Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖಾಸಗಿ ಡೆಂಟಲ್ ಕ್ಲಿನಿಕ್‌ನ ಒಂದು ತಪ್ಪಿನಿಂದ 8 ಜನರ ಮರಣ

Spread the love

ತಮಿಳುನಾಡು: ಖಾಸಗಿ ಡೆಂಟಲ್ ಕ್ಲಿನಿಕ್ ಒಂದರಲ್ಲಿ ಸಲೈನ್ ಬಾಟಲಿಯನ್ನು ಓಪನ್ ಮಾಡಲು ಬಳಸಲಾದ ಅಶುದ್ಧವಾದ ಬ್ಲೇಡ್ ಹಾಗೂ ಆನಂತರದಲ್ಲಿ ಸಲೈನ್ ಬಾಟಲಿಯನ್ನು ಸರಿಯಾಗಿ ಮುಚ್ಚದ ಕಾರಣದಿಂದಾಗಿ ಎಂಟು ಮಂದಿಗೆ ವಿಚಿತ್ರ ಬ್ಯಾಕ್ಟೀರಿಯಾ ಸೋಂಕು ತಗುಲಿ, ಆ ಸೋಂಕು ಮೆದುಳಿಗೆ ಹೋಗಿ ಅವರು ಸಾವಿಗೀಡಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಲ್ಯಾನ್ಸೆಟ್ ಎಂಬ ವೈಜ್ಞಾನಿಕ ಸಂಶೋಧನಾ ವರದಿಗಳ ಮ್ಯಾಗಜಿನ್ ನಲ್ಲಿ ಈ ಸ್ಫೋಟಕ ಸಂಶೋಧನಾ ವರದಿಯನ್ನು ಪ್ರಕಟಿಸಲಾಗಿದೆ. ಸಿಎಂಸಿ ವೆಲ್ಲೂರಿನ ವೈದ್ಯರು, ಐಸಿಎಂಆರ್ ಎನ್‌ಐಇ ವೈದ್ಯರು ಹಾಗೂ ತಮಿಳುನಾಡಿನ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿದ ಸಂಶೋಧನೆಯಲ್ಲಿ ಈ ವಿಚಾರವನ್ನು ಡಾ. ಏಂಜೆಲ್ ಮಿರಾಕ್ಲಿನ್ ತಿರುಜ್ಞಾನಕುಮಾರ್ ಎಂಬ ವಿಜ್ಞಾನಿಯು ಮಂಡಿಸಿದ್ದಾರೆ.

ಏನಿದು ಘಟನೆ?

2023ರಲ್ಲಿ ತಮಿಳುನಾಡಿನ ತಿರುಪತ್ತೂರ್ ಜಿಲ್ಲೆ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಸುಮಾರು ಮಂದಿಗೆ ನ್ಯೂರೋಮೆಲಿಯೋಡಯೋಸಿಸ್ ಎಂಬ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದರು. ಒಟ್ಟು 21 ಮಂದಿಗೆ ಇಂಥ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 17 ಮಂದಿ ತಿರುಪತ್ತೂರ್ ಜಿಲ್ಲೆಯವರು, ಇಬ್ಬರು ರಾಣಿಪೇಟ್ ನವರು ಹಾಗೂ ತಿರುವಣ್ಣಾಮಲೈ ಹಾಗೂ ಕೃಷ್ಣಗಿರಿ ಜಿಲ್ಲೆಯವರು.

ನ್ಯೂರೋಮೆಲಿಯೋಡಯೋನಿಸ್ ಎಂಬ ಈ ವಿಚಿತ್ರ ಕಾಯಿಲೆಯಿಂದಾಗಿ ಅವರ ಮೆದುಳಿನ ಮೇಲೆ ಬ್ಯಾಕ್ಟೀರಿಯಾ ದಾಳಿಯಾಗಿರುವುದು ಪತ್ತೆಯಾಗಿತ್ತು. ಅವರಲ್ಲಿ ತಲೆನೋವು ಇತ್ಯಾದಿ ಸೋಂಕು ಕಾಣಿಸಿಕೊಂಡ 15ರಿಂದ 16 ದಿನಗಳಲ್ಲೇ ಅವರು ಸಾವಿಗೀಡಾಗಿದ್ದರು. ಈ 21 ಮಂದಿಗೇ ಏಕೆ ಈ ವಿಚಿತ್ರ ಬ್ಯಾಕ್ಟೀರಿಯಾ ಸೋಂಕು ತಾಕಿತ್ತು ಎಂಬುದನ್ನು ಪತ್ತೆ ಹಚ್ಚಲು ಮುಂದಾದ ವೈದ್ಯರಿಗೆ ಸಿಕ್ಕ ಮಾಹಿತಿಗಳು ವಣಿಯಂಬಾಡಿಯಲ್ಲಿರುವ ಡೆಂಟಲ್ ಕ್ಲಿನಿಕ್ ಒಂದರ ಸುಳಿವು ನೀಡಿತ್ತು.

