Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಲ್ಲಾ ಮನೆಗೆ ಒಬ್ಬ ಎಂಜಿನಿಯರ್: ಪಟ್ವಾ ಟೋಲಿಯಿಂದ ಐಐಟಿ ದಾರಿಗೆ ಪ್ರೇರಣೆಯ ಬೆಳಕು

Spread the love

ಬಿಹಾರ : ಬಿಹಾರದ ಒಂದು ಹಳ್ಳಿಯು ‘ಐಐಟಿ ಕಾರ್ಖಾನೆ’ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಏಕೆಂದರೆ ಇಲ್ಲಿಯವರೆಗೆ, ಈ ಹಳ್ಳಿಯಿಂದ ನೂರಾರು ಎಂಜಿನಿಯರ್‌ಗಳು ಹೊರಬಂದಿದ್ದಾರೆ. ಪ್ರತಿ ವರ್ಷ ಇಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಈ ಹಳ್ಳಿಯ ಸಾವಿರಾರು ಮಕ್ಕಳು ಉತ್ತೀರ್ಣರಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಈ ವರ್ಷ ಈ ಹಳ್ಳಿಯ 40 ಮಕ್ಕಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟಕ್ಕೂ ಈ ಗ್ರಾಮದ ಹೆಸರು ‘ಪಟ್ವಾ ಟೋಲಿ’.

ಬಿಹಾರದ ಗಯಾ ಜಿಲ್ಲೆಯಲ್ಲಿ ಪಟ್ವಾ ಟೋಲಿ ಎಂದು ಕರೆಯಲ್ಪಡುವ ನೇಕಾರರ ವಸಾಹತು ಇದೆ. 1991 ರಿಂದ ಈ ಪ್ರದೇಶದಿಂದ ನೂರಾರು ಎಂಜಿನಿಯರ್‌ಗಳು ಹೊರಹೊಮ್ಮಿದ್ದಾರೆ. ಹೌದು, ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನು ಏಪ್ರಿಲ್ 19 ರಂದು ಘೋಷಿಸಲಾಗಿದೆ. ಜೆಇಇ ಮೇನ್ಸ್‌ನಲ್ಲಿ ಅರ್ಹತೆ ಪಡೆದ ಮಕ್ಕಳನ್ನು ಗ್ರಾಮದ ಜನರು ಒಟ್ಟುಗೂಡಿಸಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ಈ ಗ್ರಾಮ ಕಳೆದ 25 ವರ್ಷಗಳಲ್ಲಿ ದೇಶಕ್ಕೆ ಅನೇಕ ಐಐಟಿ ತಜ್ಞರನ್ನು ನೀಡಿದೆ.

ಎಲ್ಲಿಂದ ಆರಂಭವಾಯಿತು?

1991 ರಲ್ಲಿ ಐಐಟಿ ಪಾಸ್ ಮಾಡಿದ ಪಟ್ವಾ ಗ್ಯಾಂಗ್‌ನಲ್ಲಿ ಜಿತೇಂದ್ರ ಪಟ್ವಾ ಮೊದಲಿಗರು. ಅವರು ಐಐಟಿಯಲ್ಲಿ ಪ್ರವೇಶ ಪಡೆದ ಹಳ್ಳಿಯ ಮೊದಲ ವಿದ್ಯಾರ್ಥಿಯಾದರು. ಅವರ ಈ ಸಾಧನೆಯ ನಂತರ, ಇಡೀ ಪ್ರದೇಶದ ಜನರು ಅವರಿಂದ ಪ್ರೇರಿತರಾದರು ಮತ್ತು ಕ್ರಮೇಣ ಇಡೀ ಗ್ರಾಮದಲ್ಲಿ ಎಂಜಿನಿಯರಿಂಗ್ ವಾತಾವರಣ ಸೃಷ್ಟಿಯಾಯಿತು. ಈಗ ಈ ಹಳ್ಳಿಯ ಹೆಚ್ಚಿನ ಮಕ್ಕಳ ಕನಸು ಯಶಸ್ವಿ ಎಂಜಿನಿಯರ್ ಆಗುವುದು. ಪ್ರತಿ ವರ್ಷ ಈ ಗ್ರಾಮದ ಅನೇಕ ವಿದ್ಯಾರ್ಥಿಗಳು ಜೆಇಇ ಉತ್ತೀರ್ಣರಾಗುತ್ತಾರೆ. ಈ ಹಳ್ಳಿಯಲ್ಲಿ ಬಹುತೇಕ ಪ್ರತಿಯೊಂದು ಮನೆಯಲ್ಲೂ ಒಬ್ಬ ಎಂಜಿನಿಯರ್ ಇರುತ್ತಾನೆ ಎಂದು ಹೇಳಲಾಗುತ್ತದೆ.

‘ವೃಕ್ಷ’ ಎಂಬ ಸರ್ಕಾರೇತರ ಸಂಸ್ಥೆ ಈ ಗ್ರಾಮದಲ್ಲಿ ಶಿಕ್ಷಣದ ಚಿತ್ರಣವನ್ನು ಬದಲಾಯಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ. 2013 ರಲ್ಲಿ, ಈ ಸಂಸ್ಥೆಯು ಈ ಪ್ರದೇಶದ ಮಕ್ಕಳನ್ನು ಐಐಟಿಗೆ ಉಚಿತವಾಗಿ ಸಿದ್ಧಪಡಿಸುವ ಕೆಲಸವನ್ನು ಪ್ರಾರಂಭಿಸಿತು. ಇದರಿಂದಾಗಿ, ದುಬಾರಿ ಶುಲ್ಕವನ್ನು ಭರಿಸಲಾಗದ ಈ ಪ್ರದೇಶದ ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಕನಸನ್ನು ನನಸು ಮಾಡಲು ಶುರು ಮಾಡಿದರು.


Spread the love
Share:

administrator

Leave a Reply

Your email address will not be published. Required fields are marked *