ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ ಆಚರಣೆ: ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಸ್ಮರಿಸಿದ ಧರ್ಮೇಂದ್ರ ಪ್ರಧಾನ್

ನವದೆಹಲಿ: ಪಂಚಾಯತ್ನಿಂದ ಪಾರ್ಲಿಮೆಂಟ್ವರೆಗೆ ಅಧಿಕಾರಕ್ಕೇರಿರುವ ಬಿಜೆಪಿಗೆ ಜನಸಂಘದ ಕಾಲದಲ್ಲೇ ವೈಚಾರಿಕ ನೆಲೆಗಟ್ಟನ್ನು ರೂಪಿಸಿಕೊಟ್ಟ ಧೀಮಂತರು ಪಂಡಿತ್ ದೀನದಯಾಳರು. ಇಂದು ಅವರ ಜನ್ಮದಿನ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರು 1916 ರಲ್ಲಿ ಮಥುರಾದಲ್ಲಿ ಜನಿಸಿದರು ಮತ್ತು 1953 ರಿಂದ 1968 ರವರೆಗೆ ಭಾರತೀಯ ಜನಸಂಘಕ್ಕೆ ಸೇವೆ ಸಲ್ಲಿಸಿದ್ದರು. ಬಿಜೆಪಿ ಸ್ಥಾಪನೆಯಾದಾಗಿನಿಂದ ಅವರು ಅದಕ್ಕೆ ಸೈದ್ಧಾಂತಿಕ ಮಾರ್ಗದರ್ಶನ ಮತ್ತು ನೈತಿಕ ಸ್ಫೂರ್ತಿಯ ಮೂಲವಾಗಿದ್ದರು. ಫೆಬ್ರವರಿ 1968 ರಲ್ಲಿ ಮುಘಲ್ಸರಾಯ್ ಜಂಕ್ಷನ್ ರೈಲ್ವೆ ನಿಲ್ದಾಣದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದರು.ನಂತರ 2018 ರಲ್ಲಿ ಯುಪಿ ಸರ್ಕಾರವು ಈ ರೈಲ್ವೆ ನಿಲ್ದಾಣವನ್ನು ದೀನದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಿತ್ತು.
