“ಆಪರೇಷನ್ ಸಿಂದೂರ”: ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನಲ್ ಮೀಮ್‌ಗಳು

ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ “ಆಪರೇಷನ್ ಸಿಂದೂರ’ ಕಾರ್ಯಾಚರಣೆಗೆ ಸಾಮಾಜಿಕ ಮಾಧ್ಯಮ ಗಳಲ್ಲಿ ಭಿನ್ನ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಕಡೆ ದೇಶ ಭಕ್ತಿಯ ಸಂದೇಶಗಳು ಹರಿದಾಡುತ್ತಿದ್ದರೆ, ಮತ್ತೊಂದೆಡೆ ಈ ಕಾರ್ಯಾಚರಣೆ ಯನ್ನು ಹಾಸ್ಯಾಸ್ಪದವಾಗಿಯೂ ಚಿತ್ರಿ ಸುವ ಮೀಮ್‌ಗಳು ಹರಿದಾಡಿವೆ.
ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀ ಕಾರವಾಗಿ ಭಾರತ ಕೈಗೊಂಡ ಈ ಕ್ರಮ ವನ್ನು ಅನೇಕರು ಬೆಂಬಲಿಸುತ್ತಿದ್ದು, ಸೈನ್ಯದ ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ಟ್ವಿಟರ್, ಫೇಸ್‌ಬುಕ್ ಮತ್ತು ಇನ್ ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ #OperationSindoor ಹ್ಯಾಶ್‌ಟ್ಯಾಗ್‌ಗಳ ಅಡಿಯಲ್ಲಿ ಸಾವಿರಾರು ಮೀಮ್‌ಗಳು ಹಂಚಿಕೆಯಾಗುತ್ತಿವೆ. ಈ ಮೀಮ್‌ಗಳಿಗೆ ಪ್ರಚಲಿತ ರಾಜಕೀಯ ಘಟನೆಗಳು, ಚಲನಚಿತ್ರಗಳ ತುಣುಕು ಗಳು ಮತ್ತು ಹಾಸ್ಯ ಸನ್ನಿವೇಶಗಳನ್ನು ಬಳಸಿಕೊಳ್ಳಲಾಗಿದೆ.