ಪ್ರವಾಹ ಬಾಧಿತರಿಗೆ “ಬಕೆಟ್‌ಗಳಲ್ಲಿ ನೀರು ಸಂಗ್ರಹಿಸಿಕೊಳ್ಳಿ ” ಎಂದ ಪಾಕಿಸ್ತಾನ ರಕ್ಷಣಾ ಸಚಿವ

ಇಸ್ಲಾಮಾಬಾದ್ – ಪಾಕಿಸ್ತಾನದಲ್ಲಿ ಪ್ರವಾಹದಿಂದ 850ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಜನರು ಪ್ರವಾಹದ ನೀರನ್ನು ‘ಆಶೀರ್ವಾದ’ ಎಂದು ಪರಿಗಣಿಸಿ ಅದನ್ನು ಮನೆಗಳಲ್ಲಿ ಬಕೆಟ್ ಮತ್ತು ಟಬ್‌ಗಳಲ್ಲಿ ಸಂಗ್ರಹಿಸಿ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.

ಇದಕ್ಕೆ ಪಾಕಿಸ್ತಾನದ ಜನರು ಆಕ್ರೋಶಗೊಂಡಿದ್ದು, ಸಂತ್ರಸ್ತ ಜನರಿಗೆ ಸಹಾಯ ಮಾಡಲು ಸರಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಇದಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ರಕ್ಷಣಾ ಸಚಿವರ ಹೇಳಿಕೆಯನ್ನು ಜನರು ಗೇಲಿ ಮಾಡುತ್ತಿದ್ದಾರೆ.
ಚೆನಾಬ್ ಮತ್ತು ಸಟ್ಲೆಜ್ ನದಿಗಳ ಪ್ರವಾಹದಿಂದ ಮುಂದಿನ ಕೆಲವು ದಿನಗಳಲ್ಲಿ ಪಾಕಿಸ್ತಾನದ ಇನ್ನಷ್ಟು ಪ್ರದೇಶಗಳು ಮುಳುಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
