Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಡಬಲ್ ಮೀನಿಂಗ್, ಹುಡುಗಿಯರನ್ನು ರೇಗಿಸಿದರೆ ಮಾತ್ರ ಜನಪ್ರಿಯತೆ”: ರಿಯಾಲಿಟಿ ಶೋ ಬಗ್ಗೆ ಮುತ್ತುರಾಜು ಶಾಕಿಂಗ್‌ ಹೇಳಿಕೆ!

Spread the love

ಮನರಂಜನೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅತ್ಯುತ್ತಮವಾದ ಮನರಂಜನೆ ನೀಡುವ ಕಾರಣಕ್ಕೆ ವಿವಿಧ ಟಿವಿಗಳಲ್ಲಿ ಉತ್ತಮ ಶೋಗಳನ್ನು ಪ್ರಸಾರ ಮಾಡಲಾಗುತ್ತದೆ. ಅದರಲ್ಲೂ ಕೆಲವು ವಾಹಿನಿಗಳಲ್ಲಿ ನಟನೆ, ನೃತ್ಯ ಹಾಗೂ ವಿವಿಧ ಪ್ರತಿಭೆ ಅನಾವರಣಕ್ಕೆ ಹೊಸ ಹೊಸ ಟ್ಯಾಲೆಂಟ್‌ಗಳಿಗೆ ಅವಕಾಶ ನೀಡಲಾಗುತ್ತದೆ.

ಆದರೆ ಟಿವಿಯಲ್ಲಿ ಕಾಣಿಸಿಕೊಂಡ ಎಲ್ಲರೂ ಸಹ ಫೇಮಸ್‌ ಆಗುವುದಿಲ್ಲ.ಬದಲಾಗಿ ಕೆಲವೇ ಕೆಲವರು ಮಾತ್ರ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ.

ಹೌದು, ಕನ್ನಡ ಚಾಲನ್‌ಗಳಲ್ಲಿ ಪ್ರಸಾರವಾಗುವ ಸಾಕಷ್ಟು ರಿಯಾಲಿಟಿ ಶೋಗಳ ಬಗ್ಗೆ ಆಗಾಗ್ಗೆ ಶಾಕಿಂಗ್‌ ವಿಚಾರ ಹೊರ ಬೀಳುತ್ತಲೇ ಇರುತ್ತದೆ. ಈ ನಡುವೆ ಕಾಮಿಡಿ ಕಿಲಾಡಿಯಲ್ಲಿ ಮಿಂಚಿದ್ದ ಮುತ್ತುರಾಜು ( Mutturaju) ಅವರು ಎಸ್‌ಎಸ್‌ಟಿವಿ ಎಂಬ ಯೂಟ್ಯೂಬ್‌ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಅಚ್ಚರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇಂತವರು ಮಾತ್ರ ರಿಯಾಲಿಟಿ ಶೋನಲ್ಲಿ ಬೆಳಿತಾರೆ

ರಿಯಾಲಿಟಿ ಶೋ ನಮಗೆ ಎಲ್ಲವನ್ನೂ ನೀಡುತ್ತದೆ. ಎಲ್ಲೋ ಇದ್ದ ನಮ್ಮನ್ನು ಮುಖ್ಯ ವಾಹಿನಿಗೆ ತರುತ್ತದೆ. ಇದಾದ ನಂತರ ನಮಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂದು ಹೇಳಿದ್ದಾರೆ. ಅಲ್ಲದೆ ಕೆಲವರು ಮಾತ್ರ ಯಾಕೆ ಫೇಮಸ್‌ ಆಗಿದ್ದಾರೆ ಅನ್ನೋ ಮಾಹಿತಿಯನ್ನೂ ಸಹ ತಿಳಿಸಿದ್ದಾರೆ. ನಾನು ಸಾಕಷ್ಟು ಸಿನಿಮಾಗಳಲ್ಲಿ ಹಾಗೂ ಶೋಗಳಲ್ಲಿ ಮಾಡಿದ್ದೇನೆ. ಈವರೆಗೂ ಸಹ ನಾನು ಯಾವುದೇ ಅವಕಾಶ ಕೇಳಲು ಹೋಗುವುದಿಲ್ಲ. ಅವರು ಕರೆದರೆ ಮಾತ್ರ ಹೋಗಿ ನಟನೆ ಮಾಡುತ್ತೇನೆ ಎಂದಿದ್ದಾರೆ.

