Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

PM ಮೋದಿ ಜೊತೆ ಫೋಟೋಶೂಟ್: ವಿಶ್ವಕಪ್ ಪದಕದಿಂದ ವಂಚಿತರಾಗಿದ್ದರೂ ಗೆಳೆಯ ಪ್ರತೀಕಾ ರಾವಲ್‌ಗೆ ಮೆಡಲ್ ಕೊಟ್ಟು ಹೃದಯ ಗೆದ್ದ ಅಮನ್‌ಜೋತ್ ಕೌರ್

Spread the love

ನವದೆಹಲಿ: ವಿಶ್ವಕಪ್ ವಿಜೇತ ಮಹಿಳಾ ಚಾಂಪಿಯನ್ಸ್ ತಂಡವು ಪ್ರಧಾನಿ ಮೋದಿ ಜೊತೆ ತೆಗೆಸಿಕೊಂಡ ಗ್ರೂಪ್ ಫೋಟೋ ಭಾರೀ ವೈರಲ್ ಆಗಿದೆ. ಈ ಫೋಟೋಶೂಟ್ ವೇಳೆ ತಾವು ಗೆದ್ದಿದ್ದ ವಿಶ್ವಕಪ್ ಪದಕವನ್ನು ಅಮನ್‌ಜೋತ್ ಕೌರ್ (Amanjot Kaur) ಅವರು ಪ್ರತೀಕಾ ರಾವಲ್‌ಗೆ (Pratika Rawal) ನೀಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬುಧವಾರ (ನ.5) ವಿಶ್ವಕಪ್ ವಿಜೇತ ಮಹಿಳಾ ಚಾಂಪಿಯನ್ಸ್ ತಂಡಕ್ಕೆ ಮೋದಿ (PM Modi) ಅವರು ತಮ್ಮ ನಿವಾಸಲ್ಲಿ ಔತಣ ನೀಡಿದ್ದರು. ಮಾತುಕತೆಯ ಬಳಿಕ ತಂಡದ ಎಲ್ಲರೂ ಪ್ರಧಾನಿ ಮೋದಿಯೊಂದಿಗೆ ವಿಶ್ವಕಪ್ ಟ್ರೋಫಿ ಹಿಡಿದುಕೊಂಡು ಎಲ್ಲರೂ ಒಟ್ಟಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ಅಮನ್‌ಜೋತ್ ಕೌರ್ ಕತ್ತಲ್ಲಿ ವಿಶ್ವಕಪ್‌ನಲ್ಲಿ ಗೆದ್ದ ಮೆಡಲ್ ಕಂಡುಬಂದಿಲ್ಲ. ಆದರೆ ವಿಶ್ವಕಪ್‌ನಲ್ಲಿ ಆಡದ ಪ್ರತೀಕಾ ರಾವಲ್ ಕುತ್ತಿಗೆಯಲ್ಲಿ ಮೆಡಲ್ ಇತ್ತು

ಹೌದು, ಅಮನ್‌ಜೋತ್ ಕೌರ್ ತಾವು ಗೆದ್ದ ಪದಕವನ್ನು ಪ್ರತೀಕಾ ರಾವಲ್‌ಗೆ ನೀಡಿದ್ದು, ಈ ಫೋಟೋ ಭಾರೀ ವೈರಲ್ ಆಗಿದೆ. ಅಭಿಮಾನಿಗಳು ಅಮನ್‌ಜೊತ್ ಕೌರ್ ಸ್ವಭಾವವನ್ನು ಕೊಂಡಾಡಿದ್ದಾರೆ.

2025ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರತೀಕಾ ರಾವಲ್ ಒಟ್ಟು 6 ಪಂದ್ಯಗಳನ್ನಾಡಿ 51.33 ಸರಾಸರಿಯಲ್ಲಿ 308 ರನ್ ಗಳಿಸಿದ್ದರು. ಬಾಂಗ್ಲಾದೇಶದ ವಿರುದ್ಧ ನವಿ ಮುಂಬೈನಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮೊಣಕಾಲಿನ ಸಮಸ್ಯೆಯಿಂದಾಗಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಶಫಾಲಿ ವರ್ಮಾ ತಂಡಕ್ಕೆ ಆಗಮಿಸಿದ್ದರು. ಐಸಿಸಿ ನಿಯಮಗಳ ಪ್ರಕಾರ, ತಂಡದ 15 ಆಟಗಾರರು ಮಾತ್ರ ವಿಶ್ವಕಪ್ ಪದಕವನ್ನು ಪಡೆಯುತ್ತಾರೆ. ಈ ಗೆಲುವಿನಲ್ಲಿ ಪ್ರತೀಕಾ ಪಾತ್ರವಿದ್ದರೂ ಕೂಡ ಪದಕದಿಂದ ವಂಚಿರಾದರು.

ಇನ್ನೂ ಇದೇ ವೇಳೆ ಟೀಂ ಇಂಡಿಯಾ ಆಟಗಾರ್ತಿಯರೆಲ್ಲರೂ ಸಹಿಹಾಕಿದ `ನಮೋ 1′ ಎಂದು ಬರೆದಿರುವ ಜೆರ್ಸಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು


Spread the love
Share:

administrator

Leave a Reply

Your email address will not be published. Required fields are marked *