ಆನ್ಲೈನ್ ಗೇಮ್ ಸಾಲದ ಕಾಟ: ಪಾನಿಪುರಿಗೆ ಇಲಿ ಪಾಶಾಣ ಬೆರೆಸಿ ವಿದ್ಯಾರ್ಥಿ ಆತ್ಮಹತ್ಯೆ

ಭಟ್ಕಳ: ರಾಜ್ಯದಲ್ಲಿ ಆನ್ಲೈನ್ ಗೇಮ್ ಚಟಕ್ಕೆ ಮತ್ತೊಂದು ಬಲಿಯಾಗಿದೆ. ಮೊಬೈಲ್ ನಲ್ಲಿ ಆನ್ಲೈನ್ ಗೇಮ್ ಆಡಿ ಹಣ ಕಳೆದುಕೊಂಡ ಯುವಕ ಮಹ್ಮದ್ ನಿಹಾಲ್ (19 ವರ್ಷ) ಪಾನಿಪುರಿಗೆ ಇಲಿ ಪಾಶಾಣ ಬೆರೆಸಿ ತಿಂದು ಸಾವನ್ನಪ್ಪಿದ್ದಾನೆ.
ಭಟ್ಕಳದ ಮಹ್ಮದ್ ನಿಹಾಲ್ ಕಾಲೇಜು ವಿದ್ಯಾರ್ಥಿಯಾಗಿದ್ದು ಅತಿಯಾಗಿ ಮೊಬೈಲ್ ಬಳಕೆಗೆ ಅಡಿಕ್ಟ್ ಆಗಿದ್ದ ಎನ್ನಲಾಗಿದೆ.ಈ ವೇಳೆ ಕಳೆದ ಮೂರು ವರ್ಷಗಳಿಂದ ಆನ್ ಲೈನ್ ನಲ್ಲಿ ಹಣ ಹೂಡಿಕೆ ಮಾಡಿ ಮೊಬೈಲ್ ಗೇಮ್ ಆಡುವುದನ್ನು ಚಟ ಅಂಟಿಸಿಕೊಂಡಿದ್ದ ಎನ್ನಲಾಗಿದೆ.
ಹೀಗಾಗಿ ಅತಿಯಾದ ಸಾಲದ ಸುಳಿಗೆ ಸಿಲುಕಿ ಪಾನಿಪುರಿಯರಲ್ಲಿ ಇಲಿ ಪಾಶಾಣ ಹಾಕಿ ತಿಂದಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.