Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆನ್‌ಲೈನ್ ಫುಡ್ ಲವರ್ಸ್‌ಗೆ ಬರೆ: ಜೊಮಾಟೊ ಪ್ಲಾಟ್‌ಫಾರ್ಮ್ ಫೀ 14.90 ರೂ.ಗೆ ಏರಿಕೆ; ಸ್ವಿಗ್ಗಿಗೆ ಸರಿಸಮನಾದ ದರ ಪಟ್ಟಿ.

Spread the love

ನವದೆಹಲಿ: ಫುಡ್ ಡೆಲಿವರಿ ಕಂಪನಿಯಾದ ಜೊಮಾಟೊ ತನ್ನ ಪ್ಲಾಟ್​​ಫಾರ್ಮ್ ಶುಲ್ಕವನ್ನು (Zomato platform fee) ಏರಿಸಿದೆ. 12.50 ರೂ ಇದ್ದ ಜೊಮಾಟೊ ಪ್ಲಾಟ್​ಫಾರ್ಮ್ ಫೀ ಅನ್ನು 14.90 ರೂಗೆ ಏರಿಸಲಾಗಿದೆ. ಒಬ್ಬ ಗ್ರಾಹಕ ನೀಡುವ ಪ್ರತೀ ಆರ್ಡರ್​ಗೆ ಪ್ಲಾಟ್​ಫಾರ್ಮ್ ಫೀ ಅನ್ವಯ ಆಗುತ್ತದೆ. ಇದರಲ್ಲಿ 2.40 ರೂ ಅಥವಾ ಶೇ. 19.2ರಷ್ಟು ಶುಲ್ಕ ಏರಿಕೆ ಆಗಿದೆ.
ಒಂದು ವರ್ಷದೊಳಗೆ ಜೊಮಾಟೊ ಎರಡನೇ ಬಾರಿ ತನ್ನ ಪ್ಲಾಟ್​ಫಾರ್ಮ್ ಫೀ ಏರಿಸಿರುವುದು. 2025ರ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಳ ಮಾಡಲಾಗಿತ್ತು. ಈ ಪ್ಲಾಟ್​ಫಾರ್ಮ್ ಫೀ ಮೇಲೆ ಜಿಎಸ್​ಟಿ ಕೂಡ ಅನ್ವಯ ಆಗುತ್ತದೆ. ಎಲ್​ಪಿಜಿ ಬೆಲೆ ಏರಿಕೆಯ ಬಿಸಿಯಲ್ಲಿರುವ ಗ್ರಾಹಕರಿಗೆ ಈಗ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್​ನಲ್ಲೂ ದರ ಏರಿಕೆಯ ಶಾಕ್ ಸಿಗಲಿದೆ.ಎರಡನೇ ಅತಿದೊಡ್ಡ ಫುಡ್ ಡೆಲಿವರಿ ಆ್ಯಪ್ ಆಗಿರುವ ಸ್ವಿಗ್ಗಿಯಲ್ಲಿ ಪ್ಲಾಟ್​ಫಾರ್ಮ್ ಫೀ 14.99 ರೂ ಇದೆ. ಮೂರನೇ ಅತಿದೊಡ್ಡ ಫುಡ್ ಡೆಲಿವರಿ ಆ್ಯಪ್ ಆದ ಮ್ಯಾಜಿಕ್​ಪಿನ್​ನ ಪ್ಲಾಟ್​ಫಾರ್ಮ್ ಫೀ 14.20 ರೂ ಇದೆ. ಸ್ವಿಗ್ಗಿ ಮತ್ತು ಜೊಮಾಟೊ ಬಹುತೇಕ ಸಮಾನ ಪ್ಲಾಟ್​ಫಾರ್ಮ್ ಫೀ ಹೊಂದಿವೆ. ಮ್ಯಾಜಿಕ್​ಪಿನ್ ಸ್ವಲ್ಪ ಕಡಿಮೆ ಶುಲ್ಕವನ್ನು ವಿಧಿಸುತ್ತಿದೆ.
ಫುಡ್ ಡೆಲಿವರಿ ಪ್ಲಾಟ್​ಫಾರ್ಮ್​ಗಳು ಗ್ರಾಹಕರಿಗೆ ಯಾವೆಲ್ಲಾ ಶುಲ್ಕ ವಿಧಿಸುತ್ತವೆ?
ಪ್ಲಾಟ್​ಫಾರ್ಮ್ ಫೀ
ಡೆಲಿವರಿ ಪಾರ್ಟ್ನರ್ ಫೀ
ಜಿಎಸ್​ಟಿ
ರೆಸ್ಟೋರೆಂಟ್ ಪ್ಯಾಕಿಂಗ್ ಚಾರ್ಜಸ್
ಕೆಲ ಪ್ಲಾಟ್​ಫಾರ್ಮ್​ಗಳು ಬೇರೆ ಶುಲ್ಕ ಹಾಕಬಹುದು. ಉದಾಹರಣೆಗೆ, ಜೊಮಾಟೊ ಸಂಸ್ಥೆ ಫೀಡಿಂಗ್ ಇಂಡಿಯಾ ಸ್ಕೀಮ್​ಗೆ ಡೊನೇಶನ್ ಆಗಿ ಪ್ರತೀ ಆರ್ಡರ್​ಗೆ 4 ರೂ ಸಂಗ್ರಹಿಸುತ್ತದೆ. ಹಾಗೆಯೇ, ಸರ್ಜಿಂಗ್ ಪ್ರೈಸ್ ಅನ್ನೂ ವಿಧಿಸುತ್ತವೆ. ಮೇಲೆ ತಿಳಿಸಿದ ನಾಲ್ಕು ಶುಲ್ಕಗಳಲ್ಲಿ ಜಿಎಸ್​ಟಿಯು ಸರ್ಕಾರಕ್ಕೆ ಹೋಗುತ್ತದೆ. ರೆಸ್ಟೋರೆಂಟ್ ಪ್ಯಾಕಿಂಗ್ ಶುಲ್ಕವು ಆಯಾ ರೆಸ್ಟೋರೆಂಟ್​ಗೆ ಸಂದಾಯವಾಗುತ್ತದೆ.ಇದರ ಜೊತೆಗೆ ಫುಡ್ ಡೆಲಿವರಿ ಆ್ಯಪ್​ಗಳು ತಮ್ಮ ರೆಸ್ಟೋರೆಂಟ್ ಪಾರ್ಟ್ನರ್​ಗಳಿಂದ ಕಮಿಷನ್ ಫೀಸ್ ಕೂಡ ಸಂಗ್ರಹಿಸುತ್ತವೆ. ಶೇ. 30ಕ್ಕಿಂತಲೂ ಹೆಚ್ಚಿನ ಕಮಿಷನ್ ಅನ್ನು ರೆಸ್ಟೋರೆಂಟ್​ಗಳು ನೀಡುತ್ತವೆ. ರೆಸ್ಟೋರೆಂಟ್​ಗೆ ಹೋಗಿ ನೀವು 250 ರೂ ಮೊತ್ತದ ತಿಂಡಿಯನ್ನು ಪ್ಯಾಕ್ ಮಾಡಿ ತರಲು ಆಗುವ ವೆಚ್ಚಕ್ಕೆ ಹೋಲಿಸಿದರೆ ಅದೇ ತಿಂಡಿಯನ್ನು ಆ್ಯಪ್ ಮೂಲಕ ತರಿಸಿಕೊಂಡರೆ 350 ರೂಗಿಂತಲೂ ಹೆಚ್ಚು ವೆಚ್ಚವಾಗುತ್ತದೆ.


Spread the love
Share:

administrator

Leave a Reply

Your email address will not be published. Required fields are marked *