ಭ್ರಷ್ಟಾಚಾರದಲ್ಲಿ ತೊಡಗಿದ್ದ ಪಿಡಿಓ ಅಮಾನತು: ಖಾಸಗಿ ವ್ಯಕ್ತಿಗಳ ಖಾತೆಗೆ ಅಕ್ರಮವಾಗಿ ಸರ್ಕಾರಿ ಹಣ ವರ್ಗಾವಣೆ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಹಣವನ್ನು ಅಕ್ರಮವಾಗಿ (Corruption) ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಿ ಭರಷ್ಟಾಚಾರದಲ್ಲಿ ತೊಡಗಿದ್ದ ಪಿಡಿಓ (PDO) ಎಹೆಚ್ ಮನಿಯಾರ್ ಎಂಬ ಅಧಿಕಾರಿ ಸಿಕ್ಕಿಬಿದ್ದಿದ್ದು, ಈ ವ್ಯಕ್ತಿಯನ್ನು ಧಾರವಾಡ (Dharwad) ಜಿಲ್ಲಾಡಳಿತ ಅಮಾನತು (Suspend) ಮಾಡಿ ಆದೇಶ ಹೊರಡಿಸಿದೆ.

ಆಗಸ್ಟ್ 31ರಂದು ಧಾರವಾಡದ ಗಳಗಿಹುಲಕೊಪ್ಪ ಗ್ರಾಮದಲ್ಲಿನ ಕರೆಂಟ್ ಬಿಲ್ ನಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಓ ಅಬ್ದುಲ್ ರಜಾಕ್ ಹೆಚ್ ಮನಿಯಾರ್ ಎಂಬ ಅಧಿಕಾರಿ ಸರ್ಕಾರದ ಹಣವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಿದ ಕುರಿತು ದಾಖಲೆಗಳು ಕೂಡ ಲಭ್ಯವಾಗಿದೆ.
ಹೀಗಾಗಿ ಜಿಲ್ಲೆಯ ಜಿ.ಪಂ ಸಿಇಓ ಭುವನೇಶ್ವರ ಅವರು ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದಾಗ ಈ ಗ್ರಾಮ ಪಂಚಾಯಿತಿ ಪಿಡಿಓ ಅಬ್ದುಲ್ ರಜಾಕ್ ಹೆಚ್ ಮನಿಯಾರ್ ಕಲ್ಲಾಟ ಬಯಲಾಗಿದ್ದು ಕೂಡಲೇ ಆತನ್ನು ಅಮಾನತು ಮಾಡಿ ಜಿ.ಪಂ ಸಿಇಓ ಭುವನೇಶ್ವರ ಆದೇಶ ಹೊರಡಿಸಿದ್ದಾರೆ.