ತಿಂಗಳಿಗೆ ಒಂದು ಶನಿವಾರ ಪಾಠವಿಲ್ಲ! – ವಿದ್ಯಾರ್ಥಿಗಳಿಗೆ ‘ಬ್ಯಾಗ್ ರಹಿತ ದಿನ’ ಸಂಭ್ರಮ

ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸಿಹಿಸುದ್ದಿಯೊಂದನ್ನು ನೀಡಿದ್ದು, ಶಾಲೆಗಳಲ್ಲಿ 10 ದಿನಗಳ ‘ಬ್ಯಾಗ್ ರಹಿತ ದಿನ’ ಆಚರಣೆಗೆ ಮಾರ್ಗಸೂಚಿ ಹೊರಡಿಸಿದೆ.
ಹೌದು, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಮಾರ್ಗಸೂಚಿರೂಪಿಸಿದ್ದು, ವಿದ್ಯಾರ್ಥಿಗಳು ಈ 10 ದಿನಗಳಲ್ಲಿ ಪಾಠದ ಬದಲು ಪಕ್ಷೇತರ ಚಟುವಟಿಕೆಗೆಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳಿಗೆ ಪ್ರಕೃತಿ, ತಂತ್ರಜ್ಞಾನ, ಕೈಗಾರಿಕೆ, ಕೌಶಲ್ಯ ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲ ರೀತಿಯ ಅನುಭವ ನೀಡುವ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇಕಿ ಇಲಾಖೆ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ. ಪ್ರತಿ ತಿಂಗಳು ಒಂದು ಶನಿವಾರದಂತೆ 10 ಶೈಕ್ಷಣಿಕ ತಿಂಗಳಿಗೆ 10 ದಿನಗಳಂತೆ ಬ್ಯಾಗ್ರಹಿತ ದಿನ ಆಚರಿಸಲು ಸೂಚಿಸಲಾಗಿದೆ. 6ರಿಂದ 8ನೇ ತರಗತಿಗಳಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿ 10 ದಿನಗಳ ಶನಿವಾರ ಸಂಭ್ರಮ ಆಚರಣೆ ಮಾಡಬೇಕಿದೆ.