ಜನರು ಈಗ ಕಂಟೆಂಟ್‌ ಬೇಸ್ಡ್‌ ವಿಡಿಯೋಗಳನ್ನು ನೋಡುತ್ತಾರೆ, ಹುಡುಗಿಯನ್ನು ರೇಗಿಸುವ ಹಾಗೆ ಮಾಡಿದರೆ ನೋಡುತ್ತಾರೆ, ಏನಾದರೂ ಡಬಲ್‌ ಮೀನಿಂಗ್‌ ಇದ್ದರೆ ನೋಡುತ್ತಾರೆ.ಯಾವುದೋ ಒಂದು ರೈಮಿಂಗ್‌ ಇಟ್ಟುಕೊಂಡು ಕಾಮಿಡಿ ಮಾಡಿದರೆ ಅದನ್ನು ನೋಡುತ್ತಾರೆ. ಈ ಮೂಲಕ ಸಣ್ಣ ಸಣ್ಣ ವಿಚಾರದಿಂದ ಅವರು ಬೇಗ ಆಕರ್ಷಿತರಾಗುತ್ತಾರೆ. ಈ ಮೂಲಕ ಒಂದು ಟ್ರೆಂಡ್‌ ಕ್ರಿಯೇಟ್‌ ಆಗುತ್ತದೆ. ಅದಕ್ಕೆ ಒಂದು ಅಂತ್ಯ ಇರುತ್ತದೆ ಎಂದರು.

ಆದರೆ ನೀವು ನನ್ನನ್ನು ಆರೀತಿ ಸ್ವೀಕಾರ ಮಾಡಲು ಆಗುವುದಿಲ್ಲ. ತಲೆ ಬಳಕೆ ಮಾಡಿದರೆ ಇದರ ಹತ್ತರಷ್ಟು ನಾನು ಮಾಡುತ್ತೇನೆ. ಆದರೆ, ನನಗೆ ಜವಾಬ್ದಾರಿ ಇದೆ, ಇದಕ್ಕಿಂತ ಹೆಚ್ಚಾಗಿ ನನಗೆ ಬದುಕಿನ ಉದ್ದೇಶ ಮುಖ್ಯ ಎಂದಿದ್ದಾರೆ. ಸಿನಿಮಾ ಮಾಡುವುದೇ ಮುಖ್ಯವೇ, ಕಲಾವಿದ ಆಗುವುದೇ ಮುಖ್ಯವೇ ಎಂದರೆ ನಾನು ಖಂಡಿತಾ ಇಲ್ಲ ಎಂದು ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ನಟರಾಗಿ ಬಂದು ರಂಜಿಸುವುದಲ್ಲ, ಬದಲಾಗಿ ಎಚ್ಚರಿಸುವುದು ಎಂದು ಹೇಳಿರುವ ಅವರು, ನಾನು ಯಾವ ರೀತಿ ಆದರೂ ಬದುಕಬಲ್ಲೆ. ನನ್ನ ಮನಸ್ಸಿಗೆ , ಆತ್ಮಕ್ಕೆ ಮೋಸ ಮಾಡಿಕೊಂಡು ನಾನು ದೊಡ್ಡ ಮಟ್ಟದಲ್ಲಿ ಬೆಳೆಯಬಹುದು. ಆದರೆ ಆ ರೀತಿ ಮಾಡುವುದಿಲ್ಲ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *