Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹೋದರಿಗೆ 10 ವಿಕೆಟ್ ಸಾಧನೆ ಅರ್ಪಿಸಿದ ವೇಗಿ ಆಕಾಶ್ ದೀಪ್: “ನಾವೆಲ್ಲರೂ ನಿನ್ನೊಂದಿಗಿದ್ದೇವೆ”!

Spread the love

“ನಾವೆಲ್ಲರೂ ನಿಮ್ಮೊಂದಿಗಿದ್ದೇವೆ”ಎಜ್‌ಬಾಸ್ಟನ್:‌ “ಕೈಯಲ್ಲಿ ಚೆಂಡು ಹಿಡಿದಾಗಲೆಲ್ಲಾ, ಆಕೆಯ ಕುರಿತ ಆಲೋಚನೆಗಳು ನನ್ನ ಮನಸ್ಸನ್ನು ಮುಟ್ಟುತ್ತಿದ್ದವು”. ಇದು ಕ್ಯಾನ್ಸರ್‌ಪೀಡಿತ ಸಹೋದರಿಯನ್ನುನೆನೆದು, ಎಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 10 ವಿಕೆಟ್‌ ಕಬಳಿಸಿ ಮೆರೆದ ಭಾರತದ ವೇಗಿ ಆಕಾಶ್‌ ದೀಪ್‌ ಅವರ ಭಾವುಕ ನುಡಿಗಳು.

ಹೌದು, ಆಕಾಶ್‌ ದೀಪ್‌ ಅವರು ತಮ್ಮ 10 ವಿಕೆಟ್‌ ಸಾಧನೆಯನ್ನು, ತಮ್ಮ ಕ್ಯಾನ್ಸರ್‌ಪೀಡಿತ ಸಹೋದರಿಗೆ ಅರ್ಪಿಸಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ, ಆಕಾಶ್‌ ದೀಪ್‌ ಅವರು ಎರಡು ಇನ್ನಿಂಗ್ಸ್‌ನಿಂದ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಆಕಾಶ್‌ ದೀಪ್‌, ತಮ್ಮ ಅದ್ಭುತ ಪ್ರದರ್ಶನವನ್ನು ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಮ್ಮ ಸಹೋದರಿಗೆ ಅರ್ಪಿಸುವುದಾಗಿ ಹೇಳಿದರು.

ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತದ 336 ರನ್‌ಗಳ ಸರಣಿ ಸಮಬಲದ ಗೆಲುವಿನಲ್ಲಿ, ಪಶ್ಚಿಮ ಬಂಗಾಳದ ವೇಗಿ 10 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ಇದು ಆಕಾಶ್‌ ದೀಪ್‌ ಅವರ ಇದುವರೆಗಿನ ಅತ್ಯುತ್ತಮ ಟೆಸ್ಟ್‌ ಪ್ರದರ್ಶನವಾಗಿದೆ. “ನಾನು ಇದರ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ ಆದರೆ ಎರಡು ತಿಂಗಳ ಹಿಂದೆ, ನನ್ನ ತಂಗಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವಳು ನನ್ನ ಪ್ರದರ್ಶನದಿಂದ ತುಂಬಾ ಸಂತೋಷಪಡುತ್ತಾಳೆ ಮತ್ತು ಭಾರತ ತಂಡದ ಗೆಲುವು ಆಕೆಯ ನಗುವನ್ನು ಮರಳಿ ತರುತ್ತದೆ” ಎಂದು ಆಕಾಶ್‌ ದೀಪ್‌ ಭಾವುಕರಾಗಿ ಹೇಳಿದ್ದಾರೆ.

ನಾನು ಚೆಂಡನ್ನು ಕೈಗೆತ್ತಿಕೊಂಡಾಗಲೆಲ್ಲಾ ಅವಳ ಆಲೋಚನೆಗಳು ಮತ್ತು ಆಕೆಯ ಮುಖ ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿತ್ತು. ನನ್ನ
ಈ ಪ್ರದರ್ಶನ ಅವಳಿಗೆ ಸಮರ್ಪಿತವಾಗಿದೆ. ನಾವೆಲ್ಲರೂ ನಿನ್ನೊಂದಿಗಿದ್ದೇವೆ ಎಂದು ನಾನು ಅವಳಿಗೆ ಹೇಳಲು ಬಯಸುತ್ತೇನೆ” ಎಂದು ಆಕಾಶ್ ದೀಪ್‌ ಅವರು ಜಿಯೋ ಹಾಟ್‌ಸ್ಟಾರ್‌ನಲ್ಲಿ ಚೇತೇಶ್ವರ ಪೂಜಾರ ಅವರೊಂದಿಗೆ ಮಾತನಾಡುತ್ತಾ, ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಪಂದ್ಯದ ಬಗ್ಗೆ ಮಾತನಾಡುತ್ತಾ, “ನಾವು ಒಂದು ತಂಡವಾಗಿ ಜಾರಿಗೆ ತಂದ ಯೋಜನೆಗಳು ಮತ್ತು ಪ್ರಕ್ರಿಯೆಗಳು ಅದ್ಭುತವಾಗಿ ಕೆಲಸ ಮಾಡಿವೆ. ಹಾರ್ಡ್ ಲೆಂತ್‌ಗಳಲ್ಲಿ ಸೀಮ್‌ನ್ನು ಚುರುಕುಗೊಳಿಸುವುದು ನನ್ನ ಮುಖ್ಯ ಗುರಿಯಾಗಿತ್ತು” ಎಂದು ಭಾರತದ ವೇಗಿ ಆಕಾಶ್‌ ದೀಪ್‌ ಹೇಳಿದ್ದಾರೆ.

ಇದೇ ವೇಳೆ ಇಂಗ್ಲೆಂಡ್‌ ಬ್ಯಾಟ್ಸಮನ್‌ಗಳಾದ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ವಿಕೆಟ್‌ ಕಬಳಿಸಲು ಹೆಣೆದ ಯೋಜನೆ ಬಗ್ಗೆ ಮಾತನಾಡಿರುವ ಆಕಾಶ್‌ ದೀಪ್, ಕ್ರಮಬದ್ಧ ಯೋಜನೆ ಮತ್ತು ತಂಡದ ಸಹಕಾರದಿಂದ ಅವರ ವಿಕೆಟ್‌ ಕಬಳಿಸಲು ಸಾಧ್ಯವಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಜುಲೈ 10-14 ರವರೆಗೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಭಾರತ vs ಇಂಗ್ಲೆಂಡ್‌ ಮೂರನೇ ಟೆಸ್ಟ್‌ನಲ್ಲಿ ಆಡುವ ಅಥವಾ ಆಡದಿರುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ಆಕಾಶ್‌ ದೀಪ್‌, “ಸದ್ಯ ನಾನು ಎಜ್‌ಬಾಸ್ಟನ್‌ ಟೆಸ್ಟ್‌ ಗೆಲುವು ಸಂಭ್ರಮವನ್ನು ಸವಿಯಲಿದ್ದೇನೆ. ಲಾರ್ಡ್ಸ್‌ಗಾಗಿ ನನ್ನ ಆಟದ ಯೋಜನೆಯ ಬಗ್ಗೆ ನಾನು ಯೋಚಿಸಿಲ್ಲ. ಆದರೆ ಅದು ಇಲ್ಲಿರುವುದಕ್ಕಿಂತ ಹೆಚ್ಚು ಭಿನ್ನವಾಗಿರುವುದಿಲ್ಲ” ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *