Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧ ಏಕಕಾಲಕ್ಕೆ ಯುದ್ಧಕ್ಕೆ ಸಿದ್ಧ ಎಂದ ಪಾಕ್ ರಕ್ಷಣಾ ಸಚಿವ.

Spread the love

ಪಾಕಿಸ್ತಾನ ಭಾರತದ ವಿರುದ್ಧ ಒಂದಲ್ಲ ಒಂದು ಹೇಳಿಕೆ ನೀಡುತ್ತ ಬಂದಿದೆ. ಅದರೆ ಇಲ್ಲಿಯವರೆಗೆ ನೀಡಿದ ಹೇಳಿಕೆಯಂತೆ ಪಾಕ್ ನಡೆದುಕೊಂಡಿಲ್ಲ. ಈ ಹಿಂದೆ ಭಾರತವನ್ನು ಮಾತ್ರ ಟಾರ್ಗೆಟ್​​ ಮಾಡುತ್ತಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ವಿರುದ್ಧವು ಕಿಡಿಕಾರಿದೆ. ಯಾವಾಗ ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಭಾರತಕ್ಕೆ ಬಂದ್ರು ಅಲ್ಲಿಂದ ಪಾಕಿಸ್ತಾನಕ್ಕೆ ಉರಿ ಶುರುವಾಗಿದೆ. ಇದೀಗ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಭಾರತ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಯುದ್ಧ ಅಗತ್ಯತೆ ಬಗ್ಗೆ ಮಾತನಾಡಿದ್ದಾರೆ. ಅಗತ್ಯವಿದ್ದರೆ ಇಸ್ಲಾಮಾಬಾದ್ ಎರಡು ಕಡೆ ಯುದ್ಧ ಮಾಡಲು ಸಿದ್ಧವಾಗಿದೆ, ಒಂದು ತಾಲಿಬಾನ್ ವಿರುದ್ಧ ಮತ್ತು ಇನ್ನೊಂದು ಭಾರತದ ವಿರುದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನ ಎರಡು ಕಡೆ ಯುದ್ಧಕ್ಕೆ ಸಿದ್ಧವಾಗಿದೆ, ಭಾರತ ಗಡಿಯಲ್ಲಿ “ಕೊಳಕು ಆಟವಾಡುವ” ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಮಾಧ್ಯಮ ಈ ಬಗ್ಗೆ ಅವರನ್ನು ಪ್ರಶ್ನೆ ಮಾಡಿದೆ. ಭಾರತ ಗಡಿಯಲ್ಲಿ ಯಾವೆಲ್ಲ ಚಟುವಟಿಕೆಯನ್ನು ಮಾಡುತ್ತಿದೆ ಎಂದು ಕೇಳಿದ್ದರೆ, ಆದರೆ ಅದಕ್ಕೆ ಪಾಕ್ ರಕ್ಷಣಾ ಸಚಿವನ ಉತ್ತರ ಇಲ್ಲ. ಈ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ, ತಂತ್ರಗಳು ಈಗಾಗಲೇ ಜಾರಿಯಲ್ಲಿವೆ ಎಂದು ಹೇಳಿದ್ದಾರೆ.

ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ತೀವ್ರ ಘರ್ಷಣೆ:

ಕಾಬೂಲ್ ಮತ್ತು ಕಂದಹಾರ್‌ನಲ್ಲಿರುವ ಟಿಟಿಪಿ (ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್) ಶಿಬಿರಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ ನಂತರ ತಾಲಿಬಾನ್ ಜತೆಗೆ ಮತ್ತಷ್ಟು ದ್ವೇಷ ಕಟ್ಟಿಕೊಂಡಿದೆ. ಪಾಕ್​​ ಮಾಡಿದ ದಾಳಿಗೆ ತಾಲಿಬಾನ್ ಕೂಡ ಪ್ರತಿಕಾರವಾಗಿ ದಾಳಿಯನ್ನು ನಡೆಸಿದೆ. ಈ ದಾಳಿಯನ್ನು ತಾಲಿಬಾನ್​​ 58 ಪಾಕಿಸ್ತಾನಿ ಸೈನಿಕರನ್ನು ಕೊಂದಿದೆ ಮತ್ತು ಟ್ಯಾಂಕ್‌ಗಳು ಸೇರಿದಂತೆ ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಂಡಿದೆ. ದಾಳಿಗಳಲ್ಲಿ 200 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ಹೇಳಿಕೊಂಡಿದೆ. ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಾಲಿಬಾನ್​​ ನಡುವೆ ಕದನ ವಿರಾಮ ಪ್ರಯತ್ನ ಮಾಡಲಾಗಿತ್ತು. ಆದರೆ ಈ ಮಧ್ಯಸ್ಥಿಕೆ ವಿಫಲಗೊಂಡಿದೆ. ಪಾಕ್​​​​ – ಅಫ್ಘಾನಿಸ್ತಾನದ ನಡುವಿನ ಸಂಘರ್ಷದ ವೇಳೆ ತಾಲಿಬಾನ್ ಹೋರಾಟಗಾರರು, ಪಾಕಿಸ್ತಾನಿ ಟ್ಯಾಂಕ್‌ಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ತಾಲಿಬಾನ್​​ ಜತೆಗೆ ಸಂಘರ್ಷ ಮಾಡಲಾಗದೇ ಪಾಕ್​​ ಸೈನಿಕರು ಪಲಾಯನ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಕೂಡ ವೈರಲ್​​ ಆಗಿತ್ತು. ಈ ವಿಡಿಯೋ ಪಾಕ್​​​​ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದೆ.

ಭಯೋತ್ಪಾದನೆಯನ್ನು ಹೊರತುಪಡಿಸಿ ಏನನ್ನೂ ತಂದಿಲ್ಲ : ರಕ್ಷಣಾ ಸಚಿವ ಖವಾಜಾ ಆಸಿಫ್

ಪಾಕಿಸ್ತಾನದಲ್ಲಿರುವ ಆಫ್ಘನ್ ನಿರಾಶ್ರಿತರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಆಸಿಫ್, “ಭಯೋತ್ಪಾದನೆಯನ್ನು ಹೊರತುಪಡಿಸಿ ಏನನ್ನೂ ತಂದಿಲ್ಲ, ಮತ್ತೆ ನಿಮ್ಮ ತವರೂರಿಗೆ ಬನ್ನಿ. ನಾವು ಅವರಿಂದ ಏನು ಗಳಿಸಿದ್ದೇವೆ? ಭಯೋತ್ಪಾದನೆಯನ್ನು ಹೊರತುಪಡಿಸಿ ಬೇರೇನೂ ಇಲ್ಲ, ಈಗ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ, ಬಹುಪಾಲು ಆಫ್ಘನ್ನರು ಹಿಂತಿರುಗಬೇಕು. ಪಾಕಿಸ್ತಾನ ಸರ್ಕಾರವು ದಾಖಲೆರಹಿತ ಆಫ್ಘನ್ ವಲಸಿಗರ ಮೇಲೆ ಕಠಿಣ ಕ್ರಮ ಕೈಗೊಂಡಿದೆ” ಎಂದು ಹೇಳಿದ್ದಾರೆ.

ಭಾರತದ ಪರವಾಗಿ ತಾಲಿಬಾನ್ ಕಾರ್ಯನಿರ್ವಹಿಸುತ್ತಿದೆ: ಆಸಿಫ್

ತಾಲಿಬಾನ್ ಭಾರತದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಸಿಫ್ ಆರೋಪಿಸಿದ್ದಾರೆ. ದೆಹಲಿಯಿಂದ ಹಣಕಾಸು ನೆರವು ಪಡೆdu ಪ್ರಾಕ್ಸಿ ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಫ್ಘಾನ್ ತಾಲಿಬಾನ್‌ನ ನಿರ್ಧಾರಗಳನ್ನು ದೆಹಲಿ ಮಾಡಲಾಗುತ್ತದೆ. ತಾಲಿಬಾನ್ ವಿದೇಶಾಂಗ ಸಚಿವ ಮುತಾಕಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದನ್ನು ಅವರು ಉಲ್ಲೇಖಿಸಿ, ಪಾಕಿಸ್ತಾನದ ವಿರುದ್ಧ ರಹಸ್ಯ ಯೋಜನೆಯನ್ನು ನಡೆಸಲಾಗುತ್ತಿದೆ ಎಂದು ಆಸಿಫ್ ಹೇಳಿದ್ದಾರೆ.

ಗುಪ್ತಚರ ವೈಫಲ್ಯ , ಪಾಕ್‌ಗೆ ಮಿಲಿಟರಿ ಮುಜುಗರ

ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಹಾಗೂ ಮಿಲಿಟರಿ ಉಪಕರಣಗಳನ್ನು ತಾಲಿಬಾನ್ ಹೋರಾಟಗಾರರು ಸುಲಭವಾಗಿ ವಶಪಡಿಸಿಕೊಂಡಿರುವುದು ಗುಪ್ತಚರ ಮತ್ತು ಕಣ್ಗಾವಲು ವೈಫಲ್ಯ ಎಂದು ಹೇಳಲಾಗಿದೆ. ಇದರಿಂದ ಪಾಕ್‌ಗೆ ಮಿಲಿಟರಿ ಮುಜುಗರ ಉಂಟಾಗಿದೆ. ಒಂದು ವಾರದ ದಾಳಿಯಲ್ಲಿ ಪ್ರತೀಕಾರದ ಶೆಲ್ ದಾಳಿ ಮತ್ತು 100 ಕ್ಕೂ ಹೆಚ್ಚು ಸಾವುಗಳ ಸಂಭವಿಸಿದ ನಂತರ ತಾತ್ಕಾಲಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲಾಯಿತು. ಆದರೆ ಎರಡೂ ಕಡೆಗಳಲ್ಲಿ ವಿಶ್ವಾಸ ಇರಲಿಲ್ಲ ಎಂದು ಹೇಳಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *