Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಓಜಿ’ ಟ್ರೇಲರ್ ಇವೆಂಟ್‌ನಲ್ಲಿ ಮಳೆಯಲ್ಲಿ ನೆನೆದು ಅನಾರೋಗ್ಯಕ್ಕೀಡಾದ ಪವನ್ ಕಲ್ಯಾಣ್

Spread the love

ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಳೆಯಲ್ಲಿ ನೆನೆದ ಪರಿಣಾಮ ಅವರಿಗೆ ತೀವ್ರ ಜ್ವರ ಕಾಣಿಸಿದೆ. ಜ್ವರದ ಹೊರತಾಗಿಯೂ ಅವರು ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸಿದ್ದರು. ಇದರಿಂದ ಜ್ವರ ಉಲ್ಬಣಗೊಂಡಿದೆ. ವೈದ್ಯರ ಸಲಹೆ ಮೇರೆಗೆ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.

ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಸೆಪ್ಟೆಂಬರ್ 25ರಂದು ರಿಲೀಸ್ ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದ ಟ್ರೇಲರ್ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಹೀಗಿರುವಾಗಲೇ ಪವನ್ ಕಲ್ಯಾಣ್ ಅವರು ಹಾಸಿಗೆ ಹಿಡಿದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್. ಈ ವೇಳೆ ಅವರು ಮಳೆಯಲ್ಲಿ ನೆನೆದಿದ್ದರು. ಹೀಗಾಗಿ ಅವರಿಗೆ ತೀವ್ರ ಜ್ವರ ಕಾಣಿಸಿದೆ.

ಹೈದರಾಬಾದ್ ಎಲ್​ಬಿ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 21ರಂದು ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವೇದಿಕೆಯಲ್ಲೇ ಟ್ರೈಲರ್ ಲಾಂಚ್ ಆಗಬೇಕಿತ್ತು. ಆದರೆ, ಟ್ರೇಲರ್ ರೆಡಿ ಇರದ ಕಾರಣ ಅದನ್ನು ರಿಲೀಸ್ ಮಾಡಲು ಸಾಧ್ಯವಾಗಲೇ ಇಲ್ಲ. ಇದೇ ಸಮಯಕ್ಕೆ ಮಳೆ ಕೂಡ ಜೋರಾಯಿತು.

ಪವನ್ ಕಲ್ಯಾಣ್ ಅವರು 35-40 ನಿಮಿಷಗಳ ಕಾಲ ಮಳೆಯಲ್ಲೇ ಇದ್ದರು. ಇದರಿಂದ ಅವರಿಗೆ ಇನ್​ಫೆಕ್ಷನ್ ಆಗಿದ್ದು ಜ್ವರ ಬಂದಿದೆ ಎನ್ನಲಾಗಿದೆ. ಆದರೆ, ಪವನ್ ಕಲ್ಯಾಣ್ ಅವರು ಛಲ ಬಿಡುವ ವ್ಯಕ್ತಿಯಲ್ಲ. ಅವರು ಸೋಮವಾರ ಅಮರಾವತಿಗೆ ಪ್ರಯಾಣ ಬೆಳೆಸಿದ್ದು, ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗಿದ್ದರು. ಇದರಿಂದ ಜ್ವರ ಮತ್ತಷ್ಟು ಹೆಚ್ಚಿದೆ. ಹೀಗಾಗಿ, ವಿಶ್ರಾಂತಿಯಲ್ಲಿದ್ದಾರೆ.

‘ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ವೈರಲ್ ಜ್ವರ ಕಾಣಿಸಿದೆ. ಕಳೆದ ಎರಡು ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದಾರೆ. ಜ್ವರದ ಹೊರತಾಗಿಯೂ, ಅವರು ಸೋಮವಾರ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸೋಮವಾರ ರಾತ್ರಿಯಿಂದ ಜ್ವರದ ತೀವ್ರತೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ, ವೈದ್ಯರು ಪರೀಕ್ಷೆಗಳನ್ನು ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ. ಹೀಗಾಗಿ, ಅವರು ಕೆಲವು ದಿನ ವಿಶ್ರಾಂತಿಯಲ್ಲಿ ಇರಲಿದ್ದಾರೆ’ ಎಂದು ಪವನ್ ಕಲ್ಯಾಣ್ ತಂಡದವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘OG’ ಸಿನಿಮಾಗೆ ಸುಜಿತ್ ನಿರ್ದೇಶನ ಇದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಲು ಅವರು ಕೂಡ ಕಾರಣ. ಆದರೆ, ಸಿನಿಮಾ ರಿಲೀಸ್ ವೇಳೆ ಅವರು ಅಸ್ವಸ್ಥಗೊಂಡಿರುವುದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *