ಪಹಲ್ಗಾಮ್ ದಾಳಿಗೆ ಪಾಕಿಸ್ತಾನಿ ವೀಸಾ ರದ್ದು: ಪತಿ ಕರೆ ಸ್ವೀಕರಿಸುವುದಿಲ್ಲ ಮಹಿಳೆಯ ಅಳಲು

ಕಾಶ್ಮೀರ :ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನಿಗಳ ವೀಸಾಗಳನ್ನು ರದ್ದು ಮಾಡಿದ್ದು ಕೂಡಲೇ ದೇಶ ತೊರೆಯುವಂತೆ ಆದೇಶ ಮಾಡಿದೆ.ಆದ್ರೆ ಇಲ್ಲೊಬ್ಬಳು ಮಹಿಳೆ ತನ್ನ ಪಾಕಿಸ್ತಾನಿ ಪತಿ ತನ್ನ ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ.
ಆಕೆ ಹೇಳಿಕೊಂಡಿರುವಂತೆ ಆಕೆಯ ದಾದಾ, ದಾದಿ ಮತ್ತು ಗಂಡ ಯಾರೊಬ್ಬರು ಸಂಪರ್ಕಕ್ಕೆ ಸಿಗುತ್ತಿಲ್ಲ. ತನ್ನ ಕರೆಗಳನ್ನು ಉತ್ತರಿಸುತ್ತಿಲ್ಲ, ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಲು ಸಹ ಬರುತ್ತಿಲ್ಲ ಎಂದಿದ್ದಾಳೆ.
ಈ ಮಹಿಳೆ ಹೇಳಿಕೊಳ್ಳುವಂತೆ ಆಕೆಗೆ ಮದುವೆಯಾಗಿ 10 ವರ್ಷಗಳಾಗಿವೆ. ಈಕೆಗೆ ಮೂವರು ಮಕ್ಕಳಿದ್ದಾರೆ ಆದರೆ ಇದುವರೆಗೂ ಪಾಕಿಸ್ತಾನಕ್ಕೆ ತೆರಳಿಲ್ಲ.ಭಾರತೀಯರು ಪಾವತಿಸುವ ತೆರಿಗೆಯಿಂದ ನಿಧಿಯನ್ನು ಪಡೆಯುವ ಉಚಿತ ಆರೋಗ್ಯ ಸೇವೆ, ಪಡಿತರ ಮತ್ತು ಸರ್ಕಾರಿ ಯೋಜನೆಗಳನ್ನು ಪಡೆಯಲು ಆಕೆ ಇನ್ನೂ ತನ್ನ ಭಾರತೀಯ ಪಾಸ್ಪೋರ್ಟ್ ಹೊಂದಿದ್ದಾಳೆ.
ಭಾರತ ಪಾಕಿಸ್ತಾನದ ನಡುವೆ ಯುದ್ಧ ಕಾರ್ಮೋಡ ಕವಿದಿದ್ದು, ಭಾರತ ಈಗಾಗಲೇ ಸಾಕಷ್ಟು ರಾಜತಾಂತ್ರಿಕ ಕ್ರಮಗಳ ಮೂಲಕ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಲು ಮುಂದಾಗಿದ್ದು, ಈ ಮಧ್ಯೆ ಈ ಮಹಿಳೆಯ ವಿಡಿಯೋ, ಇನ್ನು ಯಾರೆಲ್ಲಾ ನಮ್ಮ ತೆರಿಗೆಯ ಲಾಭ ಪಡೆಯುತ್ತಿದ್ದಾರೆ ಎಂದು ಭಾರತೀಯರು ಯೋಚಿಸುವಂತೆ ಮಾಡಿದೆ.