ಓಯೋ: ₹623 ಕೋಟಿ ಲಾಭದೊಂದಿಗೆ ಭಾರತದ ಅಗ್ರ ಸ್ಟಾರ್ಟ್‌ಅಪ್

ಓಯೋ ಚಮತ್ಕಾರ..! ಬರೋಬ್ಬರಿ 623 ಕೋಟಿ ರೂಪಾಯಿ ಲಾಭ.. ಇದುವೇ ಭಾರತದ ಅಗ್ರ ಸ್ಟಾರ್ಟ್‌ಅಪ್. ಹೌದು, ಓಯೋ (OYO) ಹೋಟೆಲ್ ವಿಶ್ವದ ಪ್ರಮುಖ ಹೋಟೆಲ್ ಅಗ್ರೀಗೇಟರ್ ಕಂಪನಿಯಾಗಿದೆ. ಈ ಆತಿಥ್ಯ ದೈತ್ಯ 2024-25ನೇ ಆರ್ಥಿಕ ವರ್ಷದಲ್ಲಿ 623 ಕೋಟಿ ರೂ. ಲಾಭ ಗಳಿಸಿದೆ.
ಇದರೊಂದಿಗೆ, ಓಯೋ ಲಾಭದ ವಿಷಯದಲ್ಲಿ ಭಾರತದ ಅಗ್ರ ಸ್ಟಾರ್ಟ್‌ಅಪ್ ಹೊರಹೊಮ್ಮಿದೆ. ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರೇ ಖುದ್ದು ಈ ಬಗ್ಗೆ ಉದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ.
ಓಯೋ ಆರ್ಥಿಕ ವರ್ಷ 2025 ರಲ್ಲಿ 1,132 ಕೋಟಿ ರೂ. EBITDA, ಕಳೆದ ವರ್ಷ ಇದೇ ಅವಧಿಯಲ್ಲಿ ನೋಡಿದರೆ 889 ಕೋಟಿ ರೂಪಾಯಿ. ಇದಲ್ಲದೆ ಕಳೆದ ವರ್ಷದಿಂದ ಶೇ. 27 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಓಯೋ ಶೇರು ಆದಾಯ (EPS) FY25 ರಲ್ಲಿ 0.93 ರಷ್ಟು ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, FY24 ರಲ್ಲಿ ಈ ಅಂದಾಜು 0.36 ಆಗಿದೆ. ಇನ್ನೂ ಈ ಬಾರಿ ಶೇ.158 ರಷ್ಟು ಹೆಚ್ಚಳವನ್ನು ತೋರಿಸುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಓಯೋ ಗ್ರಾಸ್ ಬುಕಿಂಗ್ ವ್ಯಾಲ್ಯೂ (GBV) ನಲ್ಲಿ ಶೇ.54 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ 16,436 ಕೋಟಿ ರೂ.ಗೆ ಏರಿಕೆಯಾಗಿದೆ. ಇದರ ಆದಾಯವು 6,463 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದಿಂದ ಶೇ. 20 ರಷ್ಟು ಬೆಳವಣಿಗೆಯನ್ನು ಕಂಡಿದೆ.
4ನೇ ತ್ರೈಮಾಸಿಕ ಫಲಿತಾಂಶಗಳು
FY24 ರ ಇದೇ ಅವಧಿಗೆ ಹೋಲಿಸಿದರೆ, FY25 ರ 4ನೇ ತ್ರೈಮಾಸಿಕದಲ್ಲಿ ಓಯೋ GBV ಶೇ.126 ರಷ್ಟು ಹೆಚ್ಚಾಗಿ 6,379 ಕೋಟಿ ರೂ.ಗೆ ತಲುಪಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಆದಾಯ 1,872 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕಿಂತ ಶೇ. 41 ರಷ್ಟು ಹೆಚ್ಚಾಗಿದೆ.
ವಿಶ್ವಾದ್ಯಂತ 22,700 ಹೋಟೆಲ್‌ಗಳು
ಕಳೆದ 12 ತಿಂಗಳುಗಳಲ್ಲಿ, ಕಂಪನಿಯು ಭಾರತ, ಸೌದಿ ಅರೇಬಿಯಾ, ಯುಎಇ ಮತ್ತು ಆಗ್ನೇಯ ಏಷ್ಯಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 30ಕ್ಕೂ ಹೆಚ್ಚು ಸಂಡೇ (ಭಾನುವಾರ) ಹೋಟೆಲ್‌ಗಳನ್ನು ತೆರೆಯುವ ಮೂಲಕ ತನ್ನ ಪ್ರೀಮಿಯಂ ಕೊಡುಗೆಯನ್ನು ವಿಸ್ತರಿಸಿದೆ. ಓಯೋ ಪ್ರಸ್ತುತ ವಿಶ್ವಾದ್ಯಂತ ಸುಮಾರು 22,700 ಹೋಟೆಲ್‌ಗಳು ಮತ್ತು 1,19,900 ರೂಮ್ ಹೊಂದಿದೆ.
