ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನದ 6 ಯುದ್ಧ ವಿಮಾನ ನಾಶ

ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತದ ಪರಾಕ್ರಮದ ಬಗ್ಗೆ ವಾಯುಪಡೆ ಮುಖ್ಯಸ್ಥ ಎ.ಪಿ.ಸಿಂಗ್ ಮಾತನಾಡಿದ್ದಾರೆ. ಪಾಕಿಸ್ತಾನದ 6 ಯುದ್ಧ ವಿಮಾನಗಳನ್ನು ನಾಮಾವಶೇಷ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಪಾಕಿಸ್ತಾನದ ಐದು ಯುದ್ಧ ವಿಮಾನಗಳು ಮತ್ತು ವಾಯುಗಾಮಿ ಕಣ್ಗಾವಲುಗಾಗಿ ವಿನ್ಯಾಸಗೊಳಿಸಲಾದ ಮತ್ತೊಂದು ವಿಮಾನವನ್ನು ನಾಶಪಡಿಸಿದವು ಎಂದು ಎಪಿ ಸಿಂಗ್ ದೃಢಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಏರ್ ಚೀಫ್ ಮಾರ್ಷಲ್ ಎಲ್‌ಎಂ ಕತ್ರೆ ಉಪನ್ಯಾಸದಲ್ಲಿ ಮಾತನಾಡಿದ ಅವರು, ಮೇ 10 ರಂದು ಭಾರತ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಜಾಕೋಬಾಬಾದ್ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಕೆಲವು ಅಮೇರಿಕಾ ನಿರ್ಮಿತ ಎಫ್ -16 ಜೆಟ್‌ಗಳು ನಾಶಪಡಿಸಿವೆ ಎಂದು ಹೇಳಿದ್ದಾರೆ.
ಮೂರು ದಿನಗಳ ಯುದ್ಧದ ನಂತರ, ಭಾರತ ಹಲವು ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದರಿಂದ, ಅಂತಿಮವಾಗಿ ಪಾಕಿಸ್ತಾನವು ಭಾರತದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಕರೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.
ಎಪಿ ಸಿಂಗ್ ಹೇಳಿದ ಪ್ರಮುಖ ಅಂಶಗಳು ಏನು?
* ಆಪರೇಷನ್ ಸಿಂಧೂರದಲ್ಲಿ ಭಾರತ ಪಾಕಿಸ್ತಾನದ ಕನಿಷ್ಠ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ.
* ವಾಯುಗಾಮಿ ಕಣ್ಗಾವಲುಗಾಗಿ ವಿನ್ಯಾಸಗೊಳಿಸಲಾದ ಮತ್ತೊಂದು ವಿಮಾನ ನಾಶ ಮಾಡಿದೆ. ಇದನ್ನು ಸುಮಾರು 300 ಕಿಲೋಮೀಟರ್ ದೂರದಿಂದ ನಾಶಪಡಿಸಿದೆ. ಇದು ಗಾಳಿಯ ಮೇಲ್ಮೈಯಿಂದ ಮಾಡಿದ ಅತಿದೊಡ್ಡ ದಾಳಿಯಾಗಿದೆ.
* ಶಾಹ್‌ಬಾಜ್ ಜಕಾಬಾಬಾದ್ ಏರ್‌ಫೀಲ್ಡ್ ಮೇಲೆ ದಾಳಿ ನಡೆಸಿ ಈ-16 ಹ್ಯಾಂಗರ್‌ನ ಅರ್ಧ ಭಾಗವನ್ನು ನಾಶಪಡಿಸಲಾಗಿದೆ. ಅದರಲ್ಲಿ ಕೆಲವು ವಿಮಾನಗಳು ಇದ್ದವು ಎಂದು ಭಾವಿಸಲಾಗಿದೆ.
* ಇದಲ್ಲದೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳಾದ ಮುರಿದ್ ಮತ್ತು ಚಕ್ಲಾಲಾದಲ್ಲಿ ಕನಿಷ್ಠ ಆರು ರೇಡಾರ್‌ಗಳು (ಕೆಲವು ದೊಡ್ಡವು, ಕೆಲವು ಸಣ್ಣವು) ನಾಶಪಡಿಸಿದೆ.
* S-400 ಸಿಸ್ಟಮ್ ಆಪರೇಷನ್ ನಲ್ಲಿ ಗೇಮ್-ಚೇಂಜರ್ ಆಗಿತ್ತು, ಅವರು ನಮ್ಮ ವ್ಯವಸ್ಥೆ ಭೇಧಿಸಲು ಸಾಧ್ಯವಾಗಲಿಲ್ಲ.
* ನಾವು ಮಾಡಿದ ನಿರ್ದಿಷ್ಟ ದಾಳಿಗೆ ಸ್ಯಾಟಲೈಟ್ ದೃಶ್ಯಗಳ ಜೊತೆಗೆ ಸ್ಥಳೀಯ ಮಾಧ್ಯಮಗಳ ವರದಿಗಳಿದೆ