ಇವರಲ್ಲಿ ಸುಮಾರು 10 ಮಂದಿ ತಿರುಪತ್ತೂರ್ ಜಿಲ್ಲೆಯ ವಾಣಿಯಂಬಾಡಿ ಎಂಬಲ್ಲಿರುವ ಡೆಂಟಲ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿರುವುದು ತಿಳಿದುಬಂದಿತ್ತು. ಆ ಕ್ಲಿನಿಕ್ ನಲ್ಲಿ ನಡೆಸಲಾದ ಸಂಶೋಧಕರ ತಪಾಸಣೆಯಲ್ಲಿ ಅಲ್ಲಿನ ಸಲೈನ್ ಬಾಟಲಿಗಳಲ್ಲಿ ಬಿ. ಸ್ಯೂಡೋಮುಲ್ಲೈ ಎಂಬ ಬ್ಯಾಕ್ಟೀರಿಯಾ ಪತ್ತೆಯಾಗಿತ್ತು. ಸಲೈನ್ ಬಾಟಲಿಯನ್ನು ನ್ಯೂರೋಮೆಲಿಡೋಯ್ಡೋಸಿಸ್ ಎಂಬ ಶಸ್ತ್ರಚಿಕಿತ್ಸಾ ಉಪಕರಣದಿಂದ ಓಪನ್ ಮಾಡಲಾಗುತ್ತದೆ. ಈ ಉಪಕರಣವನ್ನು ಯಾವಾಗಲೂ ಸ್ಟೈರಲ್ ಮಾಡಿ, ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯಾ ರಹಿತವಾಗಿರುವಂತೆ ನೋಡಿಕೊಳ್ಳಬೇಕು.

ಆದರೆ, ಅಲ್ಲಿ ಈ ಪರಿಕರಗಳು ಅಶುದ್ಧವಾಗಿದ್ದವು. ಅಂಥ ಅಶುದ್ಧ ಉಪಕರಣಗಳಿಂದ ಅಲ್ಲಿನ ಸಲೈನ್ ಬಾಟಲಿಗಳನ್ನು ಓಪನ್ ಮಾಡಲಾಗಿತ್ತಲ್ಲದೆ, ಅವುಗಳನ್ನು ಸರಿಯಾಗಿ ಮುಚ್ಚದೇ ಹಾಗೆಯೇ ಗಾಳಿಗೆ ತೆರೆದು ಬಿಟ್ಟಿದ್ದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಿ ಅವು ಬೇರೆ ಕಡೆಗೆ ಹರಡಲು ಆರಂಭವಾಗಿದ್ದವು.

ಆ ಡೆಂಟಲ್ ಕ್ಲಿನಿಕ್ ಗೆ ಹೋಗಿಬಂದವರಿಗೆ ಇದೇ ಅಶುದ್ಧ ಸಲೈನ್ ನೀರಿನಿಂದ ಬಾಯಿ ತೊಳೆಯಲಾಗುತ್ತಿತ್ತು. ಅಂಥ ಅಶುದ್ಧ ಸಲೈನ್ ದ್ರಾವಣದಿಂದ ಬಾಯಿ ತೊಳೆಸಿಕೊಂಡವರ ದೇಹವನ್ನು ಪ್ರವೇಶಿಸಿ ಬಿ. ಸ್ಯೂಡೋಮುಲ್ಲೈ ಬ್ಯಾಕ್ಟೀರಿಯಾ ನರಗಳ ಮೂಲಕ ಮೆದುಳನ್ನು ಸೇರಿ ಅಲ್ಲಿ ಮೆದುಳಿಗೆ ಹಾನಿ ಮಾಡಿ ಅವರು ಸಾವಿಗೀಡಾಗುವಂತೆ ಮಾಡಿದೆ ಎಂದು ಇದರ ಸಂಶೋಧನೆ ನಡೆಸಿರುವ ವೈದ್ಯರ ತಂಡ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *