Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಓಸ್ಲೋ: ಅಮೆರಿಕ ರಾಯಭಾರಿ ಕಚೇರಿ ಆವರಣದಲ್ಲಿ ಸ್ಫೋಟ; ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ

Spread the love

ಒಲ್ಲೋ: ನಾರ್ವೆ ರಾಜಧಾನಿ ಓಪ್ಲೊದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯಲ್ಲಿ ರವಿವಾರ ಸ್ಫೋಟ ನಡೆದಿದ್ದು, ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಕಟ್ಟಡಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಯಭಾರಿ ಕಚೇರಿಯ ಕಾನ್ಸುಲ‌ರ್ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ಸ್ಫೋಟಕ ಸಾಧನವೊಂದನ್ನು ಬಳಸಲಾಗಿತ್ತೆಂದು ಅವರು ತಿಳಿಸಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆಯಿದೆಯೆಂದು ತನಿಖೆ ಹಾಗೂ ಬೇಹುಗಾರಿಕೆ ವಿಭಾಗದ ಜಂಟಿ ಪೊಲೀಸ್‌ ವರಿಷ್ಠ ಪ್ರೋಡ್ ಲಾರ್ಸೆನ್ ತಿಳಿಸಿದ್ದಾರೆ.
ಈ ಕೃತ್ಯದ ಹಿಂದಿರುವವರನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯನಡೆಸುತ್ತಿದ್ದರಾದರೂ ಇನ್ನೂ ಪತ್ತೆಯಾಗಿಲ್ಲವೆಂದು ಲಾರ್ಸೆನ್ ಹೇಳಿದ್ದಾರೆ.
ಇರಾನ್‌ನಲ್ಲಿ ಅಮೆರಿಕವು ನಡೆಸುತ್ತಿರುವ ಯುದ್ಧಕ್ಕೂ, ಈ ಸ್ಫೋಟ ಘಟನೆಗೂ ನಂಟಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದೆಂದು ಒಪ್ಪೋದ ತನಿಖಾಧಿಕಾರಿಗಳು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *