‘ಪೋಷಕರು ಅಸೌಖ್ಯದಲ್ಲಿ’ ಎಂದರೂ ರಜೆ ಇಲ್ಲ: ಬಾಸ್ ವರ್ತನೆಗೆ ತೀವ್ರ ವಿರೋಧ

ಕುಟುಂಬ ಮತ್ತು ಕೆಲಸ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮೊದಲು ಆಯ್ಕೆ ಮಾಡಿಕೊಳ್ಳುವುದು ಕುಟುಂಬವನ್ನು. ಕೆಲಸ ಮಾಡುವುದೇ ಕುಟುಂಬಗೋಸ್ಕರ, ಕುಟುಂಬವೇ ಇಲ್ಲ ಎಂದ ಮೇಲೆ ಯಾರಿಗಾಗಿ ದುಡಿಯಬೇಕು ಎನ್ನುವುದು ಕೆಲವರ ವಾದ, ಇನ್ನು ಕೆಲವರು ಕೆಲಸವೇ ಸರ್ವ ಎಂದುಕೊಂಡು ಕುಟುಂಬವನ್ನು ದೂರು ಮಾಡಿಕೊಳ್ಳುತ್ತಾರೆ. ಹೀಗೆ ಪರ – ವಿರೋಧ ವಾದಗಳು ಇರುತ್ತದೆ. ಅದರಲ್ಲೂ ಕೆಲವೊಂದು ಕಂಪನಿಗಳು ಮನುಷ್ಯತ್ವವನ್ನು ಮರೆತು, ನಡೆದುಕೊಳ್ಳುತ್ತದೆ. ಕೆಲಸ ಮಾಡುವ ಉದ್ಯೋಗಿಗಳನ್ನು ಯಂತ್ರದಂತೆ ನಡೆಸಿಕೊಳ್ಳುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ಕೆಲವೊಂದು ಪೋಸ್ಟ್ಗಳು ವೈರಲ್ ಆಗುತ್ತ ಇರುತ್ತದೆ. ಇದೀಗ ಇಲ್ಲೊಂದು ರೆಡ್ಡಿಟ್ನಲ್ಲಿ ಪೋಸ್ಟ್ವೊಂದು ವೈರಲ್ ಆಗಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಭಾರತೀಯ ಬಾಸ್ಗಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ವಿವರವಾಗಿ ಹಂಚಿಕೊಳ್ಳಲಾಗಿದೆ.

ರೆಡ್ಡಿಟ್ ಬಳಕೆದಾರರೊಬ್ಬರು ತನ್ನ ಸ್ನೇಹಿತೆಗೆ ಆಗಿರುವ ಅವಮಾನ ಹಾಗೂ ಹಿಂಸೆಯ ಬಗ್ಗೆ ಹೇಳಿಕೊಂಡಿದ್ದಾರೆ, ವೇತನವಿಲ್ಲದೆ ಇಂಟರ್ನ್ ಆಗಿ ದುಡಿಯುತ್ತಿದ್ದ ಆಕೆಗೆ ರಜೆ ನಿರಾಕರಣೆ ಮಾಡಿರುವ ಬಗ್ಗೆ ಅವರು ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅನಾರೋಗ್ಯ ಪೀಡಿತ ಪೋಷಕರನ್ನು ನೋಡಿಕೊಳ್ಳಲು ಒಂದು ದಿನ ರಜೆ ತೆಗೆದುಕೊಂಡಿದ್ದಕ್ಕಾಗಿ ಇಂಟರ್ನ್ನನ್ನು ಅವಮಾನಿಸಿರುವ ಸಂದೇಶದ ಸ್ಕ್ರೀನ್ಶಾಟ್ನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಸ್ನೇಹಿತೆ ವೇತನವಿಲ್ಲದ ಇಂಟರ್ನ್ಶಿಪ್ ಮಾಡುತ್ತಿದ್ದಾಳೆ. ಅವಳ ಬಾಸ್ ಅವಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದು, ಅವಳ ಮೇಲೆ ದಬ್ಬಾಳಿಕೆಯನ್ನು ನಡೆಸಿದ್ದಾರೆ. ಈ ಬಗ್ಗೆ ಅವಳ ಮತ್ತು ಬಾಸ್ ನಡುವಿನ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್ಶಾಟ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್ಶಾಟ್ನಲ್ಲಿ ಹೀಗಿದೆ, ‘ಸರ್ ನಿಮಗೆ ಈ ಬಗ್ಗೆ ತಿಳಿಸಲು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಇಂದು ಆಫೀಸ್ಗೆ ಬರಲು ಸಾಧ್ಯವಿಲ್ಲ. ಯಾಕೆಂದರೆ ನನ್ನ ಪೋಷಕರು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ನಾನು ಮನೆಯಲ್ಲಿ ಇರಬೇಕಾದ ಅಗತ್ಯವಿದೆ. ಹೀಗಾಗಿ ನಾನು ಅನಿವಾರ್ಯವಾಗಿ ರಜೆ ತೆಗೆದುಕೊಳ್ಳಬೇಕಾಗಿದೆ. ಜತೆಗೆ ನಾನು ನೀವು ನೀಡಿದ ಕೆಲಸವನ್ನು ಮುಗಿಸಿದ್ದೇನೆ ಎಂದು ಹೇಳಿದ್ದಾರೆ.
ಆ ಸಂದೇಶಕ್ಕೆ ಬಾಸ್ ನೀಡಿದ ಉತ್ತರ ಹೀಗಿತ್ತು, ‘ನೀವು ಎಲ್ಲೋ ಇಂಟರ್ನ್ಶಿಪ್ ಮಾಡುತ್ತಿರುವಾಗ ಒಂದು ಜವಾಬ್ದಾರಿಯೂ ಇರುತ್ತದೆ. ಇಲ್ಲಿ ಏನಾದರೂ ದೊಡ್ಡ ಮಟ್ಟದ ಕೆಲಸವನ್ನು ನೀಡಿದ್ರೆ ನೀವು ಮೂರು ದಿನದ ಮೊದಲೇ ಕಾಣೆಯಾಗುತ್ತೀರಾ…ಏನೇ ಇರಲಿ ನಿಮ್ಮ ಆಯ್ಕೆ… ಇದು ನಿಮ್ಮ ಕೆಲಸದ ಬಗ್ಗೆ ಗಂಭೀರತೆಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ. ಇನ್ನು ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಒಬ್ಬ ಬಳಕೆದಾರ ಇಂಟರ್ನ್ ಒಂದು ದಿನ ರಜೆ ತೆಗೆದುಕೊಂಡ ಕಾರಣ, ಅಲ್ಲಿನ ಕೆಲಸಕ್ಕೆ ತೊಂದರೆ ಆಗುತ್ತದೆ ಎಂದರೆ, ಇಂಟರ್ನ್ಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ಇಂಟರ್ನ್ಗಳಿಗೆ ಸಂಬಳ ನೀಡಬೇಕು ಮತ್ತು ಅವರಿಗೆ ಮಾಡಲು ಸಾಧ್ಯವಾಗದ ಕೆಲಸಗಳನ್ನು ನೀಡಬಾರದು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಭಾರತೀಯ ಬಾಸ್ಗಳು ವೇಷ ಧರಿಸಿ ಕೆಲಸ ಮಾಡುವ ದೆವ್ವಗಳು, ಆದರೆ ಅವರು ತುರ್ತು ರಜೆ ನೀಡುವುದಿಲ್ಲ ಎಂಬ ಮಾತು ಒಪ್ಪಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
