Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಿಎಫ್‌ ಖಾತೆಯ ಮಾಹಿತಿ ಕೇವಲ ಮಿಸ್‌ಡ್ ಕಾಲ್‌ನಲ್ಲಿ – EPFO ಪರಿಚಯಿಸಿದ ಹೊಸ ಸೌಲಭ್ಯಗಳು!

Spread the love

ನೀವು ನೌಕರರ ಭವಿಷ್ಯ ನಿಧಿ (EPF) ಸದಸ್ಯರಾಗಿದ್ದೀರಾ..? ಹಾಗಿದ್ರೆ ನೀವು ಈ ಸುದ್ದಿಯನ್ನು ಓದಲೇ ಬೇಕು. ಹೌದು, ಪಿಎಫ್‌ ಖಾತೆಯಲ್ಲಿ ಇರುವ ಹಣವನ್ನು ತಿಳಿದುಕೊಳ್ಳಲು ನೀವು ಆನ್‌ಲೈನ್‌ನಲ್ಲಿ ಲಾಗಿನ್ ಆಗಬೇಕು ಆದರೆ ಇದೀಗ ಲಾಗಿನ್ ಅವಶ್ಯಕತೆ ಬೇಕಿಲ್ಲ.ಯಾಕೆಂದರೆ, ನೌಕರರ ಭವಿಷ್ಯ ನಿಧಿ (EPF) ಖಾತೆದಾರರಿಗೆ ತಮ್ಮ ಖಾತೆಯ ವಿವರಗಳನ್ನು ಸುಲಭವಾಗಿ ತಿಳಿಯಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹೊಸ ಮಾರ್ಗಗಳನ್ನು ಪರಿಚಯಿಸಿದೆ ಅದು ಯಾವುದು ಎಂಬ ಹೆಚ್ಚಿನ ವಿವರವನ್ನು ತಿಳಿದುಕೊಳ್ಳಲು ಮುಂದೆ ಓದಿ..

ಪಿಎಫ್‌ ಬ್ಯಾಲೆನ್ಸ್ ತಿಳಿದುಕೊಳ್ಳಲು ಜಸ್ಟ್ ಒಂದು ಮಿಸ್ ಕಾಲ್ ಸಾಕು. ಮಿಸ್ ಕಾಲ್ ಕೊಟ್ಟಿ ನಿಮ್ಮ ಹಣವನ್ನು ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಕೆಲವೇ ಸಕೆಂಡ್‌ಗಳಲ್ಲಿ ಮಿಸ್ಡ್ ಕಾಲ್ ಅಥವಾ SMS ಕಳುಹಿಸುವ ಮೂಲಕ ಈ ಮಾಹಿತಿಯನ್ನು ಪಡೆಯಬಹುದು.ಈ ಸೇವೆಯನ್ನು ಪಡೆದುಕೊಳ್ಳಲು ನೀಮ್ಮ ಬಳಿ ಸ್ಮಾರ್ಟ್‌ಫೋನ್ ಇದ್ದರೆ ಸಾಕು ಇಂಟರ್ನೆಟ್ ಕೂಡ ಬೇಕಾಗುವುದಿಲ್ಲ ಉಚಿನವಾಗಿ ನೀವು ಈ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಮಿಸ್ಡ್ ಕಾಲ್ ಸೇವೆ

EPFO ನೀಡುವ ಮಿಸ್ಡ್ ಕಾಲ್ ಸೇವೆಯು ಬಹಳ ಸರಳವಾಗಿದೆ. ನೀವು UAN-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಿಂದ 9966044425 ಗೆ ಮಿಸ್ಡ್ ಕಾಲ್ ನೀಡಿ . ಕರೆ ಸ್ವಯಂಚಾಲಿತವಾಗಿ ಸಂಪರ್ಕ ಕಟ್ ಆಗುತ್ತದೆ ಮತ್ತು ನಿಮ್ಮ ಇತ್ತೀಚಿನ ಕೊಡುಗೆ ಮತ್ತು PF ಬ್ಯಾಲೆನ್ಸ್ ಅನ್ನು ವಿವರಿಸುವ ಉಚಿತ SMS ಬರುತ್ತದೆ.

SMS ಸೇವೆ

“EPFOHO UAN” ಎಂಬ ಸಂದೇಶದೊಂದಿಗೆ 7738299899 ಗೆ SMS ಕಳುಹಿಸಿ . ನಿಮ್ಮ ಬ್ಯಾಲೆನ್ಸ್ ಮತ್ತು ಕೊನೆಯ ಕೊಡುಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಈ SMS ಸೇವೆಯನ್ನು ನೀವು ಬಹು ಭಾಷೆಗಳು ಸಹ ಪಡೆದುಕೊಳ್ಳಬಹುದು. ನಿಮ್ಮಗೆ ಪ್ರಾದೇಶಿಕ ಭಾಷಾ ಪ್ರತಿಕ್ರಿಯೆಗಳಿಗಾಗಿ,”UAN” ನಂತರ ಮೂರು ಅಕ್ಷರಗಳ ಭಾಷಾ ಕೋಡ್ ಅನ್ನು ಸೇರಿಸಿ. ಉದಾಹರಣೆಗೆ, “EPFOHO UAN HIN” (ಹಿಂದಿ) ಅಥವಾ “EPFOHO UAN TEL” (ತೆಲುಗು). ಬೆಂಬಲಿತ ಭಾಷೆಗಳಲ್ಲಿ ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ,ಮಲಯಾಳಂ, ಮರಾಠಿ, ಪಂಜಾಬಿ,ತಮಿಳು, ಮತ್ತು ತೆಲುಗು.ಇಪಿಎಫ್‌ಒದ ಸೇವೆ ಲಭ್ಯವಿದೆ.

PFO ಸೇವೆಗಳನ್ನು ಬಳಸುವ ಮುನ್ನ ಈ ಷರತ್ತುಗಳನ್ನು ಪಾಲಿಸಿ

UAN (Universal Account Number) ಸಕ್ರಿಯವಾಗಿರಬೇಕು.
ನಿಮ್ಮ UAN ಅನ್ನು ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ, ಮತ್ತು PAN ಕಾರ್ಡ್‌ನೊಂದಿಗೆ ಲಿಂಕ್ ಮಾಡಿರಬೇಕು.
ನಿಮ್ಮ ಮೊಬೈಲ್ ಸಂಖ್ಯೆ EPFO ಪೋರ್ಟಲ್‌ನಲ್ಲಿ ನೋಂದಾಯಿತ ಆಗಿರಬೇಕು ಮತ್ತು ಅದು OTP ಸ್ವೀಕರಿಸಲು ಸಾಧ್ಯವಾಗಬೇಕು.
ಈ ಮೂರು ಅವಶ್ಯಕತೆಗಳನ್ನು ಪೂರೈಸಿದ ನಂತರ, ನೀವು EPFO ನ ಡಿಜಿಟಲ್ ಸೇವೆಗಳನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದು.

EPF ಸೇವೆಗಳಲ್ಲಿ ಪ್ರಮುಖ ಬದಲಾವಣೆಗಳು ಇಲ್ಲಿವೆ.

ಆಟೋ ಕ್ಲೇಮ್ ಸೆಟಲ್ಮೆಂಟ್ ಸೌಲಭ್ಯ

ಮೇ 2024ರಿಂದ, ಶಿಕ್ಷಣ, ವಿವಾಹ, ಗೃಹ ಖರೀದಿ ಮತ್ತು ವೈದ್ಯಕೀಯ ಖರ್ಚುಗಳಿಗೆ ಸಂಬಂಧಿಸಿದಂತೆ 1 ಲಕ್ಷವರೆಗೆ ಇರುವ ಕ್ಲೇಮ್‌ಗಳನ್ನು EPFO ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ ವೇಗವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ.

ಮೃತ್ಯು ಕ್ಲೇಮ್ ಪ್ರಕ್ರಿಯೆಯಲ್ಲಿ ಸುಲಭ

ಅಧಾರ್ ವಿವರಗಳು ಲಭ್ಯವಿಲ್ಲದಿದ್ದರೂ, EPFO ಸದಸ್ಯರ ಕುಟುಂಬ ಸದಸ್ಯರು EPF ನಿಧಿಯನ್ನು ಪಡೆಯಲು‍ ಷರತ್ತುಗಳನ್ನು ಸರಳಗೊಳಿಸಿದೆ. ಅಧಾರ್ ಇಲ್ಲದಿದ್ದರೂ, ಸಂಬಂಧಿಕರ ದೃಢೀಕರಣದೊಂದಿಗೆ ಕ್ಲೇಮ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಪಿಂಚಣಿ ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆ

ಜನವರಿ 2025ರಿಂದ, EPFO ಕೇಂದ್ರಿತ ಪಿಂಚಣಿ ಪಾವತಿ ವ್ಯವಸ್ಥೆ (CPPS) ಅನ್ನು ಜಾರಿಗೆ ತಂದಿದೆ. ಈ ವ್ಯವಸ್ಥೆಯಿಂದ, ಯಾವುದೇ ಬ್ಯಾಂಕ್ ಖಾತೆಗೆ ಪಿಂಚಣಿ ಪಾವತಿ ನಡೆಯುತ್ತದೆ, ಮತ್ತು ಪಿಂಚಣಿ ಪಾವತಿ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ.

ಹಣ ವಾಪಸ್ಸು ಪ್ರಕ್ರಿಯೆಗೆ ATM ಸೌಲಭ್ಯ

EPFO, 2025-26 ಹಣಕಾಸು ವರ್ಷದಲ್ಲಿ, EPF ಸದಸ್ಯರಿಗೆ ATM ಕಾರ್ಡ್ ಮೂಲಕ EPF ನಿಧಿಯನ್ನು ವಾಪಸ್ ಪಡೆಯುವ ಸೌಲಭ್ಯವನ್ನು ಒದಗಿಸಲು ಯೋಜನೆ ರೂಪಿಸಿದೆ. ಈ ಮೂಲಕ, ಸದಸ್ಯರು ತಮ್ಮ EPF ನಿಧಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಹಣವನ್ನು ವಿತ್ ಡ್ರಾ ಮಾಡಬಹುದು.


Spread the love
Share:

administrator

Leave a Reply

Your email address will not be published. Required fields are marked *