ಬೆಂಗಳೂರಿನಲ್ಲಿ ಓಮ್ನಿ ಕಾರು ಕಳ್ಳರ ಗ್ಯಾಂಗ್ ಬಂಧನ: ಟ್ರ್ಯಾಕ್ಟರ್ ಕದಿಯುತ್ತಿದ್ದವರೇ ಈಗ ಹೊಸ ದಂಧೆಗೆ

ಬೆಂಗಳೂರು : ಟ್ರ್ಯಾಕ್ಟರ್ ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದ ಮೇಲೆ ಓಮ್ನಿ ಕಾರನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಧಿತ ಆರೋಪಿಗಳನ್ನು ಬಂಧಿತ ಆರೋಪಿಗಳನ್ನು ಉಮೇಶ್, ತಬ್ರೇಜ್ ಮತ್ತು ಜಬೀರ್ ಖಾನ್ ಎಂದು ಗರುತಿಸಲಾಗಿದೆ.
ಈ ಹಿಂದೆ 2020ರಲ್ಲಿ ಟ್ರ್ಯಾಕ್ಟರ್ ಕಳ್ಳತನ ಕೇಸ್‍ನಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಲಾಗಿತ್ತು. ಜೈಲಿಂದ ಹೊರಬಂದಿದ್ದರು.

ಜೈಲಿನಿಂದ ಬಿಡುಗಡೆಯ ಬಳಿಕ ಮತ್ತೆ ಕಳ್ಳತನಕ್ಕೆ ಇಳಿದ ಆರೋಪಿಗಳು ಟ್ರ್ಯಾಕ್ಟರ್ ಬಿಟ್ಟು ಓಮ್ನಿ ಕಾರನ್ನು ಟಾರ್ಗೆಟ್ ಮಾಡುತ್ತಿದ್ದರು. ಅಲ್ಲದೇ ಮೇ ತಿಂಗಳಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಮ್ನಿ ಕಾರನ್ನು ಕಳ್ಳತನ ಮಾಡಿದ್ದರು.
ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರ ಬಳಿ 12 ಮೌಲ್ಯದ ಓಮ್ನಿ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.