆ. ಜ್ಯೂವೆಲ್ಲಿ ಶಾಪ್ ಮಾಲೀಕ ಓಡೋಡಿ ಪಾರಿವಾಳದ ಮೇಲೆ ಕಣ್ಣು ರೆಪ್ಪಿ ಮಿಟುಕಿಸದೆ ನೋಡುತ್ತಾ ಪಾರಿವಾಳದಿಂದ ಹೇಗಾದರೂ ಮಾಡಿ ಸರ ಮರಳಿ ಪಡೆಯುವ ಪ್ರಯತ್ನ ಆರಂಭಿಸಿದ್ದಾನೆ. ಇತ್ತ ದೆಗಾನ್ ಸಿಟಿಯ ಹಲವು ವ್ಯಾಪಾರಿಗಳು, ಸ್ಥಳೀಯರು ನೆರವು ನೀಡಲು ಮುಂದೆ ಬಂದಿದ್ದಾರೆ. ಪಾರಿವಾಳ ಹಾರುವಾಗ ಈ ಚಿನ್ನದ ಸರ ಪಾರಿವಾಳದ ಕೊರಳಿಗೆ ಬಿದ್ದಿದೆ. ಕೊರಳಲ್ಲಿ ಚಿನ್ನದ ಸರ ಇಟ್ಟುಕೊಂಡು ಕೆಲ ಹೊತ್ತು ಕಟ್ಟಡದ ಮೇಲೆ ಕುಳಿತಿತ್ತು. ಹಲವರು ಪಾರಿವಾಳ ಹಿಡಿಯಲು ಕಟ್ಟದ ಮೇಲೆ ಹತ್ತಲು ಆರಂಭಿಸಿದ್ದಾರೆ. ಗಾಬರಿಗೊಂಡ ಪಾರಿವಾಳ ಅಲ್ಲಿಂದ ಮತ್ತೆ ಹಾರಿದೆ.

ಕೈಹಿಡಿದ ಅದೃಷ್ಟ

ಆದರೆ ಮಾಲೀಕ ಅದೃಷ್ಠ ಚೆನ್ನಾಗಿತ್ತು. ಕಟ್ಟಡ ಮೇಲಿನಿಂದ ಪಾರಿವಾಳ ಹಾರುವಾಗ ಚಿನ್ನದ ಸರ ಬಿದ್ದಿದೆ. ಅದೃಷ್ಠವಶಾತ್ ಈ ಚಿನ್ನದ ಸರ ಕಟ್ಟಡದ ಮೇಲೆ ಬಿದ್ದಿದೆ. ಬಳಿಕ ಸಿಬ್ಬಂದಿಗಳು ಮೇಲೆ ಹತ್ತಿ ಚಿನ್ನದ ಸರ ಮರಳಿ ತಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *