Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾಕಿಸ್ತಾನದ ಗ್ವಾದರನಲ್ಲಿ ಐಇಡಿ ಸ್ಫೋಟ: 8 ಭದ್ರಾತಾ ಸಿಬ್ಬಂದಿ ಸಾವು

Spread the love

ಕರಾಚಿ: ಪಾಕಿಸ್ತಾನದಲ್ಲಿ (Pakistan News) ಉಗ್ರರ ರೌಡ್ರತಾಂಡವ ಮತ್ತೆ ಜೋರಾಗಿದ್ದು, ಅಪರಿಚಿತ ದಾಳಿಕೋರರು ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹೋರಾಟಗಾರರು ಶಹಬಾಜ್ ಸರ್ಕಾರಕ್ಕೆ (IED Blast) ಚಿಂತೆಯನ್ನು ಹೆಚ್ಚಿಸಿದ್ದಾರೆ.ಇದಿಗ ಬಂದಿರುವ ಮಾಹಿತಿಯ ಪ್ರಕಾರ, ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್ ನಗರದಲ್ಲಿ ಶುಕ್ರವಾರ ಭಾರಿ ಐಇಡಿ ಸ್ಫೋಟ ಸಂಭವಿಸಿದ್ದು, ಈ ಐಇಡಿ ಸ್ಫೋಟದಲ್ಲಿ 8 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪಡಿಜಾರ್ ಪ್ರದೇಶದ ಮೆರೈನ್ ಡ್ರೈವ್‌ನ ಜಿಪಿಎ ಕಚೇರಿಯ ಬಳಿ ಈ ದಾಳಿ ನಡೆದಿದ್ದು, ಗುರುತಿಸಲಾಗದ ದಾಳಿಕೋರರು ಮಿಲಿಟರಿ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

ಈ ಭಾರೀ ಸ್ಫೋಟದಲ್ಲಿ ಇತರ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಈ ದಾಳಿಯು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಮಾಡಿರುವ ಸಾಧ್ಯತೆ ಇದೆ. ಆದರೂ ಯಾವುದೇ ಗುಂಪು ಇನ್ನೂ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಭದ್ರತಾ ಪಡೆಗಳು ತನಿಖೆ ಆರಂಭಿಸಿವೆ.

ಇತ್ತೀಚಿನ ದಿನಗಳಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ ವಿರುದ್ಧ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಮಾರ್ಚ್ 11, 2025 ರಂದು, ಬಿಎಲ್‌ಎ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಅಪಹರಿಸಿ, ಹಲವಾರು ಸೈನಿಕರು ಸೇರಿದಂತೆ 400 ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿತು. ಈ ದಾಳಿಯಲ್ಲಿ 25 ಜನರು ಸಾವನ್ನಪ್ಪಿದ್ದರು.

ಇದಾದ ನಂತರ, ಮಾರ್ಚ್ 16 ರಂದು, ನೊಶ್ಕಿಯಲ್ಲಿ ಬಸ್ ಮೇಲೆ ದಾಳಿ ಮಾಡುವ ಮೂಲಕ 90 ಸೈನಿಕರನ್ನು ಕೊಂದಿರುವುದಾಗಿ ಬಿಎಲ್‌ಎ ಹೇಳಿಕೊಂಡಿತು. ಈ ದಾಳಿಗಳು ಬಲೂಚಿಸ್ತಾನ ಮತ್ತು ಪಾಕಿಸ್ತಾನಿ ಆಡಳಿತದಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯ ವಿರುದ್ಧ ಬಿಎಲ್‌ಎ ನಡೆಸುತ್ತಿರುವ ಹೋರಾಟದ ಭಾಗವಾಗಿದ್ದು, ಪಾಕಿಸ್ತಾನದ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.

ಇದಕ್ಕೂ ಮುನ್ನ, ಗುರುವಾರ ವಾಯುವ್ಯ ಪಾಕಿಸ್ತಾನದಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದರು. ಸ್ವಾತ್ ಮತ್ತು ಮನ್ಸೆಹ್ರಾ ಜಿಲ್ಲೆಗಳ ಗಡಿಯಲ್ಲಿರುವ ಗುಡ್ಡಗಾಡು ಜಿಲ್ಲೆಯಾದ ಶಾಂಗ್ಲಾದ ಮಲಕ್ ಖೇಲ್ ಕೊಟ್ಕೆಯಲ್ಲಿ ಕಾರು ಕಾಲುವೆಗೆ ಬಿದ್ದು ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆ ಜಾರಿದ್ದರಿಂದ ಕಾರು ಕಾಲುವೆಗೆ ಬಿದ್ದಿತು ಎಂದು ಅವರು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *