Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಮಾನದಲ್ಲಿ ಹರ್ ಹರ್ ಮಹದೇವ್ ಎಂದು ಕೂಗಿದ ಪ್ರಯಾಣಿಕ ಭದ್ರತಾ ಸಿಬ್ಬಂದಿಯ ವಶಕ್ಕೆ

Spread the love

ಸೆಪ್ಟೆಂಬರ್ 1 ಈ ಘಟನೆ ನಡೆದಿದ್ದು, ದೆಹಲಿಯಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಇಂಡಿಗೋ ವಿಮಾನ 6E 6571 ರಲ್ಲಿ ವಕೀಲರೊಬ್ಬರು ಈ ಕೆಲಸ ಮಾಡಿದ್ದಾರೆ. ವಿಮಾನವು ಪಾರ್ಕಿಂಗ್ ಬೇಯಲ್ಲಿ 30 ನಿಮಿಷಗಳಿಗೂ ಹೆಚ್ಚು ಕಾಲ ವಿಳಂಬವಾಗಿದೆ. ಈ ಸಮಯದಲ್ಲಿ ಹರ ಹರ ಮಹಾದೇವ್ ಎಂದು ಘೋಷಣೆ ಕೂಗಿದ ಘಟನೆ ನಡೆದಿದ್ದು, 31D ಯಲ್ಲಿ ಕುಳಿತಿದ್ದ ಪ್ರಯಾಣಿಕ ಇತರ ಪ್ರಯಾಣಿಕರಿಗೆ ಸಹ ತಮಗೆ ಸಾಥ್‌ ನೀಡುವಂತೆ ಸಹ ಕೇಳಿಕೊಂಡಿದ್ದಾರೆ. ಪ್ರಯಾಣಿಕನ ಈ ವರ್ತನೆಯಿಂದ ಇತರ ಪ್ರಯಾಣಿಕರಿಗೆ ಸಹ ಸಮಸ್ಯೆ ಆಗಿದ್ದು, ವಿಮಾನಯಾನ ಸಂಸ್ಥೆಯು ಈ ವಕೀಲನನ್ನ ಅಶಿಸ್ತಿನ ಪ್ರಯಾಣಿಕ ಎಂದು ಹೇಳಿ ಬೇಸರ ಹೊರ ಹಾಕಿದೆ. ಅಲ್ಲದೇ, ಕೋಲ್ಕತ್ತಾದಲ್ಲಿ ಇಳಿದ ನಂತರ ಅವರನ್ನ ಭದ್ರತಾ ಸಿಬ್ಬಂದಿ ವಶಕ್ಕೆ ನೀಡಲಾಗಿದೆ. ಕೇವಲ ಘೋಷಣೆ ಕೂಗಿದ್ದು ಮಾತ್ರವಲ್ಲದೇ, ಆ ವ್ಯಕ್ತಿ ಟೇಕ್ ಆಫ್ ಆದ ನಂತರ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಇತರರಿಗೆ ತೊಂದರೆ ನೀಡಿದ್ದಾನೆ ನೀಡಿದ್ದಾನೆ ಎಂದು ಇತರ ಪ್ರಯಾಣಿಕರು ಆರೋಪ ಮಾಡಿದ್ದಾರೆ ಎನ್ನಲಾಗಿದೆ. ದೂರ ದಾಖಲಿಸಿದ ವಿಮಾನಯಾನ ಸಂಸ್ಥೆ
ಇನ್ನು ಈ ಪ್ರಕರಣವನ್ನ ಇಂಡಿಗೋ ವಿಮಾನಯಾನ ಸಂಸ್ಥೆ ಗಂಭೀರವಾಗಿ ಪರಿಗಣಿಸಿದ್ದು, ಇದರ ಬಗ್ಗೆ ಅಧಿಕೃತ ಹೇಳಿಕೆಯನ್ನ ಸಹ ಬಿಡುಗಡೆ ಮಾಡಿದೆ. ತನ್ನ ಅಧಿಕೃತ ಹೇಳಿಕೆಯಲ್ಲಿ ಸಂಸ್ಥೆಯು ಸೆಪ್ಟೆಂಬರ್ 1 ರಂದು ದೆಹಲಿಯಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಇಂಡಿಗೋ ವಿಮಾನ 6E 6571ರಲ್ಲಿ ಪ್ರಯಾಣಿಕರೊಬ್ಬರು ಈ ರೀತಿ ಅಶಿಸ್ತಿನಿಂದ ವರ್ತನೆ ಮಾಡಿರುವ ವಿಚಾರ ಗೊತ್ತಾಗಿದೆ. ಮದ್ಯದ ಅಮಲಿನಲ್ಲಿ ಆ ಪ್ರಯಾಣಿಕರು ಈ ರೀತಿ ವರ್ತನೆ ಮಾಡಿದ್ದು, ವಿಮಾನದ ಸಿಬ್ಬಂದಿಗಳ ಜೊತೆ ಸಹ ಕೆಟ್ಟದಾಗಿ ವರ್ತಿಸಿ, ಉಳಿದ ಪ್ರಯಾಣಿಕರಿಗೆ ತೊಂದರೆ ಕೊಟ್ಟಿರುವುದು ಸಹ ತಿಳಿದು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.


Spread the love
Share:

administrator

Leave a Reply

Your email address will not be published. Required fields are marked *