ಪಟೌಡಿ ಟ್ರೋಫಿಗೆ ಬದಲಾಗಿ ‘ತೆಂಡುಲ್ಕರ್-ಅ್ಯಂಡರ್ಸನ್ ಟ್ರೋಫಿ’: ಭಾರತ–ಇಂಗ್ಲೆಂಡ್ ಟೆಸ್ಟ್ ಸರಣಿಗೆ ಹೊಸ ಹೆಸರು

ಮುಂಬೈ:ಜೂನ್ 20 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಸರಣಿಗಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆಯಲ್ಲಿದೆ.
ಇತ್ತ ಬಿಸಿಸಿಐ ಹಾಗೂ ಇಸಿಬಿ ಹೊಸ ಹೆಸರಿನೊಂದಿಗೆ ಭಾರತ ಮತ್ತು ಇಂಗ್ಲೆಂಡ್ ಸರಣಿಯನ್ನು ಮುನ್ನಲೆಗೆ ತರುವ ಸಿದ್ಧತೆಯಲ್ಲಿದೆ. ಇದರ ಭಾಗವಾಗಿ ಇಂಡೊ-ಇಂಗ್ಲೆಂಡ್ ಸರಣಿಗೆ ‘ತೆಂಡುಲ್ಕರ್-ಅ್ಯಂಡರ್ಸನ್ ಟ್ರೋಫಿ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ಇದಕ್ಕೂ ಮೊದಲು ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ‘ಪಟೌಡಿ ಟ್ರೋಫಿ’ ಎಂದು ಕರೆಯಲಾಗುತ್ತಿತ್ತು. ಪಟೌಡಿ ಟ್ರೋಫಿಯನ್ನು ಮೊದಲ ಬಾರಿಗೆ 2007 ರಲ್ಲಿ ಆಡಲಾಯಿತು. ಭಾರತದ ಕ್ರಿಕೆಟ್ ದಂತಕಥೆಗಳಾದ ಇಫ್ತಿಕರ್ ಅಲಿ ಖಾನ್ ಪಟೌಡಿ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಗೌರವಾರ್ಥಕವಾಗಿ ಇಂಡೊ-ಇಂಗ್ಲೆಂಡ್ ಸರಣಿಯ ಟ್ರೋಫಿಗೆ ಪಟೌಡಿ ಎಂದು ನಾಮಕರಣ ಮಾಡಲಾಗಿತ್ತು.ಬಿಸಿಸಿಐ-ಇಸಿಬಿ ಇದೀಗ ಪಟೌಡಿ ಹೆಸರನ್ನು ತೆಗೆದು ಭಾರತ ಮತ್ತು ಇಂಗ್ಲೆಂಡ್ ಸರಣಿಗೆ ಸಚಿನ್ ತೆಂಡೂಲ್ಕರ್ ಹಾಗೂ ಜೇಮ್ಸ್ ಅ್ಯಂಡರ್ಸನ್ ಅವರ ಹೆಸರನ್ನಿಡಲು ನಿರ್ಧರಿಸಿದೆ. ಈ ನಿರ್ಧಾರದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಬಿಸಿಸಿಐಗೆ ವಿಶೇಷ ಮನವಿ ಮಾಡಿದ್ದು, ಲೆಜೆಂಡ್ ಕ್ರಿಕೆಟಿಗನ ಪರಂಪರೆಯನ್ನು ಮುಂದುವರೆ.