ಆಸ್ಕರ್ ವಿಜೇತ ನಟನ ಮೇಲೆ ಅಪ್ರಾಪ್ತೆಯರು ಲೈಂಗಿ*ಕ ಕಿರುಕುಳ ಆರೋಪ! ಹಾಲಿವುಡ್ ದಿಗ್ಭ್ರಮೆ

ನವದೆಹಲಿ: ಬಣ್ಣದ ಲೋಕದಲ್ಲಿ ಕಾಸ್ಟಿಂಗ್ ಕೌಚ್‌ನಂತಹ ಪಿಡುಗು ಇಂದಿಗೂ ಆಗಾಗ ಕೇಳಲು ಸಿಗುತ್ತದೆ. ಈ ಬಗ್ಗೆ ಕೆಲವರು ಮುಕ್ತವಾಗಿ ಮಾತನಾಡುತ್ತಾರೆ. ಇನ್ನು ಕೆಲವರು ಹಿಂಜರಿಯುತ್ತಾರೆ.

ಖ್ಯಾತ ನಟನೊಬ್ಬನ ವಿರುದ್ಧ ಅಪ್ರಾಪ್ತೆ ಸೇರಿ 9 ಮಹಿಳೆಯರು ಅನುಚಿತ ವರ್ತನೆ ಸೇರಿದಂತೆ ಲೈಂಗಿ*ಕ ಕಿರುಕುಳದ ಆರೋಪವನ್ನು ಮಾಡಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ನಟ ಜೇರೆಡ್ ಲೆಟೊ (Actor Jared Leto) ಅವರ ವಿರುದ್ಧ ಈ ಗಂಭೀರವಾದ ಆರೋಪವನ್ನು ಮಾಡಲಾಗಿದೆ.
53 ವರ್ಷದ ಹಾಲಿವುಡ್ ನಟ ಜೇರೆಡ್ ವಿರುದ್ಧ ಈ ಹಿಂದೆಯೇ ಇಂತಹ ಆರೋಪಗಳನ್ನು ಮಾಡಿದ್ದರೂ, ಈಗ ಬಹಿರಂಗವಾಗಿ ಮಹಿಳೆಯರು ಆರೋಪವನ್ನು ಮಾಡಿದ್ದು, ಹಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ಸಂದರ್ಶನವೊಂದರಲ್ಲಿ ಮಹಿಳೆಯರು ನಟನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.
ನಟನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದಾಗ ತಾವು ತುಂಬಾ ಚಿಕ್ಕವರಾಗಿದ್ದೆವು ಎಂದು ಆರೋಪ ಮಾಡಿರುವ ಮಹಿಳೆಯರು ಹೇಳಿದ್ದಾರೆ.
2008ರಲ್ಲಿ 16 ವರ್ಷ ವಯಸ್ಸಿನ ಮಾಡೆಲ್ ಆಗಿದ್ದ ಒಬ್ಬಾಕೆ, ಲೆಟೊ ಅವರ ಸ್ಟುಡಿಯೋಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರು ತನ್ನ ಜತೆ ಅಸಭ್ಯವಾಗಿ ವರ್ತಿಸಿದ್ದರು. ಇದಲ್ಲದೆ, ನ*ಗ್ನವಾಗಿ ಕಾಣಿಸಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಲೆಟೊ ಲಾಸ್ ಏಂಜಲೀಸ್‌ನ ಕೆಫೆಯಲ್ಲಿ ತನ್ನನ್ನು ಸಂಪರ್ಕಿಸಿದಾಗ ತನಗೆ 16 ವರ್ಷ ವಯಸ್ಸಾಗಿತ್ತು. ವಾರಗಳ ಫೋನ್ ಕರೆಗಳನ್ನು ಮಾಡುತ್ತಲೇ ಇದ್ದರು. ಪಾರ್ಟಿಗೆ ಬರುವುದಿಲ್ಲವೆಂದು ಹೇಳಿದಾಗ, ಅವರು ಫೋನ್ ಮಾಡಿ ಲೈಂಗಿ*ಕವಾಗಿ ಮಾತನಾಡುತ್ತಿದ್ದರು ಎಂದು ಮತ್ತೊಬ್ಬ ಮಹಿಳೆ ಆರೋಪಿಸಿದ್ದಾರೆ.
ಲೆಟೊ ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಅಸಹ್ಯ ಪ್ರಶ್ನೆಗಳನ್ನು ಕೇಳಿದ್ದರು. 18 ವರ್ಷ ತುಂಬಿದಾಗ ಅವರು ನನ್ನ ಮುಂದೆಯೇ ಹಸ್ತಮೈಥುನ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಬಹಿರಂಗ ಆರೋಪಗಳ ನಡುವೆ ನಟ ಮತ್ತು ಅವರ ಪ್ರತಿನಿಧಿಗಳು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಕಳೆದ ತಿಂಗಳು ಡಿಜೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ 2012ರ ಫೇಸ್‌ಬುಕ್ ಸ್ಟೇಟಸ್ ನ್ನು ಮರುಪೋಸ್ಟ್ ಮಾಡಿದ ನಂತರ ಈ ಆರೋಪಗಳು ಬೆಳಕಿಗೆ ಬಂದಿದ್ದವು. ಅದರಲ್ಲಿ ನಾನು ಲೆಟೊ 17 ವರ್ಷದವಳಿದ್ದಾಗ ಲೆಟೋ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು.
ಜೇರೆಡ್ ಲೆಟೊ ಹಾಲಿವುಡ್‌ನ ಖ್ಯಾತ ನಟರಲ್ಲಿ ಒಬ್ಬರು. ‘ಡಲ್ಲಾಸ್ ಬಯರ್ಸ್ ಕ್ಲಬ್’ ಚಿತ್ರದಲ್ಲಿ ಟ್ರಾನ್ಸ್‌ವುಮನ್ ಪಾತ್ರಕ್ಕಾಗಿ ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮುಂದೆ ಅವರು ‘ಟ್ರಾನ್ ಅರೆಸ್’ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಇದೇ ವರ್ಷದ ಅಕ್ಟೋಬರ್ 10 ರಂದು ರಿಲೀಸ್ ಆಗಲಿದೆ.