ಐಪಿಒಗೆ ಪಟ್ಟಿ ಮಾಡುವ ಯೋಜನೆ ಮುಂದೂಡಿದೆ
ವರದಿಯ ಪ್ರಕಾರ, ಓಯೋ ಹೋಟೆಲ್ಸ್ ಅಕ್ಟೋಬರ್‌ನಲ್ಲಿ ಐಪಿಒಗೆ ಪಟ್ಟಿ ಮಾಡುವ ಯೋಜನೆಯನ್ನು ಮುಂದೂಡಿದೆ ಎಂದು ಹೇಳಲಾಗಿದೆ. ರಿತೇಶ್ ಅಗರ್ವಾಲ್ ನೇತೃತ್ವದ ಕಂಪನಿಯು ಈ ವರ್ಷದ ಕೊನೆಯಲ್ಲಿ ಐಪಿಒ ಪ್ರಾರಂಭಿಸಲು ಯೋಜಿಸುತ್ತಿದೆ. ಆದರೂ, ಹೂಡಿಕೆದಾರ ಸಾಫ್ಟ್‌ಬ್ಯಾಂಕ್ ಈ ಯೋಜನೆಯನ್ನು ಒಪ್ಪಲಿಲ್ಲ. ಆದಾಯ ಹೆಚ್ಚಾಗುವವರೆಗೆ ಐಪಿಒ ವಿಳಂಬ ಮಾಡುವಂತೆ ಸಾಫ್ಟ್‌ಬ್ಯಾಂಕ್ ಓಯೋಗೆ ಕೇಳಿದೆ. ಜಪಾನಿನ ಹೂಡಿಕೆ ಸಂಸ್ಥೆಯು ಓಯೋದಲ್ಲಿ ಶೇ.40 ರಷ್ಟು ಪಾಲನ್ನು ಹೊಂದಿದ್ದರೆ, ಸಂಸ್ಥಾಪಕ ಅಗರ್ವಾಲ್ ಶೇ.30 ರಷ್ಟು ಪಾಲನ್ನು ಹೊಂದಿದ್ದಾರೆ.
ಈ ಅದ್ಭುತ ಬೆಳವಣಿಗೆಯೊಂದಿಗೆ, ಓಯೋ (OYO) ಲಾಭ ಗಳಿಸೆ. ಅಲ್ಲದೆ, ಸರಿಯಾದ ಯೋಜನೆ ಮತ್ತು ನಾವೀನ್ಯತೆಯೊಂದಿಗೆ, ಪ್ರಯಾಣ ವಲಯದಲ್ಲಿ ದೊಡ್ಡ ಪ್ರಮಾಣದ ಲಾಭವನ್ನು ಸಾಧಿಸಬಹುದು ಎಂಬುದಕ್ಕೆ ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಬಲವಾದ ಉದಾಹರಣೆಯನ್ನು ಸ್ಥಾಪಿಸಿದೆ.
OYO ರೂಮ್ಸ್ ಬೇಕು ಅಂದ್ರೆ ಇದು ಕಡ್ಡಾಯ
ID ತಪಾಸಣೆ ಚೆಕ್-ಇನ್ ಸಮಯದಲ್ಲಿ ಎಲ್ಲಾ ಅತಿಥಿಗಳು ಮಾನ್ಯತೆ ಪಡೆದ ಸರ್ಕಾರಿ ಗುರುತಿನ ಚೀಟಿ (ID Proof) ನೀಡಬೇಕು.
ಮಾನ್ಯ ID ಗಳು: ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ವೋಟರ್ ID, ಡ್ರೈವಿಂಗ್ ಲೈಸೆನ್ಸ್.
ಪ್ಯಾನ್ ಕಾರ್ಡ್ ಸಾಮಾನ್ಯವಾಗಿ ಮಾನ್ಯ ID ಆಗಿ ಸ್ವೀಕರಿಸಲಾಗುವುದಿಲ್ಲ.
ಅವಿವಾಹಿತ ಜೋಡಿಗಳಿಗೆ ರೂಮ್ ನೀಡಲಾಗುವುದು, ಆದರೆ ಇದನ್ನು ಬುಕ್ ಮಾಡುವ ಮುನ್ನ “Couple-Friendly” ಟ್ಯಾಗ್ ಇರುವ ಹೋಟೆಲ್‌ಗಳನ್ನು ಮಾತ್ರ ಆಯ್ಕೆಮಾಡಬೇಕು.
ಜೋಡಿಗಳು 18 ವರ್ಷಕ್ಕಿಂತ ಮೇಲಾಗಿರಬೇಕು ಹಾಗೂ ID ಹಾಕಲೇಬೇಕು.
ಸ್ಥಳೀಯ ID ಹೊಂದಿರುವ ಅತಿಥಿಗಳು:
ಕೆಲವು ಹೋಟೆಲ್ಸ್ ಸ್ಥಳೀಯ (local) ಐಡಿ ಹೊಂದಿರುವವರಿಗೆ ರೂಮ್ ನೀಡುವುದಿಲ್ಲ. ಹೀಗಾಗಿ ಬುಕ್ಕಿಂಗ್ ಮಾಡುವಾಗ ಇದರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಉತ್ತಮ.