Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೌದಿಯಲ್ಲಿ 12,000 ಕ್ಕೂ ಹೆಚ್ಚು ವಲಸಿಗರ ಬಂಧನ

Spread the love

ರಿಯಾದ್:ವಾಸ್ತವ್ಯ, ಉದ್ಯೋಗ ಮತ್ತು ಗಡಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ 12,129 ವಲಸಿಗರನ್ನು ಸೌದಿ ಆಂತರಿಕ ಮಂತ್ರಾಲಯವು ಒಂದು ವಾರದೊಳಗೆ ಬಂಧಿಸಿದೆ. ವಾಸ್ತವ್ಯ ನಿಯಮ ಉಲ್ಲಂಘನೆಗಾಗಿ 7,127 ಜನರನ್ನು, ಅನಧಿಕೃತವಾಗಿ ಗಡಿ ದಾಟಲು ಪ್ರಯತ್ನಿಸಿದ್ದಕ್ಕಾಗಿ 3,441 ಜನರನ್ನು ಮತ್ತು ಉದ್ಯೋಗ ನಿಯಮ ಉಲ್ಲಂಘನೆಗಾಗಿ 1,561 ಜನರನ್ನು ಬಂಧಿಸಲಾಗಿದೆ.

ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಲು ಯತ್ನಿಸಿದ್ದಕ್ಕಾಗಿ ಬಂಧಿತರಾದ 1,197 ಜನರಲ್ಲಿ ಶೇ.63ರಷ್ಟು ಇಥಿಯೋಪಿಯನ್ನರು, ಶೇ.34ರಷ್ಟು ಯೆಮೆನ್ನರು ಮತ್ತು ಶೇ.3ರಷ್ಟು ಇತರ ದೇಶಗಳವರು. ಇದರೊಂದಿಗೆ 90 ಇಥಿಯೋಪಿಯನ್ನರನ್ನು ಬಂಧಿಸಲಾಗಿದೆ. ಕಾನೂನು ಉಲ್ಲಂಘಿಸುವವರನ್ನು ಸಾಗಿಸುವುದರಲ್ಲಿ ಮತ್ತು ವಸತಿ ಕಲ್ಪಿಸುವುದರಲ್ಲಿ ಭಾಗಿಯಾಗಿದ್ದಕ್ಕಾಗಿ 18 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಲು ಸಹಾಯ ಮಾಡುವವರಿಗೆ, ಸಾರಿಗೆ ಮತ್ತು ವಸತಿ ಸೌಲಭ್ಯ ಒದಗಿಸುವವರಿಗೆ ಗರಿಷ್ಠ 15 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರಿಯಾಲ್ ದಂಡ ವಿಧಿಸಲಾಗುತ್ತದೆ. ವಾಹನಗಳು ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಮಂತ್ರಾಲಯ ತಿಳಿಸಿದೆ. ಅನುಮಾನಾಸ್ಪದ ಕಾನೂನು ಉಲ್ಲಂಘನೆಗಳನ್ನು ಮಕ್ಕಾ ಮತ್ತು ರಿಯಾದ್ ಪ್ರದೇಶಗಳಲ್ಲಿ 911 ಟೋಲ್ ಫ್ರೀ ಸಂಖ್ಯೆಗೆ ಮತ್ತು ದೇಶದ ಇತರ ಭಾಗಗಳಲ್ಲಿ 999 ಅಥವಾ 996 ಸಂಖ್ಯೆಗೆ ವರದಿ ಮಾಡಬಹುದು.

ಗಲ್ಫ್‌ ದೇಶಗಳಲ್ಲಿ ಕಾನೂನುಗಳು ಕಠಿಣವಾಗಿದ್ದು, ತಪ್ಪಿದ ಎಲ್ಲರಿಗೂ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ. ಹೀಗಾಗಿ ಉದ್ಯೋಗ ಅಥವಾ ಯಾವುದೇ ರೀತಿಗೆ ಈ ದೇಶಗಳಿಗೆ ಪ್ರಯಾಣಿಸಬೇಕಾದರೆ ತಪ್ಪದೆ ಕಾನೂನು ನಿಯಮಗಳನ್ನು ಪಾಲಿಸಲು ಮರೆಯಬೇಡಿ.


Spread the love
Share:

administrator

Leave a Reply

Your email address will not be published. Required fields are marked *