ದಾನಿತ ಶವಗಳಿಂದ ಅಂಗಾಂಗ ಕಳ್ಳತನ: ಹಾರ್ವರ್ಡ್‌ನ ಶವಗಾರದ ಭೀಕರ ದುಷ್ಕೃತ್ಯ ಬಹಿರಂಗ

ವಾಷಿಂಗ್ಟನ್: ಶವಗಳ ಶಿರ, ಮಿದುಳು, ಚರ್ಮ ಮುಂತಾದ ಅಂಗಾಂಗಗಳನ್ನು ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾಗಿ ಅಮೆರಿಕದ ಹಾರ್ವರ್ಡ್ ವೈದ್ಯಕೀಯ ಕಾಲೇಜಿನ ಶವಗಾರದ ಮಾಜಿ ವ್ಯವಸ್ಥಾಪಕ ತಪ್ಪೊಪ್ಪಿಕೊಂಡಿದ್ದಾನೆ.
2018ರಿಂದ 2020ರ ಅವಧಿಯಲ್ಲಿ ವೈದ್ಯಕೀಯ ಸಂಶೋಧನೆಗೆಂದು ದಾನ ಮಾಡಲಾದ ಶವಗಳ ಅಂಗಗಳನ್ನು ಕದ್ದು ಮಾರಿದ್ದಾಗಿ ಪೆನ್ಸಿಲ್ವೇನಿಯಾ ಕೋರ್ಟ್‌ನಲ್ಲಿ ದೋಷಿಯಾದ ಸೆಡ್ರಿಕ್ ಲಾಡ್ಜ್ ತಪ್ಪೊಪ್ಪಿಕೊಂಡಿದ್ದಾನೆ
ಲಾಡ್ಜ್ ಸೇರಿದಂತೆ, ಆತನಿಗೆ ಸಹಕರಿಸಿದ್ದ ಪತ್ನಿ ಹಾಗೂ ಅಪರಾಧ ಸಾಬೀತಾದ ಅಂಗಾಂಗ ಖರೀದಿದಾರರಿಗೆ ಶಿಕ್ಷೆ ಪ್ರಮಾಣ ಘೋಷಣೆಯಾಗಬೇಕಿದೆ