Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

5 ಜಿಲ್ಲೆ ಪೊಲೀಸರಿಗೆ ತಲೆನೋವಾಗಿದ್ದ ಪಾಷಾ ಅರೆಸ್ಟ್! ಹಗಲಲ್ಲಿ ರೆಕ್ಕಿ, ರಾತ್ರಿಯಲ್ಲಿ ಐಷಾರಾಮಿ ಮನೆಗಳಲ್ಲೇ ಕೈಚಳಕ.

Spread the love

ಬೆಂಗಳೂರು : ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ನಟೋರಿಯಸ್ ಕಳ್ಳನನ್ನ ವಿದ್ಯಾರಣ್ಯಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಸೈಯ್ಯದ್ ಅಸ್ಲಾಂ ಪಾಷಾ, ಬಂಧಿತ ಆರೋಪಿ. ಇದುವರೆಗೂ ಕಳ್ಳತನದ ಕೆರಿಯರ್‌ನಲ್ಲಿ 150 ಕಳ್ಳತನ ಕೇಸ್‌ಗಳಲ್ಲಿ ಆರೋಪಿ. ಕಳ್ಳತನದ ತಂತ್ರಗಳು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಹಗಲಲ್ಲಿ ಐಷಾರಾಮಿಗಳ ಮನೆಗಳ ರೆಕ್ಕಿ, ಕತ್ತಲಲ್ಲಿ ಕೈಚಳ:

ಆರೋಪಿ ವೃತ್ತಿಪರ ಖತರ್ನಾಕ್ ಕಳ್ಳನಾಗಿದ್ದು ಹಗಲೆಲ್ಲ ಐಷಾರಾಮಿ ಮನೆಗಳನ್ನ ರೆಕ್ಕಿ ಮಾಡುತ್ತಿದ್ದ. ರಾತ್ರಿಯಾಗುತ್ತಿದ್ದಂತೆ ಕೈಚಳಕ ತೋರಿಸುತ್ತಿದ್ದ ಖದೀಮ. ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ದರೆ ಕುತ್ತಿಗೆಯಲ್ಲಿರುವ ಸರಗಳನ್ನು ಎಗರಿಸಿ ಎಸ್ಕೇಪ್ ಯಾರದು ಎನ್ನುವಷ್ಟರಲ್ಲೆ ಎಸ್ಕೇಪ್ ಆಗಿಬಿಡುತ್ತಿದ್ದ. ಇನ್ನು ಕಿಟಕಿ ಪಕ್ಕದಲ್ಲಿ ಮೇನ್ ಡೋರ್ ಇದ್ದರೆ, ಕಿಟಕಿ ಗ್ಲಾಸ್ ಒಡೆದು ಡೋರ್ ಓಪನ್ ಮಾಡುತ್ತಿದ್ದ ಆರೋಪಿ.

ಮನೆಗಳನ್ನ ಹೇಗೆ ಗುರುತಿಸುತ್ತಿದ್ದ ಗೊತ್ತಾ?

ಹಾಲು, ಪೇಪರ್ ಮನೆ ಬಳಿ ಹಾಗೆ ಬಿದ್ದಿದ್ದರೆ, ಮೇನ್ ಡೋರ್ ಲಾಕ್ ಆಗಿದ್ದರೆ ಅದನ್ನು ಟಾರ್ಗೆಟ್. ಇನ್ನು ಮನೆಯಲ್ಲಿನ ಎಲ್ಲ ಲೈಟ್‌ಗಳು ಆಫ್ ಆಗಿರುವುದು, ಮನೆಯ ಗೇಟ್ ಹೊರಗಿನಿಂದ ಲಾಕ್ ಆಗಿರುವುದು ಎಂದರೆ ಕಳ್ಳತನಕ್ಕೆ ಸೂಕ್ತ ಸ್ಥಳ ಎಂದು ಗುರುತಿಸಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ ಆರೋಪಿ.

ರಾತ್ರಿ ಕಳ್ಳತನ, ಹಗಲು ಮೋಜುಮಸ್ತಿ

ಒಂದು ಏರಿಯಾ ಒಂದು ವರ್ಷಕಳ್ಳತನದಿಂದ ಬಂದ ಹಣದಲ್ಲಿ ಮೋಜುಮಸ್ತಿ ಮಾಡಿ ಹಣವನ್ನು ಖಾಲಿ ಮಾಡುತ್ತಿದ್ದ ಅಸ್ಲಾಂ ಪಾಷಾ, ಒಂದು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದರೆ ಆ ಕೇಸ್ ಹಳೇದಾಗುವವರೆಗೂ (ಕನಿಷ್ಟ ಒಂದು ವರ್ಷ) ಮತ್ತೆ ಆ ಏರಿಯಾಗೆ ಕಾಲಿಡದಂತೆ ತಂತ್ರ ರೂಪಿಸಿದ್ದ. ಇದರಿಂದಾಗಿ ಐದು ಜಿಲ್ಲೆಗಳಲ್ಲಿ ಅವನ ಕಳ್ಳತನಗಳು ನಿರಂತರವಾಗಿ ಮುಂದುವರಿದಿದ್ದವು.ಸದ್ಯ ವಿದ್ಯಾರಣ್ಯಪುರ ಪೊಲೀಸ್‌ರಿಂದ ಖರ್ತನಾಕ್ ಕಳ್ಳನ ವಿಚಾರಣೆ ನಡೆಯುತ್ತಿದ್ದು, ಇನ್ನಷ್ಟು ಕಳ್ಳತನ ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ ಇವೆ. ಕುಖ್ಯಾತ ಕಳ್ಳನ ಬಂಧನವು ಈ ಪ್ರದೇಶದ ನಿವಾಸಿಗಳಿಗೆ ನಿಟ್ಟುಸಿರು ಬಿಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *