ಚಿತ್ತಾಪುರ RSS ಪಥಸಂಚಲನಕ್ಕೆ ಶಾಂತಿಸಭೆ: ನ. 13 ಅಥವಾ 16ಕ್ಕೆ ಮೆರವಣಿಗೆಗೆ ಅವಕಾಶ ನೀಡಲು ಎಜಿ ಕಚೇರಿಯಲ್ಲಿ ಪ್ರಸ್ತಾವನೆ

ಬೆಂಗಳೂರು: ಕಲಬುರಗಿಯ ಚಿತ್ತಾಪುರದಲ್ಲಿ (Chittapur) ಆರ್ಎಸ್ಎಸ್ ಪಥಸಂಚಲನ (RSS Route March) ಸಂಬಂಧ ಧಾರವಾಡ ಹೈಕೋರ್ಟ್ (Dharawada High Court) ಪೀಠ ಸೂಚನೆಯಂತೆ ಮತ್ತೊಂದು ಶಾಂತಿಸಭೆ ನಡೆಸಲಾಗಿದೆ. ಅಡೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ (Shashi Kiran Shetty) ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆರ್ಎಸ್ಎಸ್ ಮುಖಂಡರು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಾಂತಿಸಭೆಯಲ್ಲಿ ಆರ್ಎಸ್ಎಸ್ನಿಂದ ಪ್ರಸ್ತಾವನೆಯನ್ನು ದಾಖಲಿಸಿಕೊಂಡಿರುವ ಎಜಿ ನವೆಂಬರ್ 7ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.
ಗುರುವಾರದಿಂದ 5 ದಿನಗಳ ಕಾಲ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೆಂಗಳೂರು ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗಲಿದ್ದಾರೆ.
ಆರ್ಎಸ್ಎಸ್ ಪ್ರಸ್ತಾವನೆ ಏನು?
ಇದೇ ತಿಂಗಳ 13 ಅಥವಾ 16 ರಂದು ಸಂಜೆ 3 ಗಂಟೆಯಿಂದ 6:30ರ ತನಕ ಪಥಸಂಚಲನಕ್ಕೆ ಅವಕಾಶ ನೀಡಿ. 3.1 ಕಿ.ಮೀ. ಪಥಸಂಚಲನ ಮಾಡಲಿದ್ದು 850 ಗಣವೇಷಧಾರಿಗಳು ಭಾಗಿಯಾಗುತ್ತಾರೆ.
4 ಸಾಲಿನ ಬದಲು 3 ಸಾಲಿನಲ್ಲಿ ಪಥಸಂಚಲನ ಮಾಡುತ್ತೇವೆ. ಪಥಸಂಚಲನಕ್ಕೆ ಕಲಬುರಗಿ ಜಿಲ್ಲೆಯವರು ಮಾತ್ರ ಭಾಗಿಯಾಗುತ್ತಾರೆ. ಹೊರಗಿನಿಂದ ಬರುವವರಿಗೆ ಅವಕಾಶ ಇಲ್ಲ